ಶಿಕ್ಷಣದಲ್ಲಿ ಸಾಧಕ ಮಕ್ಕಳು ಸಮಾಜಕ್ಕೆ ಮಾದರಿ: ರೂಡಗಿ
Children who excel in education are role models for society: Teacher
ಜಮಖಂಡಿ 14: ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದಿರುವ ಮಕ್ಕಳು ಉನ್ನತ ಹುದ್ದೆಯನ್ನು ಅಂಲಕರಿಸಬೇಕು. ಬಣಜಿಗ ಸಮಾಜದ ಮಕ್ಕಳು ಹೆಚ್ಚಿನ ಅಂಕಗಳನ್ನು ಪಡೆದುಕೊಂಡು ನಮ್ಮ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಬಣಜಿಗ ಸಮಾಜದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ರೂಡಗಿ ಹೇಳಿದರು.
ನಗರದ ದಾನಮ್ಮ ದೇವಿ ಸಭಾಭವನದಲ್ಲಿ ನಡೆದ ಬಣಜಿಗ ದೈವ ಮಂಡಳಿ ಹಾಗೂ ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘ ಸಹಯೋಗದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೆಚ್ಚು ಅಂಕಗಳನ್ನು ಪಡೆದ ಮಕ್ಕಳು ಉನ್ನತ ಸ್ಥಾನದ ಅಧಿಕಾರಿಗಳು ಆಗುವ ಕನಸು ಕಂಡುಕೊಳ್ಳಬೇಕು. ಮನೆಯಲ್ಲಿ ಇರುವ ಹೆತ್ತ ತಾಯಂದಿಯರ ಕರ್ತವ್ಯ ಬಹಳ ಮುಖ್ಯವಾಗಿದೆ. ಪ್ರತಿಭಾ ಪುರಸ್ಕಾರ ಮಕ್ಕಳು ಹಾಗೂ ನಮ್ಮ ಸಮಾಜದ ಮಕ್ಕಳು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳನ್ನಾಗಿ ರೂಪಿಸುವದು ಕೆಲಸ ಹೆತ್ತ ತಂದೆ- ತಾಯಂದಿಯರ ಕೆಲಸ ಮುಖ್ಯವಾಗಿದೆ. ನಾಲ್ಕು ವರ್ಷಗಳ ಕಾಲ ಬಣಜಿಗ ಸಮಾಜ ಬಹಳ ಹಿನ್ನಡೆಯಿತು. ಇವಾಗ ಬಹಳ ಮುಂದುವರಿದಿರುವ ಸಂಘಟನೆಯಾಗಿದೆ. ನನ್ನನ್ನು ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದಕ್ಕೆ ನಮ್ಮ ಸಮಾಜವನ್ನು ಮುನ್ನಡೆಸಿಕೊಂಡು ಹೋಗುವ ಕೆಲಸವನ್ನು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದರು.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದುಕೊಂಡ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಗೌರವಿಸಿದರು.
ಮುತ್ತಿನಕಂತಿಮಠದ ಶಿವಲಿಂಗ ಪಂಡಿತರಾಧ್ಯ ಶಿವಾಚಾರ್ಯ ಶ್ರೀಗಳು, ಓಲೇಮಠದ ಆನಂದ ದೇವರು ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ಉಮೇಶ ಬಾಂಗಿ, ಬಸವರಾಜ ನ್ಯಾಮಗೌಡ, ಧರ್ಮಲಿಂಗಯ್ಯ ಗುಡಗುಂಟಿ, ಜಿ,ಆರ್,ಅನಂತಪೂರ, ಶಿವಾನಂದ ಜಿರಲಿ, ಸಿದ್ರಾಮಪ್ಪ ಶಿರೋಳ, ಮೇಘಾ ಮಹಾಬಳಶೆಟ್ಟಿ, ನಿಖಿತಾ ಅನಂತಪೂರ, ಜಿ,ಆರ್,ಅನಂತಪೂರ,ಮಲ್ಲಪ್ಪ ಮುದಕಣ್ಣವರ, ಸಂಗಮೇಶ ಹಲವಾಯಿ, ಮಲ್ಲಪ್ಪ ಜೈನಾಪೂರ, ನಾಗೇಂದ್ತ ಶಿರಗಣ್ಣವರ, ಬಸವರಾಜ ಕೋತಿನ, ಷಣ್ಮುಖಪ್ಪ ಮಹಾಬಳಶೆಟ್ಟಿ, ಗೀರೀಶ ಬಾಂಗಿ, ಶಂಕರ ಜಿರಲಿ, ಪ್ರಭು ಕಲ್ಯಾಣಶೆಟ್ಟಿ, ರಮೇಶ ಉಪ್ಪಿನ, ಸದಾಶಿವ ಬಾಗೇವಾಡಿ, ಶಿವಾನಂದ ಗೊಂದಿ, ಮಲ್ಲಿಕಾರ್ಜುನ ಇಂಗಳಗಾಂವಿ, ಮುರಗೇಪ್ಪ ಕುರಿ, ಉಮೇಶ ಮುರಗೋಡ, ರಾಜು ಕರಣಿ, ಬಸವರಾಜ ಹರಕಂಗಿ, ಸಂಜಯ ಕಂಕಣವಾಡಿ, ಬಸವರಾಜ ನರಗುಂದ, ಮುರಗೇಶ ಕಲ್ಯಾಣಶೆಟ್ಟಿ ಸೇರಿದಂತೆ ಅನೇಕರು ಇದ್ದರು. ಸಿ,ಎಸ್,ಬಾಂಗಿ ಪ್ರಾಸ್ತಾವಿಕ ಮಾತನಾಡಿದರು. ಮಲ್ಲಿಕಾರ್ಜುನ ಜಿರಲಿ ಸ್ವಾಗತಿಸಿದರು.ಸದಾಶಿವ ಬಾಗೇವಾಡಿ ಮತ್ತು ಚಂದ್ರಶೇಖರ ಜತ್ತಿ ನಿರೂಪಿಸಿದರು. ದಂಡಮ್ಮಾ ಕಲ್ಯಾಣಶೆಟ್ಟಿ ಪ್ರಾರ್ಥಸಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 