ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಉತ್ತಮ ಶಿಕ್ಷಣ ದೊರೆಯಬೇಕು: ಭಾರತಿ

ಲೋಕದರ್ಶನವರದಿ

ರಾಣೇಬೆನ್ನೂರು11: ಆಧುನೀಕತೆಯ ಇಂದಿನ ಸಮಾಜಿಕ ಬದುಕಿನಲ್ಲಿ ಓರ್ವ ರಾಜಕಾರಿಣಿ ನಿರ್ಲಕ್ಷ ವಹಿಸಿದರೆ ಆತನು ಪ್ರತಿನಿಧಿಸುವ ಕ್ಷೇತ್ರ ಅಭಿವೃದ್ದಿಯಿಂದ ಹಿನ್ನಡೆಯಾಗಬಹುದು, ಒಬ್ಬ ರೋಗಿ ಕರ್ತವ್ಯವನ್ನು ಅಲಕ್ಷಿಸಿದರೆ ಸಾವು ಸಂಭವಿಸುತ್ತದೆ, ಪೊಲಿಸ್ ಅಧಿಕಾರಿಯೋರ್ವನು ತನ್ನ ಕರ್ತವ್ಯದಲ್ಲಿ ಲೋಪ ಎಸಗಿದರೆ ಅಪರಾಧಗಳ ಸಂಖ್ಯೆ ಉಲ್ಬಣಗೊಳ್ಳುತ್ತದೆ. ಹಾಗೆಯೇ ಓರ್ವ ಶಿಕ್ಷಕ ಇಲ್ಲವೇ ಶಿಕ್ಷಕಿಯು ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡದಿದ್ದರೆ ಮಕ್ಕಳು ದಾರಿ ತಪ್ಪುವುದರ ಜೊತೆಗೆ ಇಡೀ ಶೈಕ್ಷಣಿಕ ಗುಣಮಟ್ಟ ಅಧೋಪತನಕ್ಕಿಳಿದು ಸಮಾಜ ಹಾಳಾಗುತ್ತದೆ ಎಂದು ಸಮಾಜ ಸೇವಕಿ ಭಾರತಿ ಜಂಬಗಿ ಹೇಳಿದರು. 

    ನಗರದ ಹೊರ ವಲಯದ ಮೇಡ್ಲೇರಿ ರಸ್ತೆಯಲ್ಲಿನ ಶಿವಗಂಗಾ ಪಬ್ಲಿಕ್ ಶಾಲೆಯಲ್ಲಿ ಏರ್ಪಡಿಸಿದ್ದ ಪ್ರಸಕ್ತ ಸಾಲಿನ  ಮಕ್ಕಳ ವಾಷರ್ಿಕ ಕ್ರೀಡಾಕೂಟ, ಪ್ರಶಸ್ತಿ ಪತ್ರ-ಬಹುಮಾನ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಶಿಕ್ಷಕ-ಶಿಕ್ಷಕಿಯರ ಮೇಲೆ ಜವಾಬ್ದಾರಿ ಹೆಚ್ಚಿದೆ, ಜೊತೆಗೆ ಪಾಲಕರ ಮತ್ತು ಪೋಷಕರ ಮೇಲೆಯೂ ಸಹ ಹೆಚ್ಚಿನ ಜವಾಬ್ದಾರಿ ಇದ್ದು, ಇದನ್ನು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸದಿದ್ದರೆ ಮಕ್ಕಳು ಹಾಳಾಗುವುದರ ಮೂಲಕ ಸಮಾಜಕ್ಕೂ ಕಂಟಕವಾಗಿ ಬೆಳೆಯಬಹುದು, ಅದಕ್ಕಾಗಿ ಇನ್ನು ಮುಂದಾದರೂ ಮಕ್ಕಳ ಬಗೆಗೆ ವಿಶೇಷ ಕಾಳಜಿ ವಹಿಸಬೇಕು ಎಂದರು.  

      ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರ ಮಾತನಾಡಿ, ಹೆಚ್ಚುತ್ತಿರುವ ತಾಂತ್ರಿಕತೆಯ ಇಂದಿನ ದಿನಮಾನಗಳಲ್ಲಿ ವಿದ್ಯಾಥರ್ಿಗಳಲ್ಲಿ ಸ್ಪಧರ್ಾತ್ಮಕ ಮನೋಭಾವನೆ ಉಲ್ಬಣಗೊಳ್ಳುತ್ತಿದೆ. ಮಕ್ಕಳಲ್ಲಿ ಕಲಿಕೆಯ ಹಾಗೂ ಸಂಶೋಧಾತ್ಮಕ ಗುಣಗಳನ್ನು ಬೆಳೆಸಬೇಕು. ಇದರಿಂದ ಅವರ ಬುದ್ಧಿಮಟ್ಟವು ವಿಕಾಸಗೊಳ್ಳುವುದರ ಜೊತೆಗೆ ಮಾನಸಿಕ ಮತ್ತು ದೈಹಿಕವಾಗಿ ಸದೃಢವಾಗುತ್ತಾರೆ. ಈ ಹಿನ್ನಲೆಯಲ್ಲಿ ಮಕ್ಕಳಲ್ಲಿ ಹುದುಗಿರುವ ವಿಶೇಷ ಪ್ರತಿಭೆಯನ್ನು ಹೊರಸೂಸಲು ಸದಾ ಪ್ರಯತ್ನಿಸಲು ಮುಂದಾಗಬೇಕು, ಇದರಿಂದ ಮಕ್ಕಳ ಮತ್ತು ಶಿಕ್ಷಕರ ಮಧ್ಯ ಗುರು-ಶಿಷ್ಯರ ಸಂಭಂದ ಇನ್ನಷ್ಟು ಗಟ್ಟಿಗೊಳ್ಳಲು ಸಹಕಾರಿಯಾಗುತ್ತದೆ ಎಂದರು.

     ನಿವೃತ್ತ ಅಭಿಯಂತರ ಸಿ.ಆರ್ ಬಳ್ಳಾರಿ ಮಾತನಾಡಿ  ಇಂದು ಮಕ್ಕಳು ಹಾಗೂ ಯುವ ಪೀಳಿಗೆಯು ಟಿ.ವಿ ಮತ್ತು ಮೊಬೈಲ್ಗಳ ಬಳಕೆಯಿಂದ ಕೆಟ್ಟು, ಹಾಳಾಗುತ್ತಿದ್ದಾರೆ, ಅವರನ್ನು ಪುನಃ ಸಂಸ್ಕಾರ ಹಾಗೂ ಸನ್ಮಾರ್ಗಕ್ಕೆ ತರಲು ಗುರುಕುಲ ಮಾದರಿಯ ಶಾಲೆಗಳಿಂದ ಮಾತ್ರ ಸಾಧ್ಯ ಇಂದಿನ ಬಹುತೇಕ ಮಕ್ಕಳಲ್ಲಿ ವಿಶಿಷ್ಟ ತೆರನಾದ ಬಹುಮುಖ ಪ್ರತಿಭೆ ಇದ್ದೇ ಇರುತ್ತದೆ. ಎಂದರು. 

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಆಡಳಿತಾಧಿಕಾರಿ ಚೈತ್ರಾ ಪಾಟೀಲ ಮಾತನಾಡಿ ಪ್ರಾಥಮಿಕ ಹಂತದಲ್ಲಿಯೇ  ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಬೇಕು, ಮಹಾತ್ಮರ, ಸಚ್ಚಾರಿತ್ರ್ಯರ ಸದ್ಗುಣಗಳನ್ನು ಬೆಳೆಸುವುದರ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾಥರ್ಿಗಳಲ್ಲಿ ಕಲಿಕೆಯ ಅಭಿರುಚಿ ಮೂಡಿಸಲು ಮುಂದಾಗಬೇಕು ಎಂದರು.    

     ಸಂಸ್ಥೆಯ ಕಾರ್ಯದಶರ್ಿ ಮಹೇಶ್ವರಗೌಡ ಪಾಟೀಲ, ವರ್ತಕ ಮೋಹನ ಬೆನ್ನೂರು, ಸಮಾಜ ಸೇವಕ ಎಸ್.ಕೆ ರವಿಶಂಕರ, ಪತ್ರಕರ್ತ ಎಂ.ಚಿರಂಜೀವಿ, ಸಪ್ತಮಿ ಪಾಟೀಲ, ಹುಲ್ಮನಿ, ಮಲ್ಲಿಕಾಜರ್ುನ ಮಠದ, ಲಕ್ಷ್ಮೀ ಚಕ್ರಸಾಲಿ, ಅಮೃತ ಬೆಂಗೇರಿ, ಗಾಯತ್ರಿ ಕಸವಾಳ, ರಂಜನಿ ಯತ್ನಳ್ಳಿ, ಮಧು ಹೊಂಬಾಳೆ, ಅಪೂರ್ವ ಎಸ್ ಬಿ, ವಂದನಾ ಲಮಾಣಿ, ರವಿ ಕಾಳೇರ, ಪಚನ ಸುಣಗಾರ, ರವಿ ಕಾಳೇರ, ಚಂದ್ರು, ಸೇರಿದಂತೆ ಶಾಲಾ ಸಿಬ್ಬಂದಿಗಳು ಮತ್ತಿತರರು ಇದ್ದರು. ಆನಂತರ ಮಕ್ಕಳಿಂದ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನಸೂರೆಗೊಂಡವು.