ಲೋಕದರ್ಶನ ವರದಿ
ಬೆಳಗಾವಿ 17: ಸಕರ್ಾರಿ ಶಾಲೆಗಳೆಂದರೆ ಮೂಗು ಮುರಿಯುವಂಥಹ ಇಂದಿನ ಪರಿಸ್ಥಿತಿಯಲ್ಲಿ ಸ್ವತಃ ಪಾಲಕರೆ ತಮ್ಮ ಮಕ್ಕಳು ಹಾಗೂ ಸಂಬಂಧಿಕರ ಮಕ್ಕಳನ್ನು ಸಹ ತಮ್ಮ ಮನೆಯಲ್ಲಿಯೇ ಇರಿಸಿಕೊಂಡು ಸಕರ್ಾರಿ ಪ್ರಾಥಮಿಕ ಶಾಲಾಶಿಕ್ಷಣವನ್ನು ಕೊಡಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಉತ್ತರಕನರ್ಾಟಕ ಜನಸಂಗ್ರಾಮ ಪರಿಷತ್ತಿನ ಪ್ರಧಾನ ಕಾರ್ಯದಶರ್ಿ ಮಂಜುನಾಥ ವಸ್ತ್ರದ ಸಂತಸ ವ್ಯಕ್ತ ಪಡಿಸಿದರು.
ಬೆಳಗಾವಿ ತಾಲ್ಲೂಕಿನ ಕುಕಡೊಳ್ಳಿ ಗ್ರಾಮದ ಸಕರ್ಾರಿ ಪ್ರಾಥಮಿಕ ಶಾಲೆಯಲ್ಲಿ "ಮಕ್ಕಳ ವಿಜ್ಞಾನ ಮೇಳ" ಯಶಸ್ಸುಗೊಳಿಸಿದ ಪ್ರಯುಕ್ತ ಶಿಕ್ಷಕರು ಹಾಗೂ ಪಾಲಕರಿಗೆ ಧನ್ಯವಾದ ಸಮಪರ್ಿಸಿ ಅವರು ಮಾತನಾಡಿದರು.
ಎರಡು ಕೈ ಸೇರಿದರೆ ಚಪ್ಪಾಳೆ ಎನ್ನುವಂತೆ ಶಾಲಾ ಶಿಕ್ಷಕರು ಹಾಗೂ ಪಾಲಕರು ಮತ್ತು ಇವರೊಂದಿಗೆ ಸಮುದಾಯವು ಸಹ ಕೈ ಜೋಡಿಸಿ ಕೆಲಸ ಮಾಡಿದ್ದೇ ಆದರೆ ಕಾನ್ವೆಂಟ್ ಶಾಲೆಗಳನ್ನು ಸಹ ಮೀರಿಸುವಂಥಹ ಆಕರ್ಷಣೆ ಹಾಗೂ ಗುಣಮಟ್ಟದ ಶಿಕ್ಷಣ ಸಾಧ್ಯ ಎಂಬುವದಕ್ಕೆ ಇಂಥಹ ಸಕರ್ಾರಿ ಶಾಲೆಗಳೆ ನಿದರ್ಶನವಾಗಿದೆ ಎಂದು ಅವರು ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು.
ಸಕರ್ಾರಿ ಶಿಕ್ಷಣದ ಉತ್ತೇಜನಕ್ಕಾಗಿ ಸಕರ್ಾರವು ಶಾಲಾ ಹೊಸ ಕೊಠಡಿಗಳ ನಿಮರ್ಾಣ ಕಾರ್ಯ ಹಾಗೂ ಮೂಲ ಸೌಕರ್ಯಗಳಿಗಾಗಿ ಅನುದಾನ ಬಿಡುಗಡೆ ಮಾಡಿದ್ದು, ತಮ್ಮ ಅಗತ್ಯಕ್ಕೆ ತಕ್ಕಂತೆ ರಿಪೇರಿ ಕಾರ್ಯಗಳನ್ನು ಮಾಡಿಸಿಕೊಳ್ಳುವಂತೆ ಅವರು ಸಲಹೆ ನೀಡಿದರು.
ಹಿರಿಯ ಸಾಮಾಜಿಕ ಕಾರ್ಯಕರ್ತ ಬಾಪು ನಾವಲಗಟ್ಟಿ ಮಾತನಾಡಿ, ಎಲ್ಲಾ ಚುನಾಯಿತ ಜನ ಪ್ರತಿನಿಧಿಗಳು ಸಕಾರಿ ಶಾಲಾ ಕಾಲೇಜುಗಳ ಆಂತರಿಕ ಹಾಗೂ ಬಾಹ್ಯ ಚಟುವಟಕೆಗಳ ಅಭಿವೃದ್ಧಿಯ ಬಗ್ಗೆ ಗಮನ ಹರಿಸಬೇಕು. ಇತ್ತೀಚಿನ ದಿನಗಳಲ್ಲಿ ಜನಪ್ರತಿನಿಧಿಗಳ ಸಂಬಂಧಿಗಳು ಇಲ್ಲಾ ಅವರ ಹಿಂಬಾಲಕರೇ ಗುತ್ತಿಗೆ ಕೆಲಸಗಳನ್ನು ನಿರ್ವಹಿಸುತ್ತಿದ್ದು ಶಿಕ್ಷಣ ಕ್ಷೇತ್ರದಲ್ಲಿಯೂ ಸಹ ತೀರಾ ಹಸ್ತಕ್ಷೇಪ ಮಾಡುತ್ತೀರುವ ಬಗ್ಗೆ ಸಾರ್ವಜನಿಕ ವಲಯದಿಂದ ದೂರುಗಳು ಕೇಳಿ ಬರುತ್ತಿವೆ. ಇದು ಹೀಗೆಯೆ ಮುಂದುವರೆದರೆ ಎಸಿಬಿ ಗೆ ದೂರು ನೀಡುವುದು ಹಾಗೂ ಸಾರ್ವಜನಿಕ ಹಿತಾಸಕ್ತಿ ಅಜರ್ಿ ಸಲ್ಲಿಸುವ ಬಗ್ಗೆ ಪರಿಶೀಲನೆ ನಡೆಸಬೇಕಾಗುತ್ತದೆ ಎಂದು ತಮ್ಮಯ ಅಸಮಾಧಾನ ವ್ಯಕ್ತಪಡಿಸಿದರು.
ಹೊಯ್ಸಳ ಸಂಸ್ಥೆಯ ಗೌರವ ಸದಸ್ಯ ಮನ್ಸೂರ್ ಅತ್ತಾರ್, ಯಾಕೂಬ ದೇವಲಾಪೂರ ಮುಂತಾದ ಅತಿಥಿಗಳಿಗೆ ಶಾಲಾ ಆಡಳಿತ ಮಂಡಳಿಯಿಂದ ಪ್ರಸ್ತಕಗಳ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಯು.ಡಿ.ಪಾಶ್ಚಾಪೂರ, ಎ.ಜೆ.ಮುಲ್ಲಾ, ಎಮ್.ಎನ್.ನಾಶಿ,ಬಿ.ಬಿ.ಗಾಣಿಗಿ, ಎ.ಎಸ್.ಹಂಚಿನಮನಿ ಮುಂತಾದವರು ಉಪಸ್ಥಿತರಿದ್ದರು.