ಮಕ್ಕಳ ಸಹಾಯವಾಣಿ 1098 ತಿಳುವಳಿಕೆ ಕಾರ್ಯಕ್ರಮ


ಬೆಳಗಾವಿ:18 ವರ್ಷದ ಒಳಗಿನ ಮಕ್ಕಳಿಗೆ ಏನಾದರು ಸಮಸ್ಯ ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ 1098 ಕ್ಕೆ ಕರೆ ಮಾಡಿ ತಿಳಿಸಬೇಕೆಂದು ಜ್ಞಾನ ವಿಕಾಸ ಸಮನ್ವಯ ಅಧಿಕಾರಿಯಾದ ಶ್ರೀಮತಿ ಸುರೇಖಾ ಎಸ್ ಕೋಳಿ ಅವರು ಹೇಳಿದರು.

ಸುಳೇಭಾವಿಯ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಬುಧವಾರ ಆಗಸ್ಟ 1 ರಂದು ಆಯೋಜಿಸಿದ್ದ, ಯುನೆಟೆಡ್ ಸಮಾಜ ಕಲ್ಯಾಣ ಸಂಸ್ಥೆ ಬೆಳಗಾವಿಯ ಮಕ್ಕಳ ಸಹಾಯವಾಣಿ 1098 ಬೆಳಗಾವಿ ಮತ್ತು ಶ್ರೀ ಕ್ಷೇತ್ರ ದರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ಸುಳೇಭಾವಿ ಇವರ ಆಶ್ರಯದಲ್ಲಿ ಮಕ್ಕಳ ಸಹಾಯವಾಣಿ 1098 ತಿಳುವಳಿಕೆ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದರು. 

ಮಕ್ಕಳ ಸಹಾಯವಾಣಿಯ ಸದಸ್ಯರಾದ ಶೀವಲಿಲಾ ಹಿರೇಮಠ ಇವರು ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮಗಳು ಹಾಗೂ ಹೆಣ್ಣು ಮಕ್ಕಳ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯಗಳ ಕುರಿತು ತಿಳಿಸಿದರು. 

ಸುಧಾ ಕೋಲಕಾರ ಇವರು ಭಿಕ್ಷುಕ ಮಕ್ಕಳು, ಬಾಲಕಾಮರ್ಿಕ ಮಕ್ಕಳು, ಅನಾಥ ಮಕ್ಕಳು, ಮಕ್ಕಳ ಮಾರಾಟ ಮತ್ತು ಸಾಗಾಣಿಕೆ ಇಂತಹ ಪ್ರಕರಣಗಳು ಹೆಚ್ಚುತ್ತಿರುವದು ಅಪಾಯಕರ ಬೆಳವಣಿಗೆಯಾಗಿದೆ ಹಾಗೂ ಇಂಥ ಮಾಹಿತಿ ಇದ್ದಲ್ಲಿ ತಕ್ಷಣ ಮಕ್ಕಳ ಸಹಾಯವಾಣಿ 1098 ಗೆ ಕರೆ ಮಾಡಿ ಮಾಹಿತಿ ನೀಡಿ ಎಂದರು ಸಾರ್ವಜನಿಕರಿಗೆ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಸಂಘದ ಪ್ರತಿನಿಧಿ ಶ್ರೀಮತಿ ಪ್ರೇಮಾ ಎಸ್ ಉಳಗದ ಹಾಗು ಶೋಭಾ ಬೇಟಗೇರಿ ಇವರು ಉಪಸ್ಥಿತರಿದ್ದರು.

ಜ್ಯೋತಿಭಾ ಸಂಘ. ಗೃಹ ಲಕ್ಷ್ಮೀಸಂಘ, ಓಂಕಾರ ಸಂಘ, ಶ್ರೀ ತುಳಸಿ ಸಂಘ ಭಾವನಾ ಸಂಘ, ಭಾಗಿರಥಿಸಂಘ ಶ್ರೀ ಶಾಕಾಂಬರಿ ಸಂಘ ಈ ಎಲ್ಲ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪ್ರೇಮಾ ಎಸ್ ಉಳಗದ ನಿರೂಪಿಸಿದರು. ರಾಧಾ ಎ ಕಂಗ್ರಾಳಕರ ಇವರು ಸ್ವಾಗತಿಸಿದರು, ಸವಿತಾ ಬ ಹಿರೇಮಠ ಅವರು ವಂದಿಸಿದರು.