ಸರ್ಕಾರಿ ಗೌರವಗಳೊಂದಿಗೆ ನಾಳೆ ಚಿಮೂ ಅಂತ್ಯಕ್ರಿಯೆ : ಸಿಎಂ

ಬೆಂಗಳೂರು ಜನವರಿ, 11,ಹಿರಿಯ  ಸಾಹಿತಿ, ಸಂಶೋಧಕ ಡಾ ಎಂ. ಚಿದಾನಂದಮೂರ್ತಿ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.ವಿದೇಶದಿಂದ ಸಂಬಂಧಿಕರು ಹಾಗೂ ಸ್ನೇಹಿತರು ಆಗಮಿಸುವ ಹಿನ್ನೆಲೆಯ ಕಾರಣ ,ಪಾರ್ಥಿವ ಶರೀರದ  ಅಂತ್ಯಸಂಸ್ಕಾರವನ್ನು ನಾಳೆ ನಡೆಸಲು  ಅವರ ಕುಟುಂಬದ ಸದಸ್ಯರು  ನಿರ್ಧರಿಸಿದ್ದಾರೆ. ಎಂದು ಮೂಲಗಳು ಹೇಳಿವೆ. ಈ ನಡುವೆ ಸರ್ಕಾರಿ ಗೌರವಗಳೊಂದಿಗೆ ನಾಳೆ ಅಂತ್ಯಕ್ರಿಯೆ ನೆರವೇರಿಸುವುದಾಗಿ ಮುಖ್ಯಮಂತ್ರಿ   ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. 

 ಜೊತೆಗೆ ಚಿಮೂ ಅವರ ಕೊನೆಯ ಆಸೆಗಳಿಗೆ ಧಕ್ಕೆಯಾಗಬಾರದೆಂದು ಪಾರ್ಥಿವ ಶರೀರಕ್ಕೆ ಯಾವುದೇ ಪೂಜೆ-ಪುನಸ್ಕಾರ ಮಾಡುವುದಿಲ್ಲ. ಅದಕ್ಕೆ ನೀವು ಕೂಡ ಸಹಕರಿಸಿ ಎಂದು ಚಿಮೂ ಮಗ ವಿನಯ್ಕುಮಾರ್ ಕುಟುಂಬದ ಸದಸ್ಯರಿಗೆ  ಹಾಗೂ ಅನುಯಾಯಿಗಳಿಗೆ ಮನವಿ ಮಾಡಿದ್ದಾರೆ.ಇತಿಹಾಸ ತಜ್ಞರಾಗಿದ್ದ ಆಗಿದ್ದ ಚಿಮೂಗೆ ಹಂಪಿಯ ಜೊತೆ ವಿಶಿಷ್ಟ ನಂಟು ಒಡನಾಟವಿತ್ತು . ತನ್ನ ಕೊನೆಯ ಪಯಣ ಹಂಪಿಯಲ್ಲೇ ಆಗಬೇಕು ಎಂದು ಬಯಕೆ ತೋಡಿಕೊಂಡಿದ್ದರು  .ಮೇಲಾಗಿ ಹಂಪಿ ಉತ್ಸವ ನಡೆಯುತ್ತಿರುವ  ಸಮಯದಲ್ಲೇ   ನಿಧನರಾಗಿರುವುದು  ಕಾಕಾತಾಳಿಯವೂ ಆಗಿದೆ .