ಲೋಕದರ್ಶನ ವರದಿ
ಮುಧೋಳ13: ಅಪೌಷ್ಠಿಕತೆಯಿಂದ ಮಕ್ಕಳು ಹೂರಬರಬೇಕು ಈ ನಿಟ್ಟಿನಲ್ಲಿ ಪಾಲಕರು ಜಾಗೃತೆ ವಹಿಸಿ ತಮ್ಮ ತಮ್ಮ ಮಕ್ಕಳಿಗೆ ಪೌಷ್ಠಿಕಾಂಶವುಳ್ಳ ಆಹಾರ ನಿತ್ಯ ನೀಡಬೇಕು, ಅಂದಾಗ ಮಾತ್ರ ಮಕ್ಕಳು ದೈಹಿಕವಾಗಿ ಮಾನಸಿಕವಾಗಿ ಸದೃಢವಾಗಲು ಸಾಧ್ಯ ಎಂದು ಮುಧೋಳದ ಪ್ರಧಾನ ದಿವಾಣಿ ನ್ಯಾಯಾಧೀಶರಾದ ಸುಧೀನಕುಮಾರ ಡಿ.ಜೆ. ಹೇಳಿದರು.
ತಾಲೂಕಿನ ಮುಗಳಖೋಡ ಗ್ರಾಮದಲ್ಲಿ ಬಾಗಲಕೋಟ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮುಧೋಳ ತಾಲೂಕಾ ಕಾನೂನು ಸೇವಾ ಸಮೀತಿ, ತಾಲೂಕ ವಕೀಲರ ಸಂಘ, ಪೋಲೀಸ ಇಲಾಖೆ, ಅಲಾಯನ್ಸ ಇಂಟರ್ ನ್ಯಾಶನಲ್ ಕ್ಲಬ್, ಮುಗಳಖೋಡದ ಗುರುಪಾದೇಶ್ವರ ಮೆಮೋರಿಯಲ್ ಸ್ಕೂಲ್, ಇವರುಗಳ ಆಶ್ರಯದಲ್ಲಿ ಜರುಗಿದ ರಾಷ್ಠ್ರೀಯ ಪೌಷ್ಠಿಕ ಆಹಾರ ದಿನಾಚರಣೆ, ಮೋಟರ ವಾಹನ ಕಾಯ್ದೆ, ಹಾಗೂ ನಮಗಾಗಿ ಕನೂನು ಅರಿವು-ನೆರವು ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿ ಗ್ರಾಮೀಣ ಪ್ರದೇಶದ ಜನರು ಬಹುತೇಕರಿಗೆ ಕಾನೂನಿನ ಬಗ್ಗೆ ಅರಿವು ಇರಲ್ಲ ಅದಕ್ಕಾಗಿ ನ್ಯಾಯಾಲಯದಲ್ಲಿ ಉಚಿತ ಕಾನೂನಿನ ಬಗ್ಗೆ ತಿಳುವಳಿಕೆ ನೀಡಲಾಗುತ್ತದೆ. ಸಾರ್ವಜನಿಕರು ಅದರ ಸದುಪಯೋಗ ಪಡೆದುಕೊಳ್ಳಬೇಕು, ಕಾನೂನಿನ ಅರಿವು ಎಂಬುದು ದೂಡ್ಡ ಸಾಧನೆ, ಹೀಗಾಗಿ ಪ್ರತಿಯೊಬ್ಬ ಮನುಷ್ಯ ಕಾನೂನಿನ ಅರಿವಿನೊಂದಿಗೆ ಪ್ರತಿ ಕ್ಷೇತ್ರದ ಅರಿವು ಪಡೆದುಕೂಳ್ಳಬೇಕು ಎಂದು ಗ್ರಾಮಸ್ಥರಿಗೆ ಸಲಹೆ ನೀಡಿದರು,
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಖೆಯ ಸಹಾಯಕ ಅಧಿಕಾರಿ ಶ್ರೀಮತಿ ಎಸ ಎನ ಶಿವಕಾಳೆ ಮಾತನಾಡಿ ಸರಕಾರ ಹತ್ತು ಹಲವು ಯೋಜನೆಗಳು ಜಾರಿಗೂಳಿಸಿ ಆರೋಗ್ಯಕ್ಕೆ ಒತ್ತು ನಿಡುತ್ತಿದೆ.
ಮಾತೃವಂದನಾ ಹಾಗೂ ಮಾತೋಶ್ರೀ ಯೋಜನೆಗಳಂಥ ಸೌಲಭ್ಯಗಳನ್ನು ಎಲ್ಲ ಪಾಲಕರು ಸದುಪಯೋಗಪಡಿಸಿಕೂಂಡು ಮಕ್ಕಳ ಆರೂಗ್ಯದತ್ತ ಗಮನ ಹರಿಸಬೇಕೆಂದು ಕರೆ ನೀಡಿದರು, ಮಹಾಲಿಂಗಪುರ ಪಿಎಸೈ ರವಿಕುಮಾರ ಧರ್ಮಟ್ಟಿ ಮಾತನಾಡಿ ಸಾಮಾಜಿಕ ಜೀವನದಲ್ಲಿ ಕಾನೂನು ಪಾಲನೆಯಿಂದ ಮನುಷ್ಯನಿಗೆ ನೆಮ್ಮದಿಯಾಗಿ ಬದುಕಲು ಸಾಧ್ಯಾವಿದೆ ಇಂದಿನ ದಿನಮಾನಗಳಲ್ಲಿ ಸಾರ್ವಜನಿಕರು ತಮ್ಮ ಚಿಕ್ಕ ಚಿಕ್ಕ ಮಕ್ಕಳಿಗೆ ಮೋಟರ ವಾಹನಗಳನ್ನು ನೀಡಿ ಅಪಘಾತಗಳಿಗೆ ಯಡೆಮಾಡಿಕೂಡುತ್ತಿದ್ದಾರೆ, ಇದರಿಂದ ನಿಮಗೆ ಬಹಳ ನಷ್ಟ ವಾಗುತ್ತದೆ ಎಂದರು, ಹಿರಿಯ ಆರೋಗ್ಯ ಮೇಲ್ವಚಾರಕರಾದ ಐ.ಎಸ.ಗೂಳಶೆಟ್ಟಿ ಮಾತನಾಡಿ ಹಳ್ಳಿಗಳಲ್ಲಿ ರೈತರು ಸಾಕಷ್ಟು ಬೆಳೆಗಳನ್ನು ಬೆಳೆತಾರೆ ಆದರೆ ತಮಗೆ ಎಷ್ಟು ಬೇಕು ಅಷ್ಟು ಪೌಷ್ಠಿಕಾಂಶ ಇರತಕಂತಹ ಅಹಾರ ಸೇವಿಸುವುದಿಲ್ಲ..
ಅವುಗಳನ್ನು ಮಾರಿ ತಮ್ಮ ಜೀವನ ವನ್ನು ಸಾಗಿಸ ಬೇಕಾಗಿರುತ್ತದೆ, ಅದರಿಂದ ಎಲ್ಲ ತಾಯಿಂದರು ಕೋಡ ಹೂಲದಲ್ಲಿ ಮೊದಲಿಗೆ ಬೆಳೆದ ಬೆಳೆಗಳನ್ನು ಸೇವಿಸುವ ಮುಖಾಂತರ ಸದೃಡತೆ ಯಿಂದ ಇರಲು ಸಾಧ್ಯ ಎಂದು ಹೇಳಿದರು,
ಅಂತರಾಷ್ಟ್ರಿಯ ಅಲಾಯನ್ಸ ಕ್ಲಬ್ ನಿದರ್ೇಶಕ ದಿನಕರ ಶೆಟ್ಟಿ,ಬೆಳಗಾಂವಿ ಅಲಾಯನ್ಸ ಕ್ಲಬ್ ಅದ್ಯಕ್ಷ ರವೀಂದ್ರ ತೋಟಗೇರಿ, ಮಾತನಾಡಿದರು.
ಗುರುಪಾದೇಶ್ವರ ಮಠದ ರಾಮಯ್ಯ ಹಿರೇಮಠ ಶ್ರೀಗಳು ಭಾಗವಹಿಸಿದ್ದರು, ಅಲಾಯನ್ಸ ಕ್ಲಬ್ ಅದ್ಯಕ್ಷ ಬಸವರಾಜ ಕೋಳಿ, ಅಧ್ಯಕ್ಷತೆ ವಹಿಸಿದ್ದರು,ಗ್ರಾಪಂ ಅಧ್ಯಕ್ಷ ಮಂಜು ಮಂಟೂರ, ವಕಿಲರ ಸಂಘದ ಅದ್ಯಕ್ಷ ಎಸ.ಪಿ.ಮಾಸರಡ್ಡಿ, ನ್ಯಾಯವಾದಿಗಳಾದ ಶಿವಾನಂದ ಮುಳ್ಳೋರ, ಸಿದ್ದು ನಿರಾಣಿ, ಹಿರಿಯ ರಾದ ರಂಗಪ್ಪ ಸುಣಗಾರ, ಪತ್ರಕರ್ತ ಎಸ್.ಎಮ್.ಹೂರಟ್ಟಿ, ಅಲಾಯನ್ಸ ಕ್ಲಬ್ ಕಾರ್ಯದಶರ್ಿ ಮಾರುತಿ ಮೋರೆ, ಸಹಕಾರ್ಯದಶರ್ಿ ಆನಂದ ಚೌಗಲಾ, ಅಂಗನವಾಡಿ ಮೇಲ್ವಿಚಾರಕಿ ಹಂಚಾಟೆ, ಬಿ ಡಿ ರಾಯಪ್ಪನವರ, ಎಸ.ಜಿ.ಚಿಂಚಲಿ, ವಿಠಲ್ ನಾವ್ಹಿ, ಸ್ವಾಗತಿಸಿದರು, ಹನಮಂತ ಕಣಬೂರ, ನಿರೂಪಿಸಿ ವಂದಿಸಿದರು.