ಬಾಲಕಾರ್ಮಿಕ ಪದ್ಧತಿ: ಕಾನೂನು ಅರಿವು ನೆರವು ಕಾರ್ಯಕ್ರಮ

ಬಾಗಲಕೋಟೆ27: ಮಕ್ಕಳನ್ನು ಮನೆಗಳಲ್ಲಿ ಹೋಟಲ್ಗಳಲ್ಲಿ ಕಾಖರ್ಾನೆ ಸೇರಿದಂತೆ ಯಾವುದೇ ಅಪಾಯಕಾರಿ ವೃತ್ತಿಗಳಲ್ಲಿ ಕೆಲಸಕ್ಕಿಟ್ಟುಕೊಳ್ಳುವುದು ಅಪರಾದವಾಗಿದೆ ಎಂದು ಉದ್ಘಾಟಿಸಿದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಹೇಮಲತಾ ಹುಲ್ಲೂರ ಮಾತನಾಡಿದರು.

     ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ, ಕಾಮರ್ಿಕ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಥೆಯ ಬಾಲಕಾಮರ್ಿಕ ಕಾಯ್ದೆ 1986 ಹಾಗೂ ತಿದ್ದುಪಡಿ ಕಾಯ್ದೆ 2016ರ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ಜರುಗಿತು. 

 14 ವರ್ಷದ ಒಳಗಿನ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾಮರ್ಿಕರನ್ನು ಕೆಲಸಕ್ಕೆ ನಿಯೋಜಿಸಿ ಕೊಂಡಲ್ಲಿ ಮೊದಲ ಅಪರಾಧಕ್ಕೆ ಮಾಲಿಕರಿಗೆ 6 ತಿಂಗಳಿಂದ 2 ವರ್ಷದವರೆಗೆ ಜೈಲು ಶಿಕ್ಷೆ ಅಥವಾ 20 ಸಾವಿರ ರಿಂದ 50 ಸಾವಿರ ರೂ.ಗಳವರೆಗೆ ದಂಡ ಅಥವಾ ಎರಡನ್ನು ವಿಧಿಸಲು ಅವಕಾಶ ವಿರುತ್ತದೆ ಎಂದು ಹೇಳಿದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯೆ ತೇಜಸ್ವಿನಿ ಹಿರೇಮಠ ಮಾತನಾಡಿ ಬಡತನವೊಂದೆ ಬಾಲಕಾಮರ್ಿಕ ಪದ್ದತಿಗೆ ಕಾರಣವಲ್ಲ. ಹಿರಿಯರು, ಪಾಲಕರು ಕೆಲಸಕ್ಕೆ ಹೋಗದಿರುವುದು ಕೂಡಾ ಪ್ರಮುಖ ಕಾರಣ ಎಂದರು. ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಸರಕಾರ ಶಿಕ್ಷಣಕ್ಕೆ ಸಾಕಷ್ಟು ಪ್ರಮಾಣದಲ್ಲಿ ಅನುದಾನ ಬಿಡುಗಡೆ ಮಾಡುತ್ತಿದೆ. ಬಡತನಕ್ಕೆ ಮಕ್ಕಳು ದುಡಿಯುವುದೇ ಪರಿಹಾರವಲ್ಲವೆಂದರು. 

ಇನ್ನೋರ್ವ ಅತಿಥಿ ಸ್ಥಾನ ವಹಿಸಿದ್ದ ಕಾಮರ್ಿಕ ನಿರೀಕ್ಷಕ ಅಶೋಕ ಒಡೆಯರ ಮಾತನಾಡಿ ಮಕ್ಕಳನ್ನು ಕೆಲಸಕ್ಕೆ ಹಚ್ಚುವುದು ಅಪರಾಧ. ಬಾಲ ಕಾಮರ್ಿಕ ಪದ್ದತಿಯನ್ನು ಜನ ವಿರೋಧಿಸಬೇಕು. ಮತ್ತು ಬಾಲಕಾಮರ್ಿಕ ಪದ್ದತಿಯನ್ನು ತಡೆಯಲು ಮುಂದಾಗಬೇಕು.  ಬಾಲಕಾಮರ್ಿಕರನ್ನು ದುಡಿಸಿಕೊಳ್ಳುವ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ಕಾನೂನಿನಲ್ಲಿ ಇಲಾಖೆಯು ಕಠಿಣವಾದ ಶಿಕ್ಷೆ ನೀಡಲಾಗುವುದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡಬಸಪ್ಪ ನಿರಲಕೇರಿ ವಹಿಸಿದ್ದರು. 

ಪ್ರಾರಂಭದಲ್ಲಿ ಜಿಲ್ಲಾ ಬಾಲಕಾಮರ್ಿಕ ಯೋಜನಾ ಸಂಸ್ಥೆಯ ಯೋಜನಾ ನಿದರ್ೇಶಕ ಸುಧಾರಕರ ಬಡಿಗೇರಿ ಸ್ವಾಗತಿಸಿ ನಿರೂಪಿಸಿದರೆ, ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಸಹ ಶಿಕ್ಷಕ ಪಿ.ಎಸ್.ಗಿರಿಯಪ್ಪನವರ ವಂದಿಸಿದರು.