ಲೋಕದರ್ಶನ ವರದಿ
ಹೊನ್ನಾವರ,14: ತಾಲೂಕಿನ ಬಂಗಾರಮಕ್ಕಿ ಮಾರುತಿ ರೆಸಿಡೆನ್ಸಿಯಲ್ ಸ್ಕೂಲ್ನಲ್ಲಿ ಮಕ್ಕಳ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಈ ಕಾರ್ಯಕ್ರಮಕ್ಕೆ ನಮ್ಮ ಶಾಲೆಯ ಅಧ್ಯಕ್ಷರಾದ ಶ್ರೀ ಮಾರುತಿ ಗುರೂಜಿ, ಕಾರ್ಯದಶರ್ಿ ಅಪರ್ಿತಾ ಗುರೂಜಿ, ಆಡಳಿತ ನಿದರ್ೇಶಕರಾದ ಜಿ.ಟಿ. ಹೆಗಡೆ, ಪಾಲಕ ಶಿಕ್ಷಕ ಸಂಘದ ಸದಸ್ಯರಾದ ಸಂತೋಷ ಪೈ, ಪ್ರಾಂಶುಪಾಲರಾದ ಶ್ರೀನಿವಾಸ ಬಿ.ಕೆ., ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ವಿದ್ಯಾಥರ್ಿ, ವಿದ್ಯಾಥರ್ಿ ಪಾಲಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವೇದಘೋಷದೊಂದಿಗೆ ಸಾಂಪ್ರದಾಯಿಕವಾಗಿ ಪ್ರಾರಂಭಿಸಲಾಯಿತು. ಶಾಲಾ ವಿದ್ಯಾಥರ್ಿಗಳು ಪ್ರಾರ್ಥನಾ ಗೀತೆಯನ್ನು ಹಾಡಿದರು. ಶಾಲೆಯ ವಿದ್ಯಾಥರ್ಿಗಳ ಪ್ರತಿನಿಧಿಯಾದ ಎನ್. ಆರ್. ಸಮರ್ಥ ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರನ್ನು ತುಂಬು ಹೃದಯದಿಂದ ಸ್ವಾಗತಿಸಿದನು. ನಂತರ ಜವಾಹರಲಾಲ ನೆಹರುರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವವನ್ನು ಸಲ್ಲಿಸಲಾಯಿತು.
ನಂತರ ಇದೇ ಶಾಲೆಯಲ್ಲಿ ಇಂಗ್ಲೀಷ್ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಕುಮಾರಿ ಗೌರಿ ಹೆಗಡೆ, ಇವರಿಗೆ ನೆನಪಿನ ಕಾಣಿಕೆ ನೀಡಿ ಬಿಳ್ಕೋಡಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಕಿ ಕುಮಾರಿ ಗೌರಿ ಹೆಗಡೆ ಮಾತನಾಡಿ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭವನ್ನು ಕೋರಿದರು. ಮತ್ತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಶಾಲಾ ವಿದ್ಯಾಥರ್ಿಗಳಿಂದ ಛದ್ಮವೇಷ ಸ್ಪಧರ್ೆ ಜರುಗಿತು. ವಿದ್ಯಾಥರ್ಿಗಳು ವಿವಿಧ ವೇಷಭೂಷಣಗಳಿಂದ ಎಲ್ಲರ ಮನರಂಜಿಸಿದರು.
ಈ ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾಥರ್ಿನಿಯರಾದ ಹಷರ್ಿತಾ ಮೇಸ್ತಾ ಮತ್ತು ಹೆಚ್. ಎಮ್. ಅನುರಾಗ ನಿರ್ವಹಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾಥರ್ಿಯಾದ ಸುಜಿತ್ ಸರ್ವರನ್ನು ವಂದಿಸಿದರು.