ಕೊಪ್ಪಳ 25: ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಯಲಬುಗರ್ಾ ತಾಲ್ಲೂಕಿನ ಬೇವೂರು ಹಿಂದುಳಿದ ವರ್ಗಗಳ ಮೊರಾಜರ್ಿ ದೇಸಾಯಿ ವಸತಿ ಶಾಲೆಯಲ್ಲಿ (ಸೆ.23) ಹಮ್ಮಿಕೊಳ್ಳಲಾದ 'ಮಕ್ಕಳ ಹಕ್ಕುಗಳ ಜಾಗೃತಿ' ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮದಲ್ಲಿ ಪ್ರತಿಭಾ ಬಿಕ್ಷಾವತಿಮಠ, ಮಕ್ಕಳ ನಾಲ್ಕು ಮುಖ್ಯ ಹಕ್ಕುಗಳಾದ ಬದುಕುವ, ರಕ್ಷಣೆಯ, ವಿಕಾಸ ಹೊಂದುವ ಹಾಗೂ ಭಾಗವಹಿಸುವ ಹಕ್ಕುಗಳ ಸಂಪೂರ್ಣ ವಿವರದೊಂದಿಗೆ 'ಮಕ್ಕಳ ಸುರಕ್ಷತಾ ನೀತಿಯ' - 2016ರನ್ವಯ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ತಿದ್ದುಪಡಿ ಕಾಯ್ದೆ-2019ರ ಕುರಿತು ವಿವರ ಹಾಗೂ ಸುರಕ್ಷಿತ ಸ್ಪರ್ಷ & ಅಸುರಕ್ಷಿತ ಸ್ಪರ್ಷದ ಕುರಿತು ಮಕ್ಕಳಿಗೆ ಅರಿವು ಮೂಡಿಸಿದರು.
ಮಕ್ಕಳ ಸಹಾಯವಾಣಿಯ ಸಂಯೋಜಕ ಶರಣಪ್ಪ ಸಿಂಗನಾಳ, ಮಕ್ಕಳ ಸಹಾಯವಾಣಿ-1098ರ ಬಳಕೆಯ ಹಾಗೂ ಕಾರ್ಯವೈಖರಿಯ ಬಗ್ಗೆ ತಿಳಿಸಿದರು. ಮೊರಾಜರ್ಿ ದೇಸಾಯಿ ವಸತಿಯುತ ಶಾಲೆಯ ಪ್ರಾಂಶುಪಾಲರಾದ ಮಂಜುನಾಥ ಗಾಣಿಗೇರ ಕಾರ್ಯಕ್ರಮ ಪ್ರಸ್ತಾವಿ ಮಾತನಾಡಿದರು, ಶಿಕ್ಷಕರಾದ ಶ್ರೀಶೈಲ ನಿರೂಪಿಸಿದರು ದೇವರಾಜ್ ತಿಲಗ ಕೊನೆಯಲ್ಲಿ ವಂದಿಸಿದರು.