ರಾಯಬಾಗ 27: ಬಾಲ್ಯ ವಿವಾಹ ದೇಶದ ಸಾಮಾಜಿಕ ಪಿಡುಗು ಆಗಿದೆ. ಭಾರತವನ್ನು ಬಾಲ್ಯ ವಿವಾಹ ಮುಕ್ತ ದೇಶ ಮಾಡಲು ಪ್ರತಿಯೊಬ್ಬರು ಸರ್ಕಾರದೊಂದಿಗೆ ಕೈಜೋಡಿಸಬೇಕೆಂದು ಹಿರಿಯ ದಿವಾಣಿ ನ್ಯಾಯಾಧೀಶ ಜಗದೀಶ ಬಿಸೇರೊಟ್ಟಿ ಹೇಳಿದರು.
ಬುಧವಾರ ಪಟ್ಟಣದ ಝೇಂಡಾ ಕಟ್ಟೆ ಹತ್ತಿರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಬಾಲ್ಯ ವಿವಾಹ ಮುಕ್ತ ಭಾರತ ಜಾಗೃತಿ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಧಾನ ದಿವಾಣಿ ನ್ಯಾಯಾಧೀಶೆ ಪ್ರಿಯಾ ಭಟ್ಟಡ, ವಕೀಲರ ಸಂಘದ ಅಧ್ಯಕ್ಷ ಪಿ.ಎಮ್.ದರೂರ, ಕಾರ್ಯದರ್ಶಿ ಎಸ್.ಬಿ.ಬಿರಾದಾರ ಪಾಟೀಲ, ಸಹ ಕಾರ್ಯದರ್ಶಿ ಬಿ.ಕೆ.ಶಿಂಗಾಡೆ, ಖಜಾಂಚಿ ಯು.ಎನ್.ಉಮ್ರಾಣಿ, ತಹಶೀಲ್ದಾರ ಸುರೇಶ ಮುಂಜೆ, ಬಿಇಒ ಬಸವರಾಜಪ್ಪ ಆರ್, ಸಿಪಿಐ ಬಿ.ಎಸ್.ಮಂಟೂರ, ದೈಹಿಕ ಪರೀವೀಕ್ಷಕ ಎಮ್.ಪಿ.ಜಿರಗ್ಯಾಳ, ವಕೀಲರಾದ ಎ.ಬಿ.ಪಡೋಲ್ಕರ, ಕೆ.ಆರ್.ಕೋಟಿವಾಲೆ, ಕೆ.ಎಮ್.ಮದಳಿ, ಪಿ.ಆರ್.ಖಡಟ್ಟಿ, ಕೆ.ಎಲ್.ಕೆರೂರೆ, ಮುಜಿಬ ಸಯ್ಯದ ಸೇರಿ ಶಾಲಾ ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದ್ದರು.