ಮಕ್ಕಳಿಗೆ ಪಠ್ಯದ ಜೊತೆಗೆ ಸಾಂಸ್ಕೃತಿಕ ಜ್ಞಾನವು ಅಗತ್ಯ
ಕಾಗವಾಡ 29: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಾಲಾ ಮಕ್ಕಳು ಪಠ್ಯದ ಜೊತೆಗೆ ಸಾಂಸ್ಕೃತಿಕ ಕಲೆಗಳು ಹಾಗೂ ಕ್ರೀಡೆಗಳಲ್ಲಿ ಭಾಗವಹಿಸಿ, ತಮ್ಮ ತಮ್ಮ ಪ್ರತಿಭೆಯನ್ನು ತೋರಿಸುವ ಆಸಕ್ತಿ ಬೆಳಸಿಕೊಳ್ಳಬೇಞಜಂದು ಉಪನ್ಯಾಸಕ ರಾವಸಾಬ ಬಡಿಗೇರ ಹೇಳಿದರು.
ಅವರು ಸೋಮವಾರ ದಿ. 27 ರಂದು ತಾಲೂಕಿನ ನವಲಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೋಳೆಮಾಳದ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಕಿಡಗೇಡಿ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯ ಬಿಳ್ಕೋಡುವ ಸಮಾರಂಭ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಮಾತನಾಡುತ್ತಿದ್ದರು. ಸರ್ಕಾರ ಶಾಲೆಯಲ್ಲಿ ಕಲಿತ ಮಕ್ಕಳು ಈಗಿನ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾದರೂ ಮೆರಿಟ್ ಆದಾರದಲ್ಲಿ ಸಿಟು ಸಿಗುವುದಿಲ್ಲ. ಆದರೆ ಕನ್ನಡ ಮಾದ್ಯಮ ಹಾಗೂ ಗ್ರಾಮೀಣ ಮಾದ್ಯಮಗಳಲ್ಲಿ ಸಾಕಷ್ಟು ಅವಕಾಶಗಳು ಸಿಗಲಿವೆ. ಅದಕ್ಕಾಗಿ ಸರ್ಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಹತ್ತು ಹಲವು ಯೋಜನೆ ಜಾರಿಗೆ ತಂದಿದ್ದು, ಅದನ್ನು ಸದುಪಯೋಗ ಪಡೆದುಕೊಂಡು, ದೇಶದ ಅತ್ಯುತ್ತಮ ಪ್ರಜೆಗಳಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮವನ್ನು ಗ್ರಾ.ಪಂ. ಸದಸ್ಯ ಸಾವಂತ ಖಾಂಡೇಕರ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಎಸ್‌ಡಿಎಂಸಿ ಅಧ್ಯಕ್ಷ ರಾಜು ಗುಗಾಡೆ, ಉಪಾಧ್ಯಕ್ಷ ರಾಜು ಕಾಂಬಳೆ, ಕಾಶಿಬಾಯಿ ಗೇಂಡ, ದುಂಡವ್ವ ಖಾಂಡೇಕರ, ಪ್ರಧಾನ ಶಿಕ್ಷಕ ಟಿ.ಎಲ್. ಮಿರ್ಜೆ, ಪಿ.ಕೆ. ವಂಜೇರಿ, ಸಿ.ಜೆ. ಪೋತದಾರ, ವ್ಹಿ,ಎಸ್. ಮಹೇಶ್ಕರ, ಆರ್.ಸಿ ಇಂಡಿಕರ, ಎಸ್.ಎಸ್. ತುಗಶೆಟ್ಟಿ, ಸಂತೋಷ ಸುತಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.