ಮಾಂಜರಿ 23: ಚಿಕ್ಕೋಡಿ ಅಥಣಿ ರಾಯಬಾಗ ನಿಪ್ಪಾಣಿ ಕಾಗವಾಡ ಹಾಗೂ ಗಡಿ ಭಾಗದ ಕಾರ್ಯ ವ್ಯಾಪ್ತಿ ಹೊಂದಿರುವ ಚಿಕ್ಕೋಡಿಯ ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಪ್ರಸಕ್ತ ಸಾಲಿನ ಕಬ್ಬು ಅರಿವ ಹಂಗಾಮಿನಲ್ಲಿ ಒಂದು ದಿವಸ ಕಬ್ಬ ಅರಿದು 9ಲಕ್ಷ 99 ಸಾವಿರ ಮೆಟ್ರಿಕ್ ಟನ್ ಕಬ್ಬು ಅರೆದು ಸಕ್ಕರೆ ಉತ್ಪಾದನ ಜೊತೆಗೆ ವಿದ್ಯುತ್ ಮತ್ತು ಇಥೇನಾಲ್ ಉತ್ಪಾದಿಸಲಾಗಿದೆ ಎಂದು ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲ್ಲಿಕಾರ್ಜುನ್ ಕೋರೆ ಹೇಳಿದರು.
ಅವರು ಶನಿವಾರರಂದು ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಪ್ರಸಕ್ತ ಸಾಲಿನ ಕಬ್ಬ ಅರೆಯುವ ಹಂಗಾಮು ಮುಕ್ತಾಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ತಾತ್ಯಾಸಾಹೇಬ್ ಕಾಟೆ ನಿರ್ದೇಶಕರಾದ ಭರತೇಶ್ ಬಣವಣೆ, ಅಜಿತ್ ರಾವ್ ದೇಸಾಯಿ ವ್ಯವಸ್ಥಾಪಕ ನಿರ್ದೇಶಕ ಆರ್ ಬಿ ಖಂಡಗಾವಿ ಪ್ರಧಾನ ವ್ಯವಸ್ಥಾಪಕ ಎನ್.ಎಸ್. ಹಿರೇಮಠ್ ಹಾಜರಿದ್ದರು.
ರಾಜ್ಯಸಭೆಯ ಮಾಜಿ ಸದಸ್ಯ ಹಾಗೂ ಕೆಎ ಲ್‌ಇ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ್ ಕೋರೆ ರಾಷ್ಟ್ರೀಯ ಸಕ್ಕರೆ ಕಾರ್ಖಾನೆ ಮಹಾಮಂಡಳ ಹೊಸದೆಹಲಿಯ ನಿರ್ದೇಶಕ ಯುವ ಮುಖಂಡ ಅಮಿತ್ ಕೋರೆ ಇವರ ಮಾರ್ಗದರ್ಶನದಲ್ಲಿ ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯೂ ಕಬ್ಬು ಬೆಳೆಯುವ ರೈತರಿಗೆ ಹಾಗೂ ಸದಸ್ಯರಿಗೆ ಹಲವಾರು ಜನಪರ ಯೋಜನೆಗಳ ನೀಡುವ ಜತೆಗೆ ಸದಸ್ಯರ ಆರೋಗ್ಯ ದೃಷ್ಟಿಕೋನ ಮತ್ತು ಸದಸ್ಯರ ಜಮೀನಿಗೆ ನೀರಾವರಿ ಯೋಜನೆಯ ಮುಖಾಂತರ ಯೋಜನೆಗಳನ್ನು ತಲುಪಿಸಲಾಗಿದೆ ಎಂದು ಅವರು ಹೇಳಿದರು.
ಪ್ರಸಕ್ತ ಸಾಲಿನ ಸಕ್ಕರೆ ಕಾರ್ಖಾನೆಯ ಅತಿ ಹೆಚ್ಚು ಕಬ್ಬು ಪೂರೈಸಿದ ರೈತ ಕಬ್ಬು ಸಾಗಾಣಿಕೆ ದಾರ ಕಬ್ಬು ಕಟಾವ ಕಾರ್ಮಿಕ ಹಾಗೂ ಹಂಗಾಮಿಗೆ ಸಹಕಾರಿ ನೀಡಿದವರಿಗೆ ಉಪಸ್ಥಿತಿ ಮಾನ್ಯರ ಹಸ್ತದಿಂದ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ಮಲ್ಲಪ್ಪ ಮೈಶಾಳೆ, ಭೀಮಗೌಡ ಪಾಟೀಲ್, ಮಹಾವೀರ್ ಕತ್ರಾಳೆ, ಅಣ್ಣಾಸಾಹೇಬ ಇಂಗಳೆ ಹಾಗೂ ಇನ್ನುಳಿದ ನಿರ್ದೇಶಕರು ಸಕ್ಕರೆ ಕಾರ್ಖಾನೆ ಎಲ್ಲ ವಿಭಾಗದ ಪ್ರಮುಖರು ಕಾರ್ಮಿಕರು ಅಧಿಕಾರಿ ವರ್ಗ ಮತ್ತು ಕಬ್ಬು ಬೆಳೆಯುವ ರೈತ ಸದಸ್ಯರು ಹಾಜರಿದ್ದರು. ವ್ಯವಸ್ಥಾಪಕ ನಿರ್ದೇಶಕ ಎನ್.ಎಸ್. ಹಿರೇಮಠ ಸ್ವಾಗತಿಸಿ ನಿರೂಪಿಸಿ ವಂದಿಸಿದರು.