ಗಬ್ಬೆದ್ದು ನಾರುತ್ತಿದೆ ಚಿಂಚಲಿ ಪಟ್ಟಣ

 -ಆನಂದ ಕೋಳಿಗುಡ್ಡೆ

ಚಿಂಚಲಿ 11: ದಕ್ಷಿಣ ಭಾರತದ ಉತ್ತರ ಕನರ್ಾಟಕ ಹಾಗೂ ಮಹಾರಾಷ್ಟ್ರದ ಅತ್ಯಂತ ಪ್ರಭಾವಿ ಶಕ್ತಿ ದೇವತೆ ಎಂದು ಸುಪ್ರಸಿದ್ದವಾದ ಬೆಳಗಾವಿ ಜಿಲ್ಲೆ ರಾಯಬಾಗ ತಾಲ್ಲೂಕಿನ ಸುಕ್ಷೇತ್ರ ಚಿಂಚಲಿ ಮಾಯಾಕ್ಕಾ ದೇವಿಯ ಜಾತ್ರೆಯು ಭಾರತ ಹುಣ್ಣಿಮೆಯ ಹಸ್ತಾ ನಕ್ಷತ್ರದ ಶುಭಗಳಿಗೆಯಲ್ಲಿ ವಿಜೃಂಭಣೆಯಿಂದ ನಡೆಯುತ್ತದೆ. 

ಜಾತ್ರೆಯ ಒಂದು ತಿಂಗಳ ಮುಂಚಿತವಾಗಿ ಬರುವ ಭಕ್ತರಿಗೆ ಸುವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಜಾತ್ರೆಯ ಪೂರ್ವಭಾವಿ ಸಭೆ ಪಟ್ಟಣ ಪಂಚಾಯತಿ ಹಾಗೂ ತಾಲೂಕಾ ಆಡಳಿತ ಅಧಿಕಾರಿಗಳು ನಡೆಸುತ್ತಾರೆ ಅದರಲ್ಲಿ ಜಾತ್ರೆಯ ವ್ಯವಸ್ಥೆಗಳ ಬಗ್ಗೆ ಕ್ರಮಗಳು ತಗೆದುಕೊಳ್ಳವ ಮಾಹಿತಿಗಳು ನೀಡಿದರು ಸಹ ಪಟ್ಟಣ ಪಂಚಾಯತಿ ಚಿಂಚಲಿ ಪಟ್ಟಣದಲ್ಲಿ ಇದ್ದು ಇಲ್ಲದಂತಾಗಿದೆ ಪಟ್ಟಣ ಪಂಚಾಯತ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜಾತ್ರೆಯ ಗಬ್ಬೆದ್ದು ನಾರುವ ಪರಿಸ್ಥಿತಿ ನಿಮರ್ಾಣವಾಗಿದೆ.

ಹೌದು ಶ್ರೀ ಮಾಯಾಕ್ಕಾ ದೇವಿಯ ಜಾತ್ರೆಗೆ ಲಕ್ಷಾಂತರ ಭಕ್ತರು ಬರುವುದರಿಂದ ಅವರುಗಳಿಗೆ ಮೂತ್ರ ಹಾಗೂ ಬಯಲು ಶೌಚಾಲಯವೆ ಗತಿಯಾಗಿದೆ ಇದರಿಂದ ಪಟ್ಟಣದ ಹೊರವಲಯದಲ್ಲಿ ಬಯಲು ಶೌಚಾಲಯವನ್ನು ಬಳಕೆಯಾಗಿರುವುದರಿಂದ ಪಟ್ಟಣವೆ ದುವರ್ಾಸನೆ ಹಿಡಿದಿದೆ ಪಟ್ಟಣ ಪಂಚಾಯತಿಯ ಸಾರ್ವಜನಿಕ ಶೌಚಾಲಯ ಹಾಗೂ ಚರಂಡಿಗಳು ಸ್ವಚ್ಛತೆ ಕ್ರಮ ಕೈಗೊಳ್ಳದೆ ಸಾವಿರಾರೂ ಜನರು ಪರದಾಡುತ್ತಿದ್ದಾರೆ.

ಮುಖ್ಯವಾಗಿ ಪಟ್ಟಣ ಪಂಚಾಯತಿಯಿಂದ ಈ ಜಾತ್ರೆಯಲ್ಲಿ ಪಟ್ಟಣದ ಸುತ್ತ ಗಲಿಜಾಗುವುದು ಸಾಮಾನ್ಯ. ಇದರಿಂದ ಅನೇಕ ರೋಗಗಳು ಹರಡುವದು. ಇದರ ಮುಂಜಾಗೃತ ಕ್ರಮವಾಗಿ ಪಟ್ಟಣ ಪಂಚಾಯತಿಯವರು ಗಲಿಜ ಪ್ರದೇಶದಲ್ಲಿ ಪೌಡರ ಹಾಕದೆ ಹೆಸರಿಗೆ ಸ್ವಲ್ಪ ಪ್ರಮಾಣದಲ್ಲಿ ಪೌಡರ ಬಳಕೆ ಮಾಡುತ್ತಿದ್ದಾರೆ.

  ಮುಖ್ಯಾಧಿಕಾರಿ: ಜಾತ್ರೆಯ ಸಂದರ್ಭದಲ್ಲಿ ಗಲಿಜ ಪ್ರದೇಶದಲ್ಲಿ ಪೌಡರನ್ನು ದೇವಸ್ಥಾನ ಟ್ರಸ್ಟ ಕಮೀಟಿ ನೀಡುತ್ತದೆ ಅವರುಗಳು ಇನ್ನು ಪೂರೈಕೆ ಮಾಡಿಲ್ಲವೆಂದು ಜಾಣಕುರುಡುತನದ ಮಾತನ್ನು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳು ಹೇಳುತ್ತಾರೆ.

  ಸಾರ್ವಜನಿಕರು:  ಪಟ್ಟಣ ಪಂಚಾಯತಕ್ಕಿಂತ ಮುಂಚಿತವಾಗಿ ಗ್ರಾಮ ಪಂಚಾಯತಿಯೇ ಇರುವುದು ಉತ್ತಮವಾಗಿತ್ತು ಗ್ರಾಮ ಪಂಚಾಯತಿಯಿದ್ದಾಗ ಗ್ರಾಮಸ್ಥರು ಸೇರಿಕೊಂಡು ಎಲ್ಲರೂ ಒಂದೊಂದು ಕೆಲಸ ಕಾರ್ಯಗಳನ್ನು ಕೈಗೊಂಡು ಜಾತ್ರೆಯೂ ಒಳ್ಳೆಯ ರೀತಿಯಲ್ಲಿ ಆಚರಣೆ ಮಾಡುತ್ತಿದ್ದರು. ಇವಾಗ ಪಟ್ಟಣ ಪಂಚಾಯತಿ ಆದಾಗಿನಿಂದ ಅಧಿಕಾರಿಗಳು ಆಡಿದೇ ಆಟ ಪ್ರಾರಂಭವಾಗಿದೆ ಹೀಗಾಗಿ ಬೇಲಿಯೇ ಎದ್ದು ಹೊಲ ಮೇಯುತ್ತಿದ್ದೆ. ಅಧಿಕಾರಿಗಳು ಪಟ್ಟಣದ ಹೊರವಲಯದಲ್ಲಿ ಪೌಡರ ಹಾಕದೇ ಪಟ್ಟಣದ ಮಧ್ಯಭಾಗದಲ್ಲಿ ಅಲಲ್ಲಿ ಕಾಟಾಚಾರಕ್ಕೆ ಹಾಕಿ ಫೋಟೋ ಪೋಜಗಳು ನೀಡುತ್ತಿರುವುದರಿಂದ ಸಾರ್ವಜನಿಕರು ಆಕ್ರೋಶವನ್ನು ಮಾಧ್ಯಮದವರ ಮುಂದೆ ವ್ಯಕ್ತಪಡಿಸಿದ್ದಾರೆ.

ಈ ಜಾತ್ರೆಯೂ ಮುಗಿದು ಹೊದಮೇಲೆ ಪಟ್ಟಣದಲ್ಲಿ ವಿವಿಧ ರೋಗಗಳು ಹರಡುವುದು ಖಚಿತ. ಪಟ್ಟಣ ಪಂಚಾಯತಿ ದಿವ್ಯ ನಿರ್ಲಕ್ಷ್ಯದಿಂದ ಪೌಡರನ್ನು ಸೂಕ್ತವಾಗಿ ಬಳಕೆ ಮಾಡದೇ ಇರುವುದರಿಂದ ಮಲೇರಿಯಾ, ಕಾಲರಾ, ಡೆಂಗ್ಯೂ ಹೀಗೆ ವಿವಿಧ ರೋಗಗಳಿಗೆ ಆಹ್ವಾನ ನೀಡುತ್ತಿರುವ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳು. ಹೀಗಾಗಿ ಪಟ್ಟಣದ ಸಾರ್ವಜನಿಕರಲ್ಲಿ ಆತಂಕ ಮನೆಮಾಡುತ್ತಿದ್ದೆ ಇನ್ನಾದರೂ ಈ ಜಾತ್ರೆಯ ಬಗ್ಗೆ ಮೇಲಾಧಿಕಾರಿಗಳು ಸೂಕ್ತವಾದ ಕ್ರಮ ಕೈಗೊಂಡು. ತಕ್ಷಣ ಪಟ್ಟಣವನ್ನು ಸ್ವಚ್ಛತೆ ಕ್ರಮ ಕೂಗೊಂಡು ರೋಗಗಳಿಂದ ಸಾರ್ವಜನಿಕರನ್ನು ಕಾಪಾಡುತ್ತಾರೋ ಕಾದು ನೋಡೋಣ?