ಹಾವೇರಿ13: ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಅವರ ಹಕ್ಕುಗಳು ಮತ್ತು ಕಾನೂನಿನ ಅರಿವು ಅತೀ ಅವಶ್ಯಕವಾಗಿದೆ. ಎಂದು ಸಹಾಯಕ ಪೋಲೀಸ್ ಇನ್ಸ್ಪೆಕ್ಟರ್(ಎ.ಎಸ್.ಐ) ಎನ್.ಜಿ ಕನವಳ್ಳಿ ಹೇಳಿದರು.
ಬೆಂಗಳೂರಿನ ಸಮಗ್ರ ಮಕ್ಕಳ ರಕ್ಷಣಾ ಯೋಜನೆ, ಜಿಲ್ಲಾಡಳಿತ, ತಾಲೂಕಾ ಆಡಳಿತ, ಸಮಾಜ ಕಲ್ಯಾಣ ಇಲಾಖೆ, ಅಲ್ಪ ಸಂಖ್ಯಾತರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯುಕ್ತಾಶ್ರಯದಲ್ಲಿ ಫೋಕ್ಸೋ ಕಾಯ್ದೆ 2012 ಹಾಗೂ ಸಂರಕ್ಷಣೆಯ ಕುರಿತು ವಸತಿ ಶಾಲೆಯ ಮಕ್ಕಳಿಗೆ ಮತ್ತು ಸಿಬ್ಬಂದಿಗಳಿಗೆ ಹಾನಗಲ್ನ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಬಾಲಕ ಹಾಗೂ ಬಾಲಕಿಯರ ವಸತಿ ನಿಲಯದಲ್ಲಿ ಇತ್ತೀಚೆಗೆ ಜರುಗಿದ ಒಂದು ದಿನದ ಸಾಮಥ್ಯರ್ಾಭಿವೃದ್ದಿ ತರಬೇತಿ ಕಾರ್ಯಗಾರದಲ್ಲಿ ಅವರು ಮಾತನಾಡಿದರು.
ಬಾಲ್ಯ ವಿವಾಹ ನಿಷೇಧ, ಫೋಕ್ಸೋ ಕಾಯ್ದೆ- 2012, ಮೋಟಾರು ಕಾಯ್ದೆ, ಬಾಲ ಕಾಮರ್ಿಕತೆ, ಮಕ್ಕಳ ಸಮಿತಿ, ಮಕ್ಕಳ ಕಾವಲು ಸಮಿತಿ, ಮಕ್ಕಳ ವಿಶೇಷ ಪೊಲೀಸ್ ಘಟಕದ ಪ್ರಯೋಜನ ಪಡೆದುಕೊಂಡು ಉತ್ತಮ ಜೀವನ ನಡೆಸಬೇಕು. ಮಕ್ಕಳಿಗೆ ತೊಂದರೆಯಾದೆಲ್ಲಿ ಇಲಾಖೆ ಹಾಗೂ ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ದೈಹಿಕ ಶಿಕ್ಷಕ ವಿನಾಯಕ ಕಳಸೂರ ಮಾತನಾಡಿ, 1 ರಿಂದ 18 ವರ್ಷದೊಳಗಿನ ಮಕ್ಕಳ ರಕ್ಷಣೆಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕವನ್ನು ರಚಿಸಲಾಗಿದೆ ಹಾಗೂ ಸಮಸ್ಯೆಗೆ ಸಿಲುಕಿದ ಮಗುವಿನ ರಕ್ಷಣೆ ಮಾಡಲು ಸದಾ ಸಿದ್ದವಾಗಿದೆ.
ಗ್ರಾಮೀಣ ಪ್ರದೇಶದಲ್ಲ್ಲಿ ಹೆಣ್ಣು ಮಗು ಪ್ರೌಢಾವಸ್ಥೆ ಬಂದ ಕೂಡಲೇ ಮಗಳಿಗೆ ಮದುವೆ ಮಾಡಬೇಕು ಎಂಬ ಆಲೋಚನೆ ಬಿಟ್ಟು ಶಿಕ್ಷಣಕ್ಕೆ ಆದ್ಯತೆ ನೀಡಿಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿಲಯದ ಮೇಲ್ವಿಚಾರಕ ಅಣ್ಣಪ್ಪ ನಾಯಕ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾರ್ಯಕತರ್ೆ ಶ್ರೀಮತಿ ರೇಣುಕಾ ಬಿದರಕಟ್ಟಿ, ವಿರೇಶ ಗಾಣಿಗೇರ, ವಸತಿ ನಿಲಯದ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು ಉಪಸ್ಥಿತರಿದ್ದರು.