ನವಜಾತ ಶಿಶುಗಳ ಆರೈಕೆ ಘಟಕಕ್ಕೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಭೇಟಿ
Child Rights Protection Commission visits newborn care unit
ಬಳ್ಳಾರಿ 18: ನಗರದ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾಕೇಂದ್ರದ ಎನ್‌ಆರ್‌ಸಿ ಘಟಕ, ವಿಶೇಷ ನವಜಾತ ಶಿಶುಗಳ ಆರೈಕೆ ಘಟಕ ಹಾಗೂ ಹೆರಿಗೆ ವಾರ್ಡ್‌ಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ್ ಕೋಸಂಬೆ, ಡಾ.ತಿಪ್ಪೇಸ್ವಾಮಿಕೆ.ಟಿ ನೇತೃತ್ವದತಂಡ ಬುಧವಾರ ಭೇಟಿ ನೀಡಿ ಪರೀಶೀಲಿಸಿದರು.
ಜಿಲ್ಲೆಯಲ್ಲಿ ಕಳೆದ ಐದು ತಿಂಗಳಲ್ಲಿ ನೂರಕ್ಕೂ ಹೆಚ್ಚು ನವಜಾತ ಶಿಶುಗಳ ಮೃತಪಟ್ಟಿರುವುದು ಕಳವಳಕಾರಿ ಸಂಗತಿಯಾಗಿದ್ದು, ವೈದ್ಯರುಇದನ್ನುಗಂಭೀರವಾಗಿ ಪರಿಗಣಿಸಬೇಕು.ನವಜಾತ ಶಿಶುಗಳ ಸಾವಿಗೆ ನಿಖರವಾಗಿಕಾರಣ ತಿಳಿದು, ಪರಿಹಾರ ಕಂಡುಕೊಳ್ಳಬೇಕು ಎಂದುರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾಆಯೋಗ ಸದಸ್ಯ ಶಶಿಧರ್ ಕೋಸಂಬೆ ಅವರು ಸೂಚಿಸಿದರು.
ಮಕ್ಕಳ ಅಪೌಷ್ಟಿಕ ಪುನಃಶ್ಚೇತನಘಟಕಕ್ಕೆ ಭೇಟಿ ನೀಡಿದತಂಡದಾಖಲಾದ ಮಕ್ಕಳ ಸ್ಥಿತಿಗತಿ ವಿಚಾರಿಸಿ, ಶೌಚಾಲಯಗಳನ್ನು ಪರೀಶೀಲಿಸಿದರು.ಬಾಲ ಚೈತನ್ಯಯೋಜನೆಯಡಿ 23 ಮಕ್ಕಳ ದಾಖಲಾಗಿವೆ. ಅರ್‌ಬಿಎಸ್‌ಕೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆಯಿಂದಜಿಲ್ಲೆಯಲ್ಲಿರುವ ಅಪೌಷ್ಟಿಕ ಮಕ್ಕಳನ್ನು ದಾಖಲಿಸಲು ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.
ಕಳೆದ ವರ್ಷ 48,569 ನವಜಾತ ಶಿಶುಗಳನ್ನು ಮಕ್ಕಳ ಚಿಕಿತ್ಸಾ ವಿಭಾಗದಲ್ಲಿದಾಖಲಾಗಿದ್ದವು.ಅದರಲ್ಲಿ 293 ನವಜಾತ ಶಿಶುಗಳು ವಿವಿಧ ಕಾರಣಗಳಿಂದ ಮೃತಪಟ್ಟಿವೆ. ಪ್ರಸಕ್ತ ವರ್ಷಜನವರಿಯಿಂದಏಪ್ರೀಲ್‌ವರೆಗೆ 1,119 ನವಜಾತ ಶಿಶುಗಳು ದಾಖಲಾಗಿದ್ದು, 103 ನವಜಾತ ಶಿಶುಗಳು ಮೃತಪಟ್ಟಿವೆ. ಮಕ್ಕಳ ಸಾವಿನ ಬಗ್ಗೆ ನಿಖರವಾದಕಾರಣ ತಿಳಿಯಬೇಕು ಎಂದು ವೈದ್ಯರಿಗೆ ನಿರ್ದೇಶನ ನೀಡಿದರು.
ಬಿಎಂಸಿಆರ್‌ಸಿ ಯ ವಿಶೇಷ ನವಜಾತ ಶಿಶುಗಳ ಆರೈಕೆಘಟಕ ಮತ್ತು ಹೆರಿಗೆ ವಾರ್ಡ್‌ನಲ್ಲಿ ಸೆಖೆ ಇದ್ದರೂಯಾಕೆ ಎಸಿ ಹಾಕಿಲ್ಲಎಂದು ವೈದ್ಯರನ್ನು ಪ್ರಶ್ನಿಸಿದರು.ಕೂಡಲೇ ಎಸಿ ಅಳವಡಿಕೆ ಸೂಚನೆ ನೀಡಿದರು.ಇದೇ ವೇಳೆ ದಾಖಲಾಗದ ಮಕ್ಕಳ ಮಾಹಿತಿ ಪಡೆದರು.
ಹೆರಿಗೆ ವಾರ್ಡ್‌ನಲ್ಲಿನ ಶೌಚಾಲಯ ಹಾಗೂ ಸ್ನಾನ ಗೃಹಗಳನ್ನು ಪರೀಶೀಲಿಸಿದರು. ಇಲ್ಲಿ ತಿಂಗಳಿಗೆ 700ಕ್ಕಿಂತ ಹೆಚ್ಚು ಹೆರಿಗೆಆಗುತ್ತಿವೆ. ಸ್ನಾನ ಗೃಹಗಳಲ್ಲಿ ಚಿಕ್ಕಗ್ರಾತದಗೀಜರ್‌ಯಿಂದ ಬರುವ ಬಿಸೀನೀರು ಬಾಣಂತಿಯರ ಸ್ನಾನಕ್ಕೆ ಸಾಕುಗುತ್ತದೆಯೇಎಂದು ವಿಚಾರಿಸಿದ ಅವರು ಬಾಣಂತಿಯರ ಸ್ನಾನಕ್ಕೆ ಬಿಸೀನೀರು ಕೊಡುವುದುಕರ್ತವ್ಯವಾಗಿದೆಎಂದು ತಿಳಿಸಿದರು.
ಬಳಿಕ ನಗರದಕಪ್ಪಗಲ್ಲುರಸ್ತೆಯ ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ ಬಾಲಕೀಯರ ವಸತಿ ನಿಲಯಕ್ಕೆಆಯೋಗದ ಸದಸ್ಯರು ಭೇಟಿ ನೀಡಿದಾಖಲಾತಿ, ಕೊಠಡಿ, ಶೌಚಾಲಯ ಸೇರಿದಂತೆಅಡುಗೆಕೋಣೆ ಪರೀಶೀಲಿಸಿದರು.
ಬಳಿಕ ಸಿರಿವಾರ ಗ್ರಾಮದ ಸರ್ಕಾರಿ ಶಾಲೆಗೆ ಭೇಟಿ ನೀಡಿ ಪರೀಶೀಲನೆ ನಡೆಸಿದರು.ಸಂಜೆ ನಂತರ ಶಾಲಾ ಆವರಣದಲ್ಲಿ ಹೊರಗಿನವರು ಬಂದುಅಹಿತಕರಚಟುವಟಿಕೆ ಕೈಗೊಳ್ಳುತ್ತಿರುವುದು ಸ್ಥಳೀಯರು ಗಮನಕ್ಕೆ ತಂದಿದ್ದು, ಪೊಲೀಸರು ನಿಯಮಿತವಾಗಿ ಬಿಟ್ ನಡೆಸಬೇಕುಎಂದು ಸೂಚಿಸಿದರು.
ಇನ್ನೋರ್ವ ಸದಸ್ಯರಾದ ವೆಂಕಟೇಶ್‌ಅವರು, ಅಲ್ಲೀಪುರಗ್ರಾಮದ ಬಳಿಯ ಅಲ್ಪಸಂಖ್ಯಾತರಕಲ್ಯಾಣಇಲಾಖೆಯ ಮೊರಾರ್ಜಿ ವಸತಿಕಾಲೇಜು ಮತ್ತು ನಿಲಯಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದರು.
ಈ ಸಂದರ್ಭದಲ್ಲಿಡಿಎಚ್‌ಒಡಾ.ವೈ.ರಮೇಶ್ ಬಾಬು, ಪರಿಶಿಷ್ಟ ವರ್ಗಗಳ ಕಲ್ಯಾಣಾಕಾರಿ ದಿವಾಕರ್ ಕೆ ಶಂಕಿನದಾಸರ, ಅಲ್ಪಸಂಖ್ಯಾತರಕಲ್ಯಾಣಇಲಾಖೆಯಜಿಲ್ಲಾಅಧಿಕಾರಿ ವಿಠೋಬಾ ಹೊನಕಾಂಡೆ, ಜಿಲ್ಲಾ ಮಕ್ಕಳ ರಕ್ಷಣಾಘಟಕದಅಧಿಕಾರಿ ಎಳೆ ನಾಗಪ್ಪ ಸೇರಿದಂತೆಇತರರುಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 