ಅಥರ್ಗಾ ಜ್ಞಾನಭಾರತಿ ಶಾಲೆಯ ಮಕ್ಕಳು ಉತ್ತಮ ಸಾಧನೆ

Children of Atharga Jnanabharati School achieve great results

ಅಥರ್ಗಾ ಜ್ಞಾನಭಾರತಿ ಶಾಲೆಯ ಮಕ್ಕಳು ಉತ್ತಮ ಸಾಧನೆ 

ಲೋಕದರ್ಶನ ವರದಿ   

ಇಂಡಿ 12: 2024-25 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಇಂಡಿ ತಾಲೂಕಿನ ಅಥರ್ಗಾ ಗ್ರಾಮದ ಜ್ಞಾನಭಾರತಿ ವಿದ್ಯಾಮಂದಿರ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ.ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಸುವರ್ಣ ಮಳಸಿದ್ದಪ್ಪ ಖಸ್ಕಿ 614 ಅಂಕ( 98.24ಅ) ಪಡೆದು ಇಂಡಿ ತಾಲೂಕಿಗೆ ದ್ವಿತೀಯ ಹಾಗೂ ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದು ಅತ್ಯುತ್ತಮ ಸಾಧನೆ ಮಾಡಿದ್ದಾಳೆ. ಸಾಕ್ಷಿ ಸಿಂದಗಿ 602 ಅಂಕ (96.32ಅ)ಪಡೆದು ದ್ವಿತೀಯ ಸ್ಥಾನ ಪಡೆದರೆ ರೇಖಾ ಸಿಂದಗಿ 601 ಅಂಕ(96.16ಅ) ಪಡೆದು  ತೃತಿಯ  ಸ್ಥಾನವನ್ನು ಪಡೆದುಕೊಂಡಿದ್ದಾಳೆ. ಶಾಲೆಯ ಫಲಿತಾಂಶಕ್ಕೆ ಆಡಳಿತ ಮಂಡಳಿ ಅಧ್ಯಕ್ಷ ಆಯ್ ಆರ್ ಕಲ್ಲೂರಮಠ, ಶಾಲೆಯ ಆಡಳಿತ ಅಧಿಕಾರಿ ಆರ್ ಬಿ ಪುರೋಹಿತ ಹಾಗೂ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.