ಅವಿರೋಧವಾಗಿ ಆಯ್ಕೆ


ಲೋಕದರ್ಶನ ವರದಿ

ಹಾವೇರಿ01: ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ನ ಹಾವೇರಿ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಇತ್ತೀಚೆಗೆ ರಾಚೋಟೇಶ್ವರ ಪ.ಪೂ ಕಾಲೇಜಿನಲ್ಲಿ ಸಭೆ ಸೇರಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

 ಘಟಕದ ಗೌರವಾಧ್ಯಕ್ಷರಾಗಿ ನಿವೃತ್ತ ಪ್ರಾಚಾರ್ಯ ಬಿ.ಬಸವರಾಜ, ಅಧ್ಯಕ್ಷರಾಗಿ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಪುಷ್ಪಾ ಶಲವಡಿಮಠ, ಕಾಯರ್ಾಧ್ಯಕ್ಷರಾಗಿ ಗಂಗಾಧರ ನಂದಿ, ಉಪಾಧ್ಯಕ್ಷರಾಗಿ ರೇಣುಕಾ ಮಡಿವಾಳರ, ಕಾರ್ಯದಶರ್ಿಯಾಗಿ ಸಿ.ಎಸ್.ಮರಳಿಹಳ್ಳಿ ಮತ್ತು ಶಿವಬಸಪ್ಪ ಮುದ್ದಿ, ಕೋಶಾಧ್ಯಕ್ಷರಾಗಿ ಎಸ್.ಎಂ ಹಾಲಯ್ಯನವರಮಠ ಮತ್ತು ಮಹೇಶ ಚಿನ್ನಿಕಟ್ಟಿ, ಪತ್ರಿಕಾ ಪ್ರತಿನಿಧಿಯಾಗಿ ತೇಜಶ್ವಿನಿ ಕಾಶೆಟ್ಟಿ ಮತ್ತು ವಾಗೀಶ ಪಾಟೀಲ ಆಯ್ಕೆಯಾಗಿದ್ದಾರೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.