ಮಕ್ಕಳಿಗೆ ಆಟದೊಂದಿಗೆ ಪಾಠವನ್ನು ಬೋಧಿಸಬೇಕು

ಲೋಕದರ್ಶನ ವರದಿ

ರಾಯಬಾಗ 31: ಚಿಕ್ಕಮಕ್ಕಳ ಮನಸ್ಸು ಅತ್ಯಂತ ಸೂಕ್ಷ್ಮವಾಗಿರುವುದರಿಂದ ಅವರಿಗೆ ಕಲಿಕೆಯಲ್ಲಿ ಆಸಕ್ತಿ ಮೂಡುವಂತೆ ಆಟದೊಂದಿಗೆ ಪಾಠವನ್ನು ಬೋಧಿಸಬೇಕೆಂದು ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎ.ಭಜಂತ್ರಿ ಹೇಳಿದರು. 

ಶುಕ್ರವಾರ ಪಟ್ಟಣದ ಕೆಇಬಿ ರಸ್ತೆಯಲ್ಲಿ ನೂತನವಾಗಿ ಪ್ರಾರಂಭಗೊಂಡ ವಿದ್ಯಾಚೇತನ ಆಂಗ್ಲ ಮಾಧ್ಯಮ ನರ್ಸರಿ, ಎಲ್ಕೆಜಿ ಮತ್ತು ಯುಕೆಜಿ ಶಾಲೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನರ್ಸರಿ ಶಾಲೆ ಮಕ್ಕಳು ಆಟ-ಪಾಠಗಳನ್ನು ಕಲಿಯರು ಒಳ್ಳೆ ವಾತಾವರಣದ ಪರಿಸರವನ್ನು ನಿರ್ಮಿಸಬೇಕೆಂದರು.

ಬಾವನಸೌಂದತ್ತಿ ಓಂಕಾರ ಆಶ್ರಮದ ಮಾತ್ರೋಶ್ರಿ ಬ್ರಹ್ಮಾಂಬಿಕಾ ಅವರು ಮಾತನಾಡಿ, ಎಳೆವಯಸ್ಸಿನ ಮುದ್ದು ಮಕ್ಕಳಲ್ಲಿ ಒಳ್ಳೆ ನಡೆ, ನುಡಿ, ಸಂಸ್ಕೃತಿ, ಸಂಸ್ಕಾರಗಳನ್ನು ಬಿತ್ತಿ, ಅವರನ್ನು ಸಮಾಜದಲ್ಲಿ ಒಳ್ಳೆ ಸತ್ಪಜ್ರೆಗಳನ್ನಾಗಿ ಮಾಡಲು ತಂದೆ, ತಾಯಿ, ಗುರುಗಳು ಶ್ರಮಿಸಬೇಕೆಂದರು.

ವಿದ್ಯಾ ನಾಯಿಕ, ನ್ಯಾಯವಾದಿಗಳಾದ ಎಸ್.ಎಸ್.ನಾಯಿಕ, ಎಮ್.ಕೆ.ಖೊಂಬಾರೆ, ಆರ್.ಟಿ.ನಾಗರಾಳೆ, ಪಿ.ಆರ್.ಗುಡೋಡಗಿ, ಎಸ್.ಬಿ.ಹೊಳ್ಕರ, ಬಿ.ಎಸ್.ಗಡ್ಡೆ, ಎಮ್.ಜಿ.ಉಗಾರೆ, ಸಿ.ಬಿ.ಭುಸಗುಂಡೆ ಹಾಗೂ ಕಲಂದರ ಅತ್ತಾರ, ಸಂಗಪ್ಪ ಉಳ್ಳಾಗಡ್ಡಿ, ಚೇತನ ನಾಯಿಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.