ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಬೇಕು; ಸಂತೋಷ ಹಾದಿಮನಿ

ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಬೇಕು; ಸಂತೋಷ ಹಾದಿಮನಿ Children should be given quality education along with culture; Santosh Hadimani


ಯರಗಟ್ಟಿ  11 : ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವುದರ ಮೂಲಕ ಸಂಸ್ಕಾರ ನೀಡಬೇಕು ಎಂದು ಮಾಜಿ ಗ್ರಾ. ಪಂ. ಸದಸ್ಯ ಸಂತೋಷ ಹಾದಿಮನಿ ಹೇಳಿದರು.ಪಟ್ಟಣದ ಬಾಲಾಜಿ ಶಿಕ್ಷಣ ಸಂಸ್ಥೆಯ ಹಾಗೂ ಸಹರಾ ಪೂರ್ವ ಪ್ರಾಥಮಿಕ ಹಾಗೂ ಕಿರಿಯ ಪ್ರಾಥಮಿಕ ಶಾಲಾ ವತಿಯಿಂದ ಹಮ್ಮಿಕೊಂಡಿದ್ದ ಬಾಲಾಜಿ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಶಿಕ್ಷರರು ನೀಡುತ್ತಾರೆ. ಅದರ ಜೊತೆಗೆ ಮನೆಯಲ್ಲಿ ಪಾಲಕರಾದವರು ಕೂಡ ಮಕ್ಕಳಿಗೆ ಸಂಸ್ಕಾರವನ್ನು ಕಲಿಸುವುದು ಅಷ್ಟೇ ಮುಖ್ಯ ಎಂದರು.

ಶಿಕ್ಷಣ ಸಂಸ್ಥೆ ಕಟ್ಬುವುದು ಅಷ್ಟು ಸುಲಭದ ಮಾತಲ್ಲ. ಕಟ್ಟಿದ ಮೇಲೆ ಹೇಗೆ ಬೆಳೆಸಬೇಕು, ಹೇಗೆ ನಡೆಸಿಕೊಂಡು ಹೋಗಬೇಕು ಎನ್ನುವುದನ್ನು ಮನವರಿಕೆ ಮಾಡಿಕೊಂಡೆ ಮಾತೋಶ್ರೀ ವೆಂಕಪ್ಪ ಯರಡ್ಡಿ ಅವರು ಇಷ್ಟು ದೊಡ್ಡ ಮಟ್ಟದ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿ, ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದ ತಾಲೂಕು ಎನ್ನುವ ಹಣೆಪಟ್ಟಿಯನ್ನು ಹೊಗಲಾಡಿಸಿ, ವಿದ್ಯಾರ್ಥಿಗಳಿಗೆ ವಿದ್ಯಾವಂತವರನ್ನಾಗಿ ಮಾಡುವ ಛಲ ಹೊಂದಿದ್ದಾರೆ. ಹೀಗಾಗಿ ಇಲ್ಲಿ ಕಲಿತ ಮಕ್ಕಳೆಲ್ಲರೂ ಗುಣಮಟ್ಟದ ಶಿಕ್ಷಣವನ್ನು ಪಡೆದು ದೊಡ್ಡ ದೊಡ್ಡ ಹುದ್ದೆಗಳನ್ನು ಪಡೆಯುವುದರ ಮೂಲಕ ಕಲಿತ ಶಾಲೆಗೆ ಕಿರ್ತಿ ತರಬೇಕು ಎಂದರು.  

ಎಪಿಎಂಸಿ ಅಧ್ಯಕ್ಷ ನೀಲಕಂಠ ಶೀದಬಸನ್ನವರ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಿನ ಒತ್ತು ನೀಡಬೇಕು. ಗುರುಗಳು ಕಲಿಸಿದ ವಿದ್ಯೆಯನ್ನು ವಿದ್ಯಾರ್ಥಿಗಳು ಚಾಚು ತಪ್ಪದೇ ಕಲಿಯಬೇಕು ಎಂದರು.ರಾಜರಾಜೇಶ್ವರಿ ಆಶ್ರಮದ ಪೂಜ್ಯ ಗಣಪತಿ ಮಹಾರಾಜರು ಮಾತನಾಡಿದರು. ಇದೇ ವೆಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಮತ್ತು ವಿವಿಧ ಕ್ರೀಡಾ ಕೂಟದಲ್ಲಿ ಭಾಗವಹಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ವೇಳೆ ಪ. ಪಂ. ಸದಸ್ಯ ನಿಖಿಲ ಪಾಟೀಲ, ಮುಖ್ಯೋಪಾಧ್ಯಾಯ ಎ. ಎ. ಮಕ್ತುಮನ್ನವರ, ನಿವೃತ್ತ ಶಿಕ್ಷಕ ಎಚ್‌. ಎಲ್‌. ವಜ್ರಮಟ್ಟಿ, ಕಡಬಿ ಗ್ರಾ. ಪಂ. ಸದಸ್ಯ ಗಂಗಪ್ಪ ಮೀಸಿ, ಗಣ್ಯರಾದ ಕಲ್ಮೇಶ ಬಾಲರಡ್ಡಿ, ವಸತಿ ನಿಲಯ ಪಾಲಕರಾದ ಉಮೇಶ ಅವರಾದಿ, ಡಿ. ಡಿ. ಹೊಸಮನಿ, ಇಮ್ತಿಯಾಜ್ ಖಾದ್ರಿ, ಎಸ್‌. ವ್ಹಿ. ಯರಡ್ಡಿ, ಬಾಲಾಜಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ರಾಜೇಂದ್ರ ಶೆಟ್ಟಿ, ಉಪಾಧ್ಯಕ್ಷ ಪ್ರಕಾಶ ಕೊಪ್ಪದ, ಕಾಳಪ್ಪ ಬಡಿಗೇರ, ಬಾಲಾಜಿ ಶಾಲಾ ಮುಖ್ಯೋಪಾಧ್ಯಾಯ ಎ. ಎಚ್‌. ವಜ್ರಮಟ್ಟಿ, ಸಹರಾ ಶಾಲಾ ಪ್ರಧಾನ ಗುರುಮಾತೆ ಲಕ್ಷ್ಮೀ ಹೂಗಾರ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಶಾಲಾ ವಿದ್ಯಾರ್ಥಿ ಪ್ರತಿನಿಧಿ ಹಾಗೂ ವಿದ್ಯಾರ್ಥಿಗಳು ಇದ್ದರು.