ಬೀಜಿಂಗ್, ಜೂನ್ ೩೦; ಭಾರತ- ಚೈನಾ ಗಡಿಯಲ್ಲಿ ಉಭಯ ದೇಶಗಳ ಸೇನಾ ಮುಖಾಮುಖಿಯಲ್ಲಿ ೨೦ ಮಂದಿ ಭಾರತೀಯ ಯೋಧರು ಹುತಾತ್ಮರಾದ ಬೆನ್ನಲ್ಲೇ ಭಾರತದೆಲ್ಲೆಡೆ ಚೈನಾ ವಿರುದ್ದ ಆಕ್ರೋಶ ವ್ಯಕ್ತವಾಗುತ್ತಿದೆ.ಚೈನಾ ನಡೆಸಿರುವ ಗಡಿ ಸಂಘರ್ಷಕ್ಕೆ ಪ್ರತಿಕಾರವಾಗಿ ಭಾರತ ಸರ್ಕಾರ ಚೈನಾ ಸರಕುಗಳು, ಆಪ್ ಗಳನ್ನು ನಿಷೇಧಿಸಬೇಕು ಎಂಬ ಬೇಡಿಕೆಗಳು ದೇಶಾದ್ಯಂತ ಕೇಳಿಬರುತ್ತಿವೆ. ಈ ಕ್ರಮವಾಗಿ ಭಾರತ ಸರ್ಕಾರ ಕೂಡಾ ಚೈನಾದ ೫೯ ಅಪ್ ಗಳ ಮೇಲೆ ನಿಷೇಧ ವಿಧಿಸಿರುವುದಾಗಿ ಸೋಮವಾರ ಪ್ರಕಟಿಸಿದೆ.
ಭಾರತ ಸರ್ಕಾರ ಚೈನಾ ಹೆಸರು ಪ್ರಸ್ತಾಪಿಸದಿದ್ದರೂ ... ಬಹುತೇಕ ಎಲ್ಲ ಆಪ್ ಗಳು ಚೈನಾಗೆ ಸೇರಿದವು ಎಂಬುದರಲ್ಲಿ ಯಾವುದೇ ಅನುಮಾನಗಳಿಲ್ಲ.ಉಹಾತೀತ ಪರಿಣಾಮಗಳ ಬಗ್ಗೆ ಚೈನಾ ಮಂಗಳವಾರ ಸ್ಪಂದಿಸಿದೆ. ಚೈನಾ ಆಪ್ ಗಳನ್ನು ನಿಷೇಧಿಸಿರುವ ಬಗ್ಗೆ ತನ್ನ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತದೆ ಎಂದು ಚೈನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಹೇಳಿದ್ದಾರೆ.ಪ್ರಸ್ತುತ ಪರಿಸ್ಥಿತಿಯನ್ನು ಚೈನಾ ಪರಿಶೀಲಿಸುತ್ತಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಭಾರತ ನಿಷೇಧಿಸಿದ ಆಪ್ ಗಳ ಪಟ್ಟಿಯಲ್ಲಿ ಟಿಕ್ ಟಾಕ್, ಹೆಲೂ, ಯು ಸಿ ಬ್ರೌಜರ್, ಶೇರ್ ಇಟ್ ಮತ್ತಿತರ ಜನಪ್ರಿಯ ಆಪ್ ಗಳು ಕೂಡಾ ಸೇರಿವೆ.