ಬಾಗಲಕೋಟೆ 28: ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕರೆ ಘೋರ ಮತ್ತು ಹೇಯ ಅಪರಾಧಗಳಲ್ಲಿ ಭಾಗಿಯಾಗುತ್ತಿದ್ದು, ಅದನ್ನು ತಡೆಯಲು ಬಾಲ್ಯವಸ್ಥೆಯಲ್ಲಿಯೇ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಅಗತ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಸುಜಾತಾ ಪಾಟೀಲ ಹೇಳಿದರು.
ಬಾಲಕರ ಬಾಲ ಮಂದಿರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಜಿಲ್ಲಾ ನ್ಯಾಯಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಮಕ್ಕಳ ದಿನಾಚರಣೆ ಹಾಗೂ ಬಾಲ ನ್ಯಾಯ ಮತ್ತು ಮಕ್ಕಳ ಹಕ್ಕುಗಳ ಸಂರಕ್ಷಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರ ನೀಡುವದರಿಂದ ದೇಶವನ್ನು ಮಾದರಿ ಪಥದಲ್ಲಿ ಇರುವಂತೆ ಸ್ವಸ್ಥ ಸಮಾಜವನ್ನು ರಚಿಸಲು ಸಾದ್ಯವಾಗುತ್ತದೆ ಎಂದರು.
ಆಧುನಿಕತೆಯ ಓಟದಲ್ಲಿ ಮಕ್ಕಳನ್ನು ಒಳ್ಳೆಯ ಶಾಲೆಗೆ ಕಳುಹಿಸಿದರು ಕೂಡಾ ಅವರಲ್ಲಿ ಒಳ್ಳೆಯ ಸಂಸ್ಕಾರ ಮೂಡಿಸಬೇಕಾದರೆ ತಂದೆ, ತಾಯಿ, ಗುರು ಹಿರಿಯರ ಮತ್ತು ಸಮಾಜದ ಪಾತ್ರಗಳು ಮಹತ್ವದಾಗಿದೆ. ಪುರಾತನ ಕಾಲದಲ್ಲಿ ವಿದ್ಯಾರ್ಜನೆ ಗುರುವಿನ ಆಶ್ರಮದಲ್ಲಿ ನಡೆಯುತ್ತಿತ್ತು, ವಿದ್ಯಾಭ್ಯಾಸ ಮುಗಿಯುದರಲ್ಲಿ ವಿದ್ಯಾಥರ್ಿಗಳು ಪ್ರಾಯದ ಅವಸ್ಥೆಗೆ ಬರುತ್ತಿದ್ದರು ಆದ್ದರಿಂದ ವಿದ್ಯಾರ್ಜನೆ ಅವಧಿಯಲ್ಲಿ ವಿದ್ಯಾಥರ್ಿಗಳಿಗೆ ಅಪರಾಧಿಕ ಮನೋಭಾವನೆ ಬೆಳೆಯಲು ಯಾವುದೇ ಸಂದರ್ಭ ಬರುತ್ತಿರಲ್ಲಿಲ್ಲ ಎಂದರು.
ಉಪನ್ಯಾಸಕರಾಗಿ ಆಗಮಿಸಿದ್ದ ಸಹಾಯಕ ಸರಕಾರಿ ಅಭಿಯೋಜಕ ಆರ್.ಆರ್.ಫಾರಸ್ ಮಾತನಾಡಿ ಬಾಲ ಮಂದಿರದಲ್ಲಿ ಮಕ್ಕಳಿಗೆ ಅವರನ್ನು ರಕ್ಷಿಸುವ ಸಿಬ್ಬಂದಿವರು ಮತ್ತು ಶಿಕ್ಷಕರು ಮಾತೃತ್ವ ಹೃದಯದಿಂದ ಮಕ್ಕಳನ್ನು ಬೆಳೆಸುವ ಅಗತ್ಯವಿದೆ. ಇದರಿಂದ ಮಕ್ಕಳು ಸಂಸ್ಕಾರವಂತರಾಗಿ ತಮ್ಮ ಜೀವನದ ಗುರಿ ಮುಟ್ಟಿದ್ದರೆ ಸದರಿ ಸಂಸ್ಥೆಯ ಸಂಬಂಧಿತ ಎಲ್ಲಾ ಸಿಬ್ಬಂಧಿಯವರಿಗೆ ಒಳ್ಳೆಯ ಕೀತರ್ಿ ಬರುತ್ತದೆ ಎಂದರು. ಇನ್ನೋರ್ವ ಉಪನ್ಯಾಸಕರಾಗಿ ಆಗಮಿಸಿದ್ದ ತೇಜಸ್ವಿನಿ ಹಿರೇಮಠ ಸದಸ್ಯರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಬಾಗಲಕೋಟ ಇವರು ಮಕ್ಕಳ ಹಕ್ಕುಗಳ ಸಂರಕ್ಷಣೆ ಕುರಿತು ಸವಿಸ್ತಾರವಾಗಿ ಹೇಳಿದರು.
ಕಾರ್ಯಕ್ರಮದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಪ್ರಭಾರಿ ಉಪನಿದರ್ೇಶಕ ಬಿ.ಎನ್.ಗೋರವರ, ಜಿಲ್ಲಾ ಮಕ್ಕಳ ಸಮೀತಿ ಅಧ್ಯಕ್ಷ ಗುಲಾಬ ನದಾಫ, ವಕೀಲರ ಸಂಘದ ಅಧ್ಯಕ್ಷ ಸಿ.ಬಿ.ಪಾಟೀಲ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕೆ.ವಾಯ್.ಉಕ್ಕಲಿ, ಸರಕಾರಿ ಬಾಲ ಮಂದಿರದ ಅಧೀಕ್ಷಕ ಎಂ.ಎಂ.ಇಸರನಾಳ ಉಪಸ್ಥಿತರಿದ್ದರು. ಬಾಲಕರ ಬಾಲ ಮಂದಿರದ ಪರವೀಕ್ಷಣಾಧಿಕಾರಿ ಎಸ್.ಎನ್.ಕೊರವರ ನಿರೂಪಿಸಿದರು.