ಲೋಕದರ್ಶನ ವರದಿ
ಶಿರಹಟ್ಟಿ 11: ತಾಲೂಕಿನ ಶ್ರೀಮಂತಗಡದ ಹೊಳಲಮ್ಮದೇವಿ ಯಾತ್ರಾ ಮಹೋತ್ಸವದ ಎರಡನೆ ದಿನದ ಕಾರ್ಯಕ್ರಮಕ್ಕೆಂದ ಆಗಮಿಸಿದ್ದ ಭಕ್ತರ ವಾಹನಗಳ ಅಪಘಾತದಿಂದ ಒರ್ವ 13 ವರ್ಷದ ಮಗು ಸಾವಪ್ಪಿರುವುದು ದುದರ್ೈವದ ಸಂಗತಿಯಾಗಿದೆ.
ಅದ್ದೂರಿಯಾಗಿ ಶ್ರೀಮಂತಗಡದ ಶ್ರೀ ಹೊಳಲಮ್ಮದೇವಿ ಜಾತ್ರಾ ಮಹೋತ್ಸವದ ಕೊನೆಯ ದಿನವಾದ ಸೋಮವಾರದಂದು ಜಾತ್ರೆಯನ್ನು ಮುಗಿಸಿ ಸಾಯಂಕಾಲ 7-30ರಿಂದ 8ಗಂಟೆಯ ಸಮಯದಲ್ಲಿ ತಮ್ಮ ಊರನ್ನು ವಾಪಾಸ್ಸಾಗುವ ಸಂದರ್ಭದಲ್ಲಿ ಗುಡ್ಡವನ್ನು ಇಳಿಯುವ ಸಂದರ್ಭದಲ್ಲಿ ಬುಲೋರೋ ವಾಹನ ಟ್ರ್ಯಾಕ್ಟರ ವಾಹನಕ್ಕೆ ಹಿಂಬದಿಗೆ ಬಂದು ಗುದ್ದಿದ ಪರಿಣಾಮ ಟ್ರ್ಯಾಕ್ಟರ ಹಿಂಬದಿಯಲ್ಲಿ ಕುಳಿರುವ ಸುಮಾರು 5-6 ಜನಕ್ಕೆ ಗಾಯಗಳಾಗಿವೆ. ಬುಲೋರೋ ವಾಹನದಲ್ಲಿರುವ ಕೊಂಚಿಗೇರಿಯ ಪ್ರಕಾಶ ಬಸಪ್ಪ ಮಲ್ಲಾಡದ (40) ಮತ್ತು ಈತನ ಮಗ ಸುಬ್ರಮಣ್ಯ (5)ಗಂಭೀರವಾದ ಘಾಯವಾಗಿವೆ. ಇವರಿಬ್ಬರನ್ನು ಶಿರಹಟ್ಟಿ ತಾಲೂಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಾಗಿದೆ.
ಓರ್ವ 13ವರ್ಷ ಮಗು ಸ್ಥಳದಲ್ಲಿಯೇ ಸಾವವನ್ನಪಿದ್ದಾನೆ! ಮಗುವಿನ ಬಗ್ಗೆ ಸಂಪೂರ್ಣವಾಗಿ ಮಾಹಿತಿ ತಿಳಿದು ಬಂದಿಲ್ಲ. ಮಾನವೀಯತೆಯನ್ನು ಮೆರದ ಸಿಪಿಐ ಆರ್.ಹೆಚ್.ಕಟ್ಟಿಮನಿ.
ಘಟನೆ ಜರುಗಿದ ಕೆಲವೇ ನಿಮಿಷದಲ್ಲಿ ಮಾಹಿತಿ ಪಡೆದ ವೃತ್ತ ನಿರೀಕ್ಷಕ ಸ್ಥಳಕ್ಕೆ ದೌಡಾಯಿಸಿ ಅಂಬ್ಯುಲೆನ್ಸಗೆ ಕರೆ ಮಾಡುವುದರ ಜೊತೆಗೆ ಗಾಯಾಳುಗಳನ್ನು ಹತ್ತಿರದ ಬೆಳ್ಳಟ್ಟಿ ಆಸ್ಪತ್ರೆಗೆ ರವಾನಿಸಿ ಗಂಭೀರ ಗಾಯಾಳುಗಳನ್ನು ತಮ್ಮ ವಾಹನದಲ್ಲೇ ಕರೆದೊಯ್ದು ಶಿರಹಟ್ಟಿ ತಾಲೂಕಾ ಅಸ್ಪತ್ರೆಗೆ ಬಂದು ತಲುಪಿದ್ದರಿಂದ 5 ವರ್ಷದ ಸುಬ್ರಮಣ್ಯನನ್ನು ಬದುಕಿಸಿದಂತಾಗಿದೆ.ಸೊಂಟದ ಕೆಳಭಾಗದಲ್ಲಿ ಬಲವಾದ ಪೆಟ್ಟು ಬಿದ್ದುದ್ದ ಸುಬ್ರಮಣ್ಯನನ್ನು ಸಾಕಷ್ಟು ನರಳಾಡುತ್ತಿದ್ದನು.ಸೂಕ್ತ ಸಮಯದಲ್ಲಿಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಿದ್ದರಿಂದ ಕೊಂಚ ಮಗುವಿನಲ್ಲ ಚೇತರಿಕೆ ಕಂಡು ಬಂದಿತು. ನಂತರ ಆ ಮಗುವನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಮಗ ಸುಬ್ರಮಣ್ಯ ಮತ್ತು ಗಂಡ ಪ್ರಕಾಶ ಬಲವಾದ ಪೆಟ್ಟು ಬಿದ್ದಿದ್ದರಿಂದ ಸಾಕಷ್ಟು ನರಳಾಟವನ್ನು ನೋಡಲಾರದೇ ಮಲ್ಲಮ್ಮ ಕೋಂ ಪ್ರಕಾಶ ಮಲ್ಲಾಡದ ಸಿಕ್ಕಸಿಕ್ಕವರಿ ಕಾಲು ಹಿಡಿದು ಗಂಡ ಮತ್ತು ಮಗುವಿನ ಪ್ರಾಣವನ್ನು ಉಳಿಸಿಕೊಡಿ ಎಂದು ಗೋಗರೆಯುತ್ತಿರುವ ದೃಶ್ಯ ಎಂತವರನ್ನು ಮನ ಕರುವಂತೆ ಮಾಡುವ ಸಂದರ್ಭ ಹೇಳತೀರದಾಗಿತ್ತು.