ಲೋಕದರ್ಶನ ವರದಿ
ಮೂಡಲಗಿ 10: ಮಕ್ಕಳ ಪ್ರತಿಭೆ ಆಧಾರಿತ ಶಿಕ್ಷಣಕ್ಕೆ ಇಂದಿನ ಶಿಕ್ಷಣದಲ್ಲಿ ಮೌಲ್ಯ ನೀಡುವುದು ಅವಶ್ಯವಿದೆ. ಮಕ್ಕಳಲ್ಲಿ ವಿಶೇಷ ಪ್ರತಿಭೆಗಳು ಸೂಪ್ತವಾಗಿದ್ದು ಅವುಗಳನ್ನು ಪ್ರಾಯೋಗಿಕ ತರಬೇತಿಯಾಧಾರಿತ ಶಿಕ್ಷಣ ಚಟುವಟಿಕೆ ಸಂಘಟಿಸುವದರ ಮೂಲಕ ಮಕ್ಕಳ ಪ್ರತಿಭೆ ಬೆಳೆಯುವಂತೆ ಶಿಕ್ಷಕ ಸಮುದಾಯ ಕರ್ತವ್ಯ ನಿಷ್ಠೆಯನ್ನು ತೋರುವುದು ಅವಶ್ಯವಿದೆ. ಕೇವಲ ಪುಸ್ತಕದ ವಿಷಯಗಳನ್ನು ಕಲಿಸಿ ಮಕ್ಕಳಿಗೆ ಪುಸ್ತಕ ಮಾತ್ರ ಜ್ಞಾನದ ಕ್ಷೇತ್ರ ಎಂದು ಬಿಂಬಿಸುವ ಬದಲಾಗಿ ಪಠ್ಯ ಪಠೇತರ ಚಟುವಟಿಕೆಗಳಿಂದ ಸಾಧಕರ ಜೀವನದ ಉದಾತ್ತ ದ್ಯೇಯಗಳನ್ನು ಇಂದಿನ ವೈಜ್ಞಾನಿಕ ಜಗತ್ತೀನ ಜೊತೆಗೆ ಸಾಮತ್ಯೆಗೊಳಿಸಿ ಮಕ್ಕಳಲ್ಲಿ ಇಂತಹ ಶಿಕ್ಷಣದ ಸ್ವಯಂತನವನ್ನು ಉಂಟುಮಾಡುವ ನೈದಾನಿಕ ಶಿಕ್ಷಣ ನೀಡುವ ಕೆಲಸ ಇಂದಿನ ಶಿಕ್ಷಣದ ಪದ್ದತಿಯಾಗಬೇಕೆಂದು ಖ್ಯಾತ ಶಿಕ್ಷಣ ತಜ್ಞರು & ಬೆಂಗಳೂರಿನ ಆಕ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಗುರುರಾಜ ಕರ್ಜಗಿ ಯವರು ಅಭಿಪ್ರಾಯಪಟ್ಟರು.
ಅವರು ಸ್ಥಳೀಯ ಆಕ್ಟ್ ಸಹಯೋಗದೊಂದಿಗೆ ನಡೆಯುತ್ತಿರುವ ಆರ್.ಡಿ.ಸಂಸ್ಥೆಯ ಶ್ರೀವಿದ್ಯಾನಿಕೇತನ ಸಿ.ಬಿ.ಎಸ್.ಇ. ಶಾಲೆಯಲ್ಲಿ ಹಮ್ಮಿಕೊಂಡ ವೈಜ್ಞಾನಿಕ ತಳಹದಿಯ ಮೇಲೆ ಮಕ್ಕಳ ಕಲಿಕೆ ತರಬೇತಿ ಕಾರ್ಯಕ್ರಮದಲ್ಲಿ ಶಿಕ್ಷಕರ ಜೊತೆಗೆ ಸಂವಾದ ನಡೆಸಿ ಉಪನ್ಯಾಸ ನೀಡುತ್ತಾ ಮಕ್ಕಳ ಪ್ರತಿಭಾವಂತರಾಗುವುದರಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದ್ದು ಖ್ಯಾತ ಉದ್ಯಮೆಗಾರರನ್ನು, ಕ್ರೀಡಾಪಟುಗಳನ್ನು, ವೈದ್ಯರನ್ನು, ಸಾಹಿತ್ಯಗಾರರನ್ನು, ಅಭಿಯಂತರರನ್ನು ನಿರ್ಮಾಣ ಮಾಡುವಲ್ಲಿ ಶಿಕ್ಷಕ ಉತ್ತಮ ನಿರ್ವಾಹಕನಂತೆ ಕೆಲಸ ಮಾಡಿದಾಗ ಮಾತ್ರ ಗುರುಭಕ್ತಿಗೆ ಪಾತ್ರನಾಗುತ್ತಾನೆ. ಗುರುವಿಗೆ ಸಮಾಜದಲ್ಲಿ ಉತ್ತಮ ಮೌಲ್ಯವಿದ್ದು ಅದರ ಉಳಿವಿಗೆ ಇಂದಿನ ಶಿಕ್ಷಕ ಸಮುದಾಯ ಆಧ್ಯತೆ ನೀಡುವುದು ಅವಶ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಸಂತೋಷ ತಮ್ಮಣ್ಣಾ ಪಾರ್ಶಿವಹಿಸಿಕೊಂಡು ಪ್ರಾಸ್ತಾವಿಕವಾಗಿ ಮಾತನಾಡಿ ಸಮಾಜ ಸೇವೆಯಲ್ಲಿ ಶಿಕ್ಷಕರ ಸೇವೆ ಅವೀಸ್ಮರಣಿಯವಾಗಿದ್ದು ಅದರಲ್ಲಿ ನಿಷ್ಠೆ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ್ದ ಶಿಕ್ಷಕ ಮಕ್ಕಳನ್ನು ತನ್ನ ಸ್ವಂತ ಮಕ್ಕಳಂತೆ ವಿದ್ಯಾರ್ಜನೆ ನೀಡಿದಾಗ ಮಾತ್ರ ಅವನ ಶ್ರಮ ಸ್ವಾರ್ಥಕವಾಗುವುದು ಎಂದರು.
ಕಾರ್ಯಕ್ರಮದಲ್ಲಿ ಶ್ರೀಮಹಾಲಕ್ಷ್ಮೀ ಬ್ಯಾಂಕಿನ ನಿರ್ದೇಶಕ ರಮೇಶ ಪಾಟೀಲ ಸಿಬ್ಬಂದಿ ಹಣಮಂತ ದೇಸಾಯಿ ಹಾಗೂ ಸಂಸ್ಥೆಯ ಸಿಬ್ಬಂದಿಯ ವರ್ಗ ಹಾಜರಿದ್ದರು. ಕಾರ್ಯಕ್ರಮದ ಶಾಲೆಯ ಪ್ರಾಚಾರ್ಯ ನಾಗರಾಜ ಭಾವಿ ಸ್ವಾಗತಿಸಿದರು ಅಶೋಕ ಬಸಳಿಗುಂದಿ ನಿರೂಪಿಸಿ ವಂದಿಸಿದರು.