ಮಕ್ಕಳು ಪ್ರಾಥಮಿಕ ಹಂತದಲ್ಲಿಯೇ ಉತ್ತಮ ಶಿಕ್ಷಣ ಪಡೆಯಬೇಕು

ಲೋಕದರ್ಶನವರದಿ

ರಾಣೇಬೆನ್ನೂರು29:  ಪರಿಪೂರ್ಣ ಶಿಕ್ಷಣವನ್ನು ಹೊಂದಬೇಕಾದರೆ, ಮಕ್ಕಳು ಪ್ರಾಥಮಿಕ ಹಂತದಲ್ಲಿಯೇ ಲಕ್ಷ್ಯಕೊಟ್ಟು ಅಧ್ಯಯನ ಮಾಡಿದಾಗ ಮಾತ್ರ ಭವಿಷ್ಯದಲ್ಲಿ ಉತ್ತಮ ಶಿಕ್ಷಣದೊಂದಿಗೆ ಸಂಸ್ಕಾರಯುತ ಬದುಕನ್ನು ಸಾಗಿಸಲು ಸಾಧ್ಯವಾಗುತ್ತದೆ ಎಂದು ರಾಣೇಬೆನ್ನೂರು ಗ್ರಾಮೀಣ ಠಾಣಾ ಪಿಎಸ್ಐ ಮೇಘರಾಜ ಎಂ.ವಿ. ಹೇಳಿದರು.

ಅವರು ನಗರ ಹೊರವಲಯದ ದೇವರಗುಡ್ಡ ರಸ್ತೆಯ ನ್ಯೂ ಏರಾ ಪಬ್ಲಿಕ್ ಶಾಲಾ ಸಮುದಾಯ ಭವನದಲ್ಲಿ ನಡೆದ ಶಾಲೆಯ 17ನೇ ವಾಷರ್ಿಕೋತ್ಸವ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಶಿಕ್ಷಣ ಸಂಸ್ಥೆಗಳು ಇತ್ತೀಚಿನ ವರ್ಷಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶವನ್ನು ಹೊಂದಿ ಎಲ್ಲ ರೀತಿಯ ಮೂಲಭೂತ ಸೌಲಭ್ಯವನ್ನು ಕಲ್ಪಿಸಿ ಅಲ್ಲಿ ಸಂಪೂರ್ಣ ಶುದ್ಧ ಪರಿಸರದಲ್ಲಿ ಶೈಕ್ಷಣಿಕ ಸೇವೆಯನ್ನು ಸಲ್ಲಿಸಲು ಮುಂದಾಗುತ್ತಿವೆ.  ಇಂತಹ ಸುಂದರ ಪರಿಸರದಲ್ಲಿ ಶಿಕ್ಷಣ ಪಡೆದಾಗ ಭವಿಷ್ಯದಲ್ಲಿ ಅತ್ಯುತ್ತಮ ಪ್ರಜ್ಞಾವಂತ ನಾಗರೀಕರಾಗಿ ಬೆಳೆಯಲು ಸಾಧ್ಯವಾಗುವುದು ಎಂದ ಅವರು ಇಲ್ಲಿನ ವಾತಾವರಣ ಪರಿಶುದ್ಧವಾಗಿದೆ.  ಇದು ಇತಿಹಾಸದ ಗುರುಕುಲ ಮಾದರಿಯಲ್ಲಿ ಸಾಗುತ್ತಿರುವುದು ಅತ್ಯಂತ ಸಂತೋಷಕರ ಸಂಗತಿಯಾಗಿದೆ ಎಂದು ಸಂಸ್ಥೆಯ ಕಾರ್ಯವನ್ನು ಪ್ರಶಂಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ, ಸಂಸ್ಥೆಯ ಅಧ್ಯಕ್ಷ ಉಮೇಶ್ ಗುರುಲಿಂಗಪ್ಪಗೌಡ್ರ ಅವರು ತಾವು ಕಳೆದ 17ವರ್ಷಗಳ ಹಿಂದೆ ಸಮಾನ ಮನಸ್ಕರೊಂದಿಗೆ ಸಮಾಲೋಚನೆ ನಡೆಸಿ ಸಮಾಜದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕೆನ್ನುವ ಏಕೈಕ ಸದುದ್ದೇಶದಿಂದ ಸಂಸ್ಥೆಯನ್ನು ಪ್ರಾರಂಭಿಸಿ ಶಿಕ್ಷಣ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇವೆ.  ಪಾಲಕರ ಮತ್ತು ಸಾರ್ವಜನಿಕ ಸಹಕಾರದಿಂದ ಅತ್ಯುತ್ತಮವಾಗಿ ಬೆಳವಣಿಗೆ ಕಾಣುತ್ತಿರುವುದು ಆಡಳಿತ ಮಂಡಳಿಗೆ ಸಂತೋಷವಾಗಿದೆ ಎಂದರು. 

ಈ ಸಂದರ್ಭದಲ್ಲಿ ಗುಡಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗವ್ವ ಚಲವಾದಿ, ಗುಡ್ಡಗುಡ್ಡಾಪುರ ಗ್ರಾಪಂ ಅಧ್ಯಕ್ಷೆ ಗದಿಗೆವ್ವ ಚಲವಾದಿ, ಗುಡ್ಡದಆನ್ವೇರಿ ಗ್ರಾಮಪಂಚಾಯಿತಿ ಅಧ್ಯಕ್ಷೆ ಚೌಡವ್ವ ಪಾಚಿ ಮತ್ತು ಮೇಘರಾಜ ಎಂ.ವಿ. ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 

ವೇದಿಕೆಯಲ್ಲಿ ಭೀಮಣ್ಣ ಹಂಚಿನಮನಿ, ಐ.ಎಂ.ಹುಬ್ಬಳ್ಳಿ, ರೋಜಾ, ಶಕುಂತಲಾ, ನಿರ್ಮಲಾ, ಶೈಲಾ ಚೌದರಿ, ಅಣ್ಣಪ್ಪ, ರಫೀಕ್ ನದಾಫ್, ಮಂಜುಳಾ, ಶಿಲ್ಪಾ, ಜಯಲಕ್ಷ್ಮೀ, ಮಲ್ಲಿಕಾ ಆಚಾರ್, ಆಶಾ ಹಿರೇಮಠ, ವಾಣಿ ಗರಡಿಮನಿ, ನಿವೇದಿತಾ, ಶ್ರೇಯಾ, ಅನುಷಾ, ನಿಖಿತಾ,  ದೀಪಾ, ರೇಣುಕಾ, ಪರಿಮಳಾ, ಲೋಹಿಯಾ, ಬಸವರಾಜ, ಪ್ರವೀಣ, ಶಾಂತರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ನಂತರ ನಡೆದ ಶಾಲೆಯ 300ಕ್ಕೂ ಹೆಚ್ಚು ವಿದ್ಯಾಥರ್ಿಗಳ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದ ಪಾಲಕರ ಮತ್ತು ಸಾರ್ವಜನಿಕರ ಗಮನ ಸೆಳದವು.