ತಾಳಿಕೋಟಿ 18: ನಾಡಿನ ಖ್ಯಾತ ಮಕ್ಕಳ ಸಾಹಿತಿಗಳಲ್ಲಿ ಒಬ್ಬರಾದ ಪ್ರೋ.ಚಂದ್ರಗೌಡ ಕುಲಕರ್ಣಿ ಅವರು ರಚಿಸಿದ ಮಕ್ಕಳ ಕಾವ್ಯಗಳ ಸುದೀರ್ಘ ಪಯಣದ ಕುರಿತು ಮಕ್ಕಳ ಸಾಹಿತ್ಯಾಸಕ್ತ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡ ಕೃತಿ ಅವಲೋಕನಾ ಸಮಾರಂಭ ನಾಳೆ( ಜ.19) ರಂದು ನಡೆಯಲಿದೆ.
ಭಾನುವಾರ ಮುಂಜಾನೆ 10-00 ಘಂಟೆಗೆ ಪಟ್ಟಣದ ಎ.ಪಿ.ಎಂ.ಸಿ. ಸಭಾ ಭವನದಲ್ಲಿ ನಡೆಲಿರುವ ಈ ಕಾರ್ಯಕ್ರಮದಲ್ಲಿಧಾರವಾಡದ ಆನಂದ ಪಾಟೀಲ ಅವರುಗೆಳೆಯ ಮತ್ತು ಮಕ್ಕಳ ಸಾಹಿತ್ಯ ಪಯಣ ಕುರಿತು ,ತಮ್ಮಣ್ಣ ಬೀಗಾರ ಅವರು ಮಕ್ಕಳ ಸಾಹಿತ್ಯದ ವಸ್ತು ವಿಸ್ತಾರ ಹಾಗೂ ಡಾ. ಶಿವಲಿಂಗಪ್ಪ ಹಂದಿಹಾಳ ಅವರು ಕಲಾತ್ಮಕ ಅಭಿವ್ಯಕ್ತಿಯ ಹಂಬಲ ಎಂಬ ವಿಷಯವಾಗಿ, ಗುಂಡುರಾವ್ ದೇಸಾಯಿ ಅವರು ಉತ್ತರ ಕರ್ನಾಟಕದ ವಾತಾವರಣದ ನಡುವೆ, ಶಿಸು ಸಾಹಿತ್ಯ,ಡಾ. ವಿನಾಯಕ ಕಮತದ ಅವರು, ಕಾವ್ಯ ಸ್ಪಂದನ - ನಿರ್ವಹಣೆ ಹಾಗೂ ಶ್ರೀ ಫ.ಗು. ಸಿದ್ದಾಪುರ ಅವರು ಮಕ್ಕಳ ಸಾಹಿತ್ಯ ಒಡನಾಡಿ ಎಂಬ ವಿಷಯವಾಗಿ ಹಾಗೂ ಪ್ರೊ. ಚಂದ್ರಗೌಡ ಕುಲಕರ್ಣಿ ಅವರು ಮಕ್ಕಳ ಕಾವ್ಯ ಪಯಣ ಎಂಬ ವಿಷಯವಾಗಿ ಉಪನ್ಯಾಸ ನೀಡಲಿದ್ದಾರೆ.
ಕಾರ್ಯಕ್ರಮದ ಉಪಸ್ಥಿತಿಯನ್ನು ಪ್ರೊ. ಶೇಷಾಚಲ ಹವಾಲ್ದಾರ್ ವಹಿಸಿಕೊಳ್ಳಲಿದ್ದಾರೆ.ಕಾರ್ಯಕ್ರಮದಲ್ಲಿ ಶ್ರೀಕಾಂತ ಪತ್ತಾರ ಅವರು ಪ್ರಾಸ್ಥಾವಿಕ ಮಾತುಗಳನ್ನಾಡಲಿದ್ದಾರೆ. ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕಾ ಶರಣ ಸಾಹಿತ್ಯ ಪರಿಷತ್ತು, ತಾಲೂಕಾ ಮಕ್ಕಳ ಸಾಹಿತ್ಯ ಪರಿಷತ್ತು, ಸಹೃದಯಿ ಶಿಕ್ಷಕರ ಬಳಗ, ಕದಳಿ ವೇದಿಕೆ ತಾಳಿಕೋಟಿ ಅವರು ಉಪಸ್ಥಿತರು ಇರಲಿದ್ದಾರೆ .ತಾಳಿಕೋಟಿಯ ಮಕ್ಕಳ ಸಾಹಿತ್ಯಾಸಕ್ತರು ಭಾಗವಹಿಸಿ ಈ ಉಪನ್ಯಾಸ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಸಾಹೇಬಗೌಡ ಬಿರಾದಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.