ರೈತರ ಮೇಲಿನ ಕೇಸ್ ವಜಾಗೊಳಿಸುವಂತೆ ಮುಖ್ಯಮಂತ್ರಿ ಮನವಿ

ರಾಣೇಬೆನ್ನೂರು11: ರಾಜಧಾನಿ ಬೆಂಗಳೂರಿಗೆ ತೆರಳಿದ ಕನರ್ಾಟಕ ರಾಜ್ಯ ರೈತ ಸಂಘದ ಹಾವೇರಿ ಜಿಲ್ಲಾಧ್ಯಕ್ಷ ಈರಣ್ಣ ಹಲಗೇರಿ ಅವರ ನೇತೃತ್ವದ ತಂಡವು ಶುಕ್ರವಾರ ನಿಯೋಗ ತೆರಳಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿಧಾನಸೌಧ ಕಛೇರಿಗೆ ಭೇಟಿ ನೀಡಿ ರೈತರ ಮೇಲೆ ಹಾಕಿರುವ ಮೊಕದ್ದಮೆಗಳನ್ನು ವಜಾಗೊಳಿಸುವಂತೆ ಮನವಿ ಸಲ್ಲಿಸಿದರು. 

ನಿಯೋಗದ ಮುಖಂಡ ಈರಣ್ಣ ಹಲಗೇರಿ ಮಾತನಾಡಿ ರಾಜ್ಯದಲ್ಲಿ ಬೇರೆ-ಬೇರೆ ಭಾಗಗಳಲ್ಲಿಯೂ ಸೇರಿದಂತೆ  ಹಾವೇರಿ ಜಿಲ್ಲೆಯುಲ್ಲಿಯೇ 250ಕ್ಕೂ ಹೆಚ್ಚು  ರೈತರ ಮೇಲೆ ಪ್ರತಿಭಟಿಸಿದ ಸಂದರ್ಭದಲ್ಲಿ ಕೇಸುಗಳನ್ನು ದಾಖಲಿಸಿಕೊಂಡಿದ್ದು, ಅವುಗಳನ್ನು ಕೂಡಲೇ ವಜಾಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.  

ರೈತರ ಮನವಿ ಸ್ವೀಕರಿಸಿ ಮಾತನಾಡಿದ ಮುಖ್ಯಂತ್ರಿ ಯಡಿಯೂರಪ್ಪನವರ ರೈತರ ಮನವಿಯನ್ನು ಆಲಿಸಿ ಈ ಕೂಡಲೇ ತಮ್ಮ ಮನವಿಯನ್ನು ಸೂಕ್ತ ಕ್ರಮಕ್ಕಾಗಿ ರವಾನಿಸಿ, ತಕ್ಷಣವೇ ಪರಿಶೀಲನೆ ಮಾಡಿ ಮೊಕದ್ದಮೆಗಳನ್ನು ವಜಾಗೊಳಿಸವಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. 

ಮನವಿ ಸಲ್ಲಿಕೆ ನಿಯೋಗದಲ್ಲಿ ಜಿಲ್ಲಾಕಾರ್ಯದಶರ್ಿ ಸುರೇಶ ಮಲ್ಲಾಪುರ, ದಿನೇಶ ಮಾಕನೂರ, ಸುರೇಶ ಹೆಡಿಯಾಲ, ಉಮೇಶ ಮಾಸಣಗಿ, ಶೇಖಪ್ಪ ಅರಳಿ, ಲಕ್ಷ್ಮಣ ಚೌಟಿ, ಸುರೇಶ್ ಮಡ್ಲೂರ, ವೀರಪ್ಪ ಗಂಗಣ್ಣನವರ, ಬಸವರಾಜ ಹೊಳಲವರ ಮತ್ತು ಮಾಕನೂರ ಹೆಡಿಯಾಲ ರೈತರು ಪಾಲ್ಗೊಂಡಿದ್ದರು.