ಹಾವೇರಿ ಜ.23: ವಿಕಲಚೇತನ ಮಕ್ಕಳು ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕರಾದ ನೆಹರು ಓಲೇಕಾರ ಅವರು ಹೇಳಿದರು.
ನಗರದ ಸಮನ್ವಯ ಶಿಕ್ಷಣ ಕೇಂದ್ರ (ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.3) ದಲ್ಲಿ ಮಂಗಳವಾರ ಹಾವೇರಿ ಶಹರ ವಲಯದ ಸಕರ್ಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ದಾಖಲಾಗಿರುವ ವಿಶೇಷ ಅಗತ್ಯತೆಯುಳ್ಳ ಮಕ್ಕಳ ಪಾಲಕ ಹಾಗೂ ಮಕ್ಕಳಿಗೆ ಒಂದು ಪುನಶ್ಚೇತನ ಕಾಯರ್ಾಗಾರದ ಅಧ್ಯಕ್ಷತೆ ವಹಿಸಿ ಅವರು ಅವರು ಮಾತನಾಡಿದರು.
ವಿಕಲಚೇತನ ಮಕ್ಕಳ ಪೋಷಕರು ಆರೋಗ್ಯ ಇಲಾಖೆಯ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ, ಕಂದಾಯ ಇಲಾಖೆಯಿಂದ ದೊರೆಯುವ ಮಾಶಾಸನ ಸೌಲಭ್ಯ ಪಡೆದುಕೊಳ್ಳಬೇಕು. ನಿಮ್ಮ ಸಮಸ್ಯೆಗಳಿ ಸದಾ ಸ್ಪಂದಿಸುವುದಾಗಿ ಭರವಸೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಹೆಚ್.ಪಾಟೀಲ್ ಅವರು ಮಾತನಾಡಿ, ಶಿಕ್ಷಣ ಇಲಾಖೆಯಿಂದ ವಿಕಲಚೇತನ ಮಕ್ಕಳಿಗೆ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ದೈಹಿಕವಾಗಿ ಸಾವಲಂಬನೆ ಸಾಧಿಸಲು ಅಗತ್ಯ ಸಹಕಾರ ನೀಡಲು ಬದ್ಧರಾಗಿದ್ದೇವೆ. ಇಂತಹ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ನಾವು ಬೆನ್ನುಲುಬಾಗಿ ನಿಲ್ಲುತ್ತೇವೆ. ಪಾಲಕರು ತಮ್ಮ ಮಕ್ಕಳಿಗೆ ಅತ್ಮಸ್ಥೈರ್ಯ ತುಂಬಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಎಸ್.ಎಸ್.ಅಡಿಗ ಮಾತನಾಡಿ, ವಿಕಲಚೇತನ ಮಕ್ಕಳು ಹುಟ್ಟಿರುವುದು ಶಾಪವಲ್ಲ. ಅವರ ಅಂಗಾಂಗ ರಚನೆಯ ಸಮಯದಲ್ಲಿ ಆಗಿರುವ ತೊಂದರೆಯಿಂದ ವಿಕಲಚೇತನರಾಗಿರುತ್ತಾರೆ. ಇಂತಹ ಮಕ್ಕಳ ಶ್ರೇಯೋಭಿವೃದ್ಧಿಗೆ ಇಲಾಖೆ ಸಾದಾ ನಿಮ್ಮೊಂದಿಗೆ ಇರುತ್ತದೆ ಎಂದು ಹೇಳಿದರು.
ಕ್ಷೇತ್ರ ಸಮನ್ವಯಾಧಿಕಾರಿಗಳು ಸಿ.ಎಸ್.ಭಗವಂತಗೌಡರ ಇವರು ಮಾತನಾಡಿ, ತಾಲೂಕಿನಲ್ಲಿ 6 ರಿಂದ 16 ವಯೋಮಾನದ ಒಟ್ಟು 666 ವಿಕಲಚೇತನ ಮಕ್ಕಳನ್ನು ಗುರುತಿಸಲಾಗಿದೆ. 2016 ರ ಕಾಯ್ದಿಯ ಪ್ರಕಾರ 21 ನ್ಯೂನ್ಯತೆಗಳಿವೆ. ಇವುಗಳಲ್ಲಿ ನಮ್ಮ ತಾಲೂಕಿನಲ್ಲಿ 11 ರೀತಿಯ ನ್ಯೂನ್ಯತೆಗಳನ್ನು ಗುರುತಿಸಲಾಗಿದೆ.
ಈ ಮಕ್ಕಳಿಗೆ ಶಾಲೆಗಳಲ್ಲಿ ಅವಶ್ಯಕ ಕಲಿಕಾ ವಾತವರಣವನ್ನು ನಿಮರ್ಿಸಿಕೊಡಲಾಗಿದೆ. ಶಾಲೆಗೆ ಹಾಜರಾಗಲು ಸಾಧ್ಯವಾಗದ ಮಕ್ಕಳನ್ನು ತಾಲೂಕ ಹಂತದ ಗೃಹಾಧಾರಿತ ಶಿಕ್ಷಣ ಹಾಗೂ ಶಾಲಾ ಸಿದ್ಧತಾ ಕೇಂದ್ರಕ್ಕೆ ಕರೆತನ್ನಿ. ತಾಲೂಕಿನಲ್ಲಿ ನಾಲ್ಕು ಜನ ಸಂಪನ್ಮೂಲ ಶಿಕ್ಷಕರಿದ್ದು ಅವರು ನಿಮ್ಮ ಮಕ್ಕಳ ಶೈಕ್ಷಣಿಕ ಅಭಿವೃದ್ಧಗೆ ಮಾರ್ಗದರ್ಶನ ನೀಡುತ್ತಾರೆ ಎಂದು ತಿಳಿಸಿದರು.
ಕಾಯರ್ಾಗಾರದಲ್ಲಿ ತಾ.ಪಂ.ಕಾರ್ಯನಿವರ್ಾಹಕ ಅಧಿಕಾರಿ ಬಸವರಾಜಪ್ಪ, ಇ.ಸಿ.ಓ ಡಿ.ಡಿ.ಆರ್.ಸಿ ಸಿ.ಎಸ್ ಸನದಿ, ನೋಡಲ್ ಅಧಿಕಾರಿ ಸಿದ್ಧೇಶ, ಮನಃಶಾಸ್ತ್ರಜ್ಞರು, ಅಂಕಿತ್ ಫಿಜಿಯೋಥೆರಪಿಸ್ಟ್ ಖಲೀಲ್ ಹಾಗೂ ಪಿ ಆಂಡ್ ಓ ಮತ್ತು ಶೋ ಮೇಕರ್ ಮತ್ತು ತಾಲೂಕಿನ ಸಮನ್ವಯ ಶಿಕ್ಷಣ ಸಂಪನ್ಮೂಲ ವ್ಯಕ್ತಿಗಳು, ಚಂದ್ರಕಾಂತ್ ವೈ ಹೊಸಮನಿ, ಮಾಲತೇಶ್ ಕಮ್ಮಾರ್, ರಾಜಶೇಖರ ಸಾಲಗೇರಿ, ಶಿವಕುಮಾರ ಮತ್ತು ತಾಲೂಕ ಶಿಕ್ಷಕ ಸಂಘದ ಅಧ್ಯಕ್ಷ ಜೆ.ಎನ್ ಜಾವೂರು ಇತರರು ಉಪಸ್ಥಿತರಿದ್ದರು.