ಬಾಲ್ಯ ವಿವಾಹ ನಿಯಂತ್ರಣ ಜಾಗೃತಿ

ಬೆಟಗೇರಿ :   ಗ್ರಾಮದ ವಿವಿಡಿ ಸಕರ್ಾರಿ ಪ್ರೌಢ ಶಾಲೆಯ ಸಹಯೋಗದಲ್ಲಿ ಬಾಲ್ಯ ವಿವಾಹ ನಿಯಂತ್ರಣ ಜಾಗೃತಿ ಕುರಿತು ಮತ್ತು ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಗಾಗಿ ವಿಶೇಷ ಉಪನ್ಯಾಸ ಹಾಗೂ ತಾಯಂದಿರ ಸಭೆಯ ಕಾರ್ಯಕ್ರಮ ಗುರುವಾರ ನ.14 ರಂದು ಮುಂಜಾನೆ 10 ಗಂಟೆಗೆ ಸ್ಥಳೀಯ ವಿವಿಡಿ ಸಕರ್ಾರಿ ಪ್ರೌಢ ಶಾಲೆಯ ಆವರಣದಲ್ಲಿ ನಡೆಯಲಿದೆ.

ಬಾಲ್ಯ ವಿವಾಹ ನಿಯಂತ್ರಣ ಜಾಗೃತಿಯ ಪ್ರಯುಕ್ತ 'ಕಲಿಯುವ ಕುವರಿಯರ ಕೊರಳಿಗೆ ಉರುಳೇಕೆ?' ಎಂಬ ವಿಷಯದ ಹಾಗೂ ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಗಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ, ತಾಯಂದಿರ ಸಭೆ ಜರುಗಲಿದ್ದು, ಮೂಡಲಗಿ ಶೈಕ್ಷಣಿಕ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ನೇತೃತ್ವ, ಸ್ಥಳೀಯ ವಿವಿಡಿ ಸರ್ಕಾರಿ ಪ್ರೌಢ ಶಾಲೆಯ ಎಸ್ಡಿಎಮ್ಸಿ ಅಧ್ಯಕ್ಷ ಕುತುಬುದ್ದೀನ್ ಮಿರ್ಜಾನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ವಿವಿಡಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.

ಬೆಳಗಾವಿ ವೀಶ್ವೇಶ್ವರಯ್ಯಾ ತಾಂತ್ರಿಕ ಮಹಾವಿದ್ಯಾಲಯದ ಉಪನ್ಯಾಸಕಿ ರಂಜನಾ ನಾಡಗೌಡ, ಕುಲಗೋಡ ಪಿಎಸ್ಐ ಹನಮಂತ ನರಳೆ, ಸ್ಥಳೀಯ ಪಿಎಚ್ಸಿ ವೈದ್ಯಾಧಿಕಾರಿ ಡಾ.ರಾಜೇಶ್ವರಿ ಹಿರೇಮಠ, ನ್ಯಾಯವಾದಿ ಎಮ್.ಐ.ನೀಲಣ್ಣವರ, ಶಿಕ್ಷಣಪ್ರೇಮಿ ಚಂದ್ರಶೇಖರ ನೀಲಣ್ಣವರ, ತಾಪಂ ಸದಸ್ಯ ಲಕ್ಷ್ಮಣ ನೀಲಣ್ಣವರ, ಗ್ರಾಪಂ ಅಧ್ಯಕ್ಷ ಈಶ್ವರ ಬಳಿಗಾರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಶಿಕ್ಷಣಪ್ರೇಮಿಗಳು, ಗಣ್ಯರು, ಹಿರಿಯ ನಾಗರಿಕರು, ತಾಯಂದಿರು, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಪ್ರೌಢ ಶಾಲೆಯ ಹಳೆಯ ವಿದ್ಯಾರ್ಥಿ - ವಿದ್ಯಾರ್ಥಿನಿಯರು, ಮತ್ತೀತರರು ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಪತ್ರಿಕಾ ಪ್ರಕಟನೆಗೆ ತಿಳಿಸಿದ್ದಾರೆ.