ಮಕ್ಕಳಿಗೆ ರಾಷ್ಟ್ರಾಭಿಮಾನ ಬೆಳೆಸುವ ಕಾರ್ಯ ಅವಶ್ಯಕತೆ

ಬೈಲಹೊಂಗಲ: ದೇಶದ ಭವ್ಯ ಇತಿಹಾಸ, ಪರಂಪರೆಯನ್ನು ಮಕ್ಕಳಿಗೆ ತಿಳಿಸಿಕೊಡುವುದರ ಜೊತೆಗೆ ರಾಷ್ಟ್ರಾಭಿಮಾನ ಬೆಳೆಸುವ ಕಾರ್ಯ ಅವಶ್ಯಕತೆ ಎಂದು ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಹೇಳಿದರು. 

    ಅವರು ಪಟ್ಟಣದ ಪುರಸಭೆ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆ ಮೈದಾನದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಗುರುವಾರ ನಡೆದ 73ನೇ ಸ್ವಾತಂತ್ರ್ಯೋತ್ಸವ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜನ್ಮದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದೇಶದಲ್ಲಿ ಗಡಿ ಕಾಯುವ ಯೋಧರು, ದೇಶಕ್ಕೆ ಅಣ್ಣ ನೀಡುವ ರೈತರು ಭಾರತದ ಹೆಮ್ಮೆಯಾಗಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ತಮ್ಮ ಪ್ರಾಣವನ್ನೆ ಮುಡಿಪಾಗಿಸಿದ ಸ್ವಾತಂತ್ರ್ಯ ಹೋರಾಟಗಾರರ ಹಾದಿಯಲ್ಲಿ ಪ್ರತಿಯೊಬ್ಬರು ಮುನ್ನಡೆದು ಭವ್ಯ ಭಾರತ ನಿರ್ಮಾಣದ ಕನಸನ್ನು ನನಸು ಮಾಡಬೇಕು ಎಂದರು.

    ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಹದಿಂದಾದ ಅನೇಕ ತೊಂದರೆಗಳನ್ನು ಎದುರುಸಿ ಹೊಸ ಬದುಕು ಕಟ್ಟಿಕೊಳ್ಳುವಲ್ಲಿ ಎಲ್ಲ ಸಂತ್ರಸ್ತರು ಸನ್ನದ್ಧರಾಗಬೇಕು. ಅವರಿಗೆ ಬೇಕಾದ ಸಹಾಯ, ಸವಲತ್ತುಗಳನ್ನು ಸಕರ್ಾರ, ವೈಯುಕ್ತಿಕವಾಗಿ ಮಾಡಿಕೊಡುವುದಾಗಿ ತಿಳಿಸಿದರು. ಎಲ್ಲರಿಗೂ 73ನೇ ಸ್ವಾತಂತ್ರ್ಯೋತ್ಸವ, ರಾಯಣ್ಣನ ಜನ್ಮದಿನಾಚರಣೆ ಶುಭ ಹಾರೈಸಿದರು. 

      ವೇದಿಕೆ ಮೇಲೆ ತಾಪಂ.ಅಧ್ಯಕ್ಷೆ ನೀಲವ್ವ ಫಕ್ಕೀರಣ್ಣವರ, ಉಪಾಧ್ಯಕ್ಷ ಮಲ್ಲನಾಯ್ಕ ಭಾವಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಅಣ್ಣಪ್ಪ ಕಂಠಿ, ಮುರುಳಿಧರ ಮಾಳೋದೆ, ವಿಶ್ವನಾಥ ಮಾತಾಡೆ, ಜಿ.ಬಿ.ತುರಮರಿ, ಬಾಳಪ್ಪ ಚಳಕೊಪ್ಪ, ತಾಪಂ.ಇಓ ಸಮೀರ ಮುಲ್ಲಾ, ಡಿವೈಎಸ್ಪಿ ಜೆ.ಎಂ.ಕರುಣಾಕರಶೆಟ್ಟಿ, ಸಿಪಿಐ ಮಂಜುನಾಥ ಕುಸುಗಲ್ಲ, ಕ್ಷೇತ್ರಶಿಕ್ಷಣಾಧಿಕಾರಿ ಪಾರ್ವತಿ ವಸ್ತ್ರದ, ಪುರಸಭೆ ಮುಖ್ಯಾಧಿಕಾರಿ ಶಿವಪ್ಪ ಅಂಬಿಗೇರ, ಸಮಾಜ ಕಲ್ಯಾಣ ಅಧಿಕಾರಿ ಮಹೇಶ ಉಣ್ಣಿ, ಪುರಸಭೆ, ತಾಲ್ಲೂಕು ಪಂಚಾಯ್ತಿ ಸದಸ್ಯರು ್ಲ ಇದ್ದರು. 

    ತಹಸೀಲ್ದಾರ ಡಾ.ಡಿ.ಎಚ್.ಹೂಗಾರ ಸ್ವಾಗತಿಸಿದರು. ದೈಹಿಕ ಶಿಕ್ಷಕ ಬಸವರಾಜ ಭರಮಣ್ಣವರ ನಿರೂಪಿಸಿದರು. 

     ಪಿಎಸ್ಐ ಎಂ.ಎಸ್.ಹೂಗಾರ ನೇತೃತ್ವದಲ್ಲಿ ವಿವಿಧ ಶಾಲೆ, ಕಾಲೇಜು ವಿದ್ಯಾರ್ಥಿಗಳು ಶಿಸ್ತಿನ ಪಥ ಸಂಚಲನ ಮಾಡಿದರು.