ಮೆಣಸಿನಕಾಯಿ: 247196 ಚೀಲಗಳು ಆವಕ
ಬ್ಯಾಡಗಿ 21: ಪಟ್ಟಣದಲ್ಲಿಯ ಅಂತಾರಾಷ್ಟ್ರೀಯ ಖ್ಯಾತಿಯ ಮೆಣಸಿನಕಾಯಿ ಮಾರುಕಟ್ಟೆಗೆ ಬುಧವಾರದ ಟೆಂಡರ್ನಲ್ಲಿ 247196 ಚೀಲಗಳು ಆವಕವಾಗಿವೆ. ಈ ವಾರ ಮೆಣಿಸಿನ ಕಾಯಿ ಆವಕವು ಎರಡೂವರೇ ಲಕ್ಷಕ್ಕಿಂತಾಕಡಿಮೆಆವಕವಾಗಿದೆ. ಬುಧವಾರದ ಮಾರುಕಟ್ಟೆಯ ದರ:ಕಡ್ಡಿ ಮೆಣಸಿನ ಕಾಯಿ ತಳಿ ಕನಿಷ್ಠ 2109, ಹೆಚ್ಚು 26809, ಸರಾಸರಿ 23359, ಡಬ್ಬಿ ಮೆಣಸಿನಕಾಯಿ ತಳಿ ಕನಿಷ್ಠ 2600, ಹೆಚ್ಚು 27299, ಸರಾಸರಿ 25869, ಗುಂಟೂರು ಮೆಣಸಿನ ಕಾಯಿ ತಳಿ, ಕನಿಷ್ಠ 809, ಹೆಚ್ಚು 14009, ಸರಾಸರಿ 12209, ರೂ.ಗಳಿಗೆ ಮಾರಾಟವಾಗಿವೆ.