ಪ್ರಧಾನಿ ಮೋದಿ ಸಮಾವೇಶಕ್ಕೆ ಚಿಕ್ಕೋಡಿ ನಗರ ಸಜ್ಜು

ಲೋಕದರ್ಶನ ವರದಿ

ಚಿಕ್ಕೋಡಿ,17: ಚಿಕ್ಕೋಡಿ ಮತ್ತು ಬೆಳಗಾವಿ ಲೋಕಸಭೆ ಬಿಜೆಪಿ ಅಭ್ಯಥರ್ಿಗಳ ಪರ ಅಬ್ಬರದ ಪ್ರಚಾರ ನಡೆಸಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ಸಂಜೆ ಚಿಕ್ಕೋಡಿಗೆ ಆಗಮೀಸಲಿದ್ದಾರೆ. ಮೋದಿ ಆಗಮನದ ಹಿನ್ನಲ್ಲೆಯಲ್ಲಿ ಚಿಕ್ಕೋಡಿ ನಗರ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಬೀಗಿ ಪೊಲೀಸ್ ಬಂದೋಬಸ್ತ ಒದಗಿಸಿದ್ದಾರೆ.

ಚಿಕ್ಕೋಡಿ ಲೋಕಸಭೆ ಬಿಜೆಪಿ ಅಭ್ಯಥರ್ಿ ಅಣ್ಣಾಸಾಹೇಬ ಜೊಲ್ಲೆ ಮತ್ತು ಬೆಳಗಾವಿ ಲೋಕಸಭೆ ಬಿಜೆಪಿ ಅಭ್ಯಥರ್ಿ ಸುರೇಶ ಅಂಗಡಿ ಪರವಾಗಿ ಬೃಹತ್ ಸಮಾವೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ. ನಗರದ ಬಿ.ಕೆ.ಕಾಲೇಜಿನ ಮುಂಭಾಗದಲ್ಲಿ ಬೃಹತ್ ಮೈದಾನ ಸಿದ್ಧಗೊಂಡಿದೆ. ಮೋದಿ ಕಾರ್ಯಕ್ರಮಕ್ಕೆ ಚಿಕ್ಕೋಡಿ ಲೋಕಸಭೆ, ಬೆಳಗಾವಿ ಕ್ಷೇತ್ರದ ಸುಮಾರು ಎರಡು ಲಕ್ಷ ಜನ ಸೇರುವ ನಿರೀಕ್ಷೆಯನ್ನು ಬಿಜೆಪಿ ನಾಯಕರು ಹೊಂದಿದ್ದಾರೆ. ಇದರ ಜೊತೆಗೆ ನೆರೆಯ ಮಹಾರಾಷ್ಟ್ರದ ಸಾಂಗ್ಲೀ ಹಾಗೂ ಕೊಲ್ಲಾಪೂರ ಲೋಕಸಭೆ ಕ್ಷೇತ್ರದ ಜನ ಕೂಡಾ ಆಗಮೀಸಿ ಮೋದಿ ಭಾಷಣ ಆಲಿಸಲಿದ್ದಾರೆ.

ಮೋದಿ ಬರುವ ಹಿನ್ನಲ್ಲೆಯಲ್ಲಿ ಸುರಕ್ಷತೆಗಾಗಿ  ಪೊಲೀಸ್ ಇಲಾಖೆ ನಗರದಲ್ಲಿ 1357 ಜನ ಸಿಬ್ಬಂದಿಯನ್ನು ನಿಯೋಜಿಸಿದೆ. ನಾಲ್ಕು ಜನ ಎಸ್ಪಿ, ಐದು ಜನ ಡಿವೈಎಸ್ಪಿ, 26 ಸಿಪಿಐ, 70 ಜನ ಪಿಎಸ್ಐ, ನಾಲ್ಕು ಡಿಆರ್ ಮತ್ತು 9 ಕೆಎಸ್ಆರ್ಪಿ ತುಕಡಿಗಳ ನಿಯೋಜನೆ ಮಾಡಿದೆ. ವಿವಿಧ ಕಡೆಗಳಿಂದ ಸಮಾವೇಶಕ್ಕೆ ಬರುವ ಜನರಿಗೆ ನಗರದ ಎರಡು ಕಿ.ಮೀ ದೂರದಲ್ಲಿ ಪಾಕರ್ಿಂಗ ವ್ಯವಸ್ಥೆ ಕಲ್ಪಿಸಿದೆ. 

ಸಮಾವೇಶದಲ್ಲಿ ಪಾಲ್ಗೊಳ್ಳುವ ವಿವಿಐಪಿ, ವಿಐಪಿಗಳಿಗೆ ಮತ್ತು ಪತ್ರಕರ್ತರಿಗೆ ಪಾಸ್ ಇದ್ದವರಿಗೆ ಮಾತ್ರ ಮುಂಭಾಗದಲ್ಲಿ ಅವಕಾಶ ನೀಡಲಿದೆ. ಟ್ರಾಪಿಕ್ ಜಾಂಬ್ ಆಗದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಗೊಂಡು ಸಮಾವೇಶ ಯಶಸ್ವಿಯಾಗಲು ಪೊಲೀಸ್ ಮತ್ತು ಬಿಜೆಪಿ ಪಕ್ಷದ ಪದಾಧಿಕಾರಿಗಳು ಹಗಲಿರುಳು ಶ್ರಮೀಸುತ್ತಿದ್ದಾರೆ.

ಕಳೆದ 2018ರ ವಿಧಾನಸಭೆ ಚುನಾವಣೆ ವೇಳೆಯಲ್ಲಿ ಬಿಜೆಪಿ ಅಭ್ಯಥರ್ಿಗಳ ಪರ ಪ್ರಧಾನಿ ನರೇಂದ್ರ ಮೋದಿ ಅಬ್ಬರದ ಪ್ರಚಾರ ನಡೆಸಿದ್ದರು. ಎರಡನೆ ಬಾರಿಗೆ ಚಿಕ್ಕೋಡಿ ನಗರಕ್ಕೆ ಆಗಮೀಸುವ ನರೇಂದ್ರ ಮೋದಿ ಸ್ವಾಗತಕ್ಕೆ ಚಿಕ್ಕೋಡಿ ಸಜ್ಜುಗೊಂಡಿದೆ. ಮೋದಿ ಕಾರ್ಯಕ್ರಮ ಯಶಸ್ವಿಗೊಳಿಸಲು ಬಿಜೆಪಿ ಅಭ್ಯಥರ್ಿ ಅಣ್ಣಾಸಾಹೇಬ ಜೊಲ್ಲೆ, ಶಾಸಕಿ ಶಶಿಕಲಾ ಜೊಲ್ಲೆ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಶಾಸಕ ದುಯರ್ೋಧನ ಐಹೋಳೆ, ಪಿ.ರಾಜೀವ, ಉಮೇಶ ಕತ್ತಿ, ಮಾಜಿ ಶಾಸಕ ಲಕ್ಷ್ಮಣ ಸವದಿ, ರಾಜು ಕಾಗೆ, ಜಿಲ್ಲಾ ಬಿಜೆಪಿ ಅಧ್ಯಕ್ಷ ಶಶಿಕಾಂತ ನಾಯಿಕ  ಸೇರಿದಂತೆ ಮುಂತಾದವರು ಟೊಂಕ ಕಟ್ಟಿ ನಿಂತಿದ್ದಾರೆ.