ರಾಣೇಬೆನ್ನೂರು: ಪಟ್ಟಸಾಲಿ ನೇಕಾರ ಸಮುದಾಯವು ಸೇರಿದಂತೆ ಒಳಪಂಗಡಗಳಲ್ಲಿರುವ ಎಲ್ಲ ನೇಕಾರ ಸಮುದಾಯಕ್ಕೆ ತನ್ನದೇ ಆದ ಇತಿಹಾಸ ಪರಂಪರೆ ಇದೆ. ಈ ಸಮಾಜವು ಸಮಗ್ರವಾಗಿ ಅಭಿವೃದ್ಧಿ ಹೊಂದಬೇಕಾದ ಅಗತ್ಯವಿದೆ ಎಂದು ಪಟ್ಟಸಾಲಿ ನೇಕಾರ ನೌಕರರ ಸಂಘದ ಅಧ್ಯಕ್ಷ ಡಾ|| ಎಚ್.ಕೆ.ಕದರಮಂಡಲಗಿ ಹೇಳಿದರು.
ಅವರು ರವಿವಾರ ಇಲ್ಲಿನ ಸಾಲೇಶ್ವರ ಕಲ್ಯಾಣಮಂಟಪದಲ್ಲಿ ಪಟ್ಟಸಾಲಿ ನೇಕಾರ ಸಮಾಜದ ನೌಕರರ ಸಂಘವು ಆಯೋಜಿಸಿದ್ದ, ಸಮಾಜದ ವಿದ್ಯಾರ್ಥಿಗಳ ಪ್ರತಿಭಾಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಸ್ತುತ ಸಮಾಜದಲ್ಲಿ ಬಡವರು-ಶ್ರೀಮಂತರು ಸಮಾನವಾಗಿದ್ದರೂ ಸಹ ಅಧಿಕ ಪ್ರಮಾಣದಲ್ಲಿ ಬಡವರೇ ಇದ್ದಾರೆ. ಬಡತನದಲ್ಲಿ ಮಕ್ಕಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಅನೇಕ ರೀತಿಯ ಹರಸಾಹಸ ಪಡಬೇಕಾಗುತ್ತದೆ. ಅಂತಹ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಅವರಿಗೆ ಭವಿಷ್ಯದಲ್ಲಿ ಬದುಕನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಪ್ರೋತ್ಸಾಹಿಸುವ ಕಾರ್ಯ ಸಮಾಜದಿಂದಾಗಬೇಕಾಗಿದೆ ಎಂದರು.
ಕಳೆದ 2014ರಲ್ಲಿ ಈ ಪ್ರತಿಭಾ ಪುರಸ್ಕಾರ ಯೋಜನೆಯನ್ನು ತಮ್ಮದೇ ಆದ ಸಾಂಸ್ಥಿಕ ಲಕ್ಷ ರೂ.ಗಳ ದತ್ತಿ ನಿಧಿಯಲ್ಲಿ ತಾವು ಆರಂಭಿಸಿ ಚಾಲನೆಗೊಳಿಸಲಾಗಿದ್ದು, ಕೇವಲ ಬರುವ ಹತ್ತು ಸಾವಿರ ರೂ.ಗಳ ಬಡ್ಡಿ ಹಣದಲ್ಲಿ ಇಂತಹ ಕಾರ್ಯಕ್ರಮಗಳು ನಡೆಸುತ್ತಾ ಬರಲಾಗಿದೆ.
ಇದರಿಂದ ಸಮಾಜದ ಮಕ್ಕಳು ಮತ್ತಷ್ಟು ಉತ್ತೇಜಕವಾಗಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದು, ತಮಗೆ ಅತ್ಯಂತ ಸಂತೋಷವನ್ನುಂಟು ಮಾಡಿದೆ ಎಂದರು.
ನೌಕರ ಸಂಘದ ಸದಸ್ಯರೆಲ್ಲರೂ ಇತ್ತೀಚಿನ ವರ್ಷಗಳಲ್ಲಿ ತಮ್ಮ ಪಾಲಿನ ದೇಣಿಗೆಯನ್ನು ನೀಡಲು ಮುಂದೆ ಬರುತ್ತಿರುವುದು ಸಮಾಜದ ಮಕ್ಕಳು ಶೈಕ್ಷಣಿಕವಾಗಿ ಅಭಿವೃದ್ಧಿ ಪರವಾಗಿ ಮುಂದೆ ಬರಲು ಸಾಧ್ಯವಾಗುತ್ತಲಿದೆ. ಸದಸ್ಯರು ಮತ್ತು ಸಮಾಜದಲ್ಲಿರುವ ಗಣ್ಯರು ಮತ್ತಷ್ಟು ಹಣವನ್ನು ಸಹಾಯವಾಗಿ ನೀಡಿ, ದತ್ತಿ ಇಟ್ಟು ಮತ್ತಷ್ಟು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ಮುಂದಾಗಬೇಕು ಎಂದು ಡಾ|| ಕದರಮಂಡಲಗಿ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಬಿ.ಎಸ್.ಎನ್.ಎಲ್ನ ನಿವೃತ್ತ ಉದ್ಯೋಗಿಗಳಾದ ಲಿಂಗರಾಜ ಡಿ. ದುರ್ಗದ ಮತ್ತು ನಿರ್ಮಲಾ ದುರ್ಗದ ಸೇರಿದಂತೆ ಪ್ರತಿಭಾವಂತ ವಿದ್ಯಾರ್ಥಿಗಳಾದ(ಎಸ್.ಎಸ್.ಎಲ್ಸಿ.) ಶ್ರೀನಿವಾಸ ಹೆಚ್.ಕದರಮಂಡಲಗಿ(ಪ್ರ), ಭೂಮಿಕಾ ಸು. ಬುಳ್ಳಾಪುರ(ಪ್ರ), ದರ್ಶನ್ ಹ. ಹೂಗಾರ(ದ್ವಿ), ಸಂಜಯ್, ಶ್ರೀಧರ, ಶೇಷಗಿರಿ(ತೃ) ಮತ್ತು ಪಿಯುಸಿ- ಸಂಜಯಕುಮಾರ ವಿ. ಅಗಡಿ(ಪ್ರ), ದಿವ್ಯಾ ನಾ.ಬ್ಯಾಡಗಿ(ದ್ವಿ), ಅನುಷಾ ಆಂ. ಬೆಂಕಿ ಹಾಗೂ ವರ್ಷಾ ತು. ಕೋಳೂರು(ತೃ) ಇವರುಗಳನ್ನು ಸಾರ್ವಜನಿಕವಾಗಿ ನಗರದು ಮೊತ್ತ ಪುರಸ್ಕಾರವಿನಿತ್ತು ಸನ್ಮಾನಿಸಿ, ಗೌರವಿಸಲಾಯಿತು.
ಸಮಾರಂಭದಲ್ಲಿ ಮುಖಂಡರಾದ ರಾಮಣ್ಣ ಸಾಲಿ, ಶಿವಾನಂದ ಬೆನ್ನೂರು, ಡಾ|| ರಾಜೇಶ್ವರಿ ಹೆಚ್., ಶ್ರೀರಾಮ ಭಂಡಾರಿ, ಪ್ರಕಾಶ ಚನ್ನಪ್ಪನವರ, ಲಕ್ಷ್ಮಣ ಸಾಲಿ, ಅಶೋಕ ಕದರಮಂಡಲಗಿ, ಚಂದ್ರಶೇಖರ ಚಿನ್ನಿಕಟ್ಟಿ, ಎನ್.ದೇವೆಂದ್ರಪ್ಪ ಸೇರಿದಂತೆ ಮತ್ತಿತರ ಗಣ್ಯರು, ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶಾರದಾ ಬುಳ್ಳಾಪುರ ಸಂಗಡಿಗರು ಪ್ರಾರ್ಥಿಸಿದರು, ತಿಪ್ಪೇಸ್ವಾಮಿ ಹಳ್ಳದದಂಡಿ ಸ್ವಾಗತಿಸಿ, ನಿರೂಪಿಸಿದರು, ಗೋಪಾಲ ಗುತ್ತಲ ಪ್ರಾಸ್ತಾವಿಕವಾಗಿ ಮಾತನಾಡಿದರು, ಶ್ರೀಧರ ಶೇಷಗಿರಿ ವಂದಿಸಿದರು.