ನವದೆಹಲಿ, ಮೇ 13, ಪಿ ಎಂ ಕೇರ್ಸ್ ನಿಧಿಯಿಂದ ವಲಸೆ ಕಾರ್ಮಿಕರಿಗೆ ಹಂಚಿಕೆ ಮಾಡಿರುವ 1, 000 ಕೋಟಿ ರೂಪಾಯಿ ಅವರಿಗೆ ತಲುಪುವ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ. ಲಾಕ್ ಡೌನ್ ನಿಂದ ತೀವ್ರ ಸಂಕಷ್ಟಕ್ಕೀಡಾಗಿರುವ ವಲಸೆ ಕಾರ್ಮಿಕರಿಗೆ 1000 ಕೋಟಿ ರೂಪಾಯಿ ಹಣದಲ್ಲಿ ಅವರ ಕೈಗೆ ಸೇರುವುದು ಮಾತ್ರ ಶೂನ್ಯ ಎಂದಿದ್ದಾರೆ.
ದಯಮಾಡಿ ತಪ್ಪು ತಿಳಿಯಬೇಡಿ, ಈ ಹಣ ವಲಸೆ ಕಾರ್ಮಿಕರಿಗೆ ಬದಲಾಗಿ ರಾಜ್ಯ ಸರ್ಕಾರಗಳಿಗೆ ಹೋಗಲಿದೆ. ವಲಸೆ ಕಾರ್ಮಿಕರ ಪ್ರಯಾಣ ಖರ್ಚು, ವಸತಿ, ಔಷಧಿ, ಆಹಾರ ಇತರ ವೆಚ್ಚಗಳನ್ನು ಭರಿಸಲು ರಾಜ್ಯ ಸರ್ಕಾರಗಳಿಗೆ ಈ ಹಣ ಹೊಂದಿಸಲಾಗುತ್ತದೆಯೇ ಹೊರತು ವಲಸೆ ಕಾರ್ಮಿಕರ ಕೈಗಳಿಗೆ ಹಣ ಹೋಗುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆಎಲ್ಲ ಆದಾಯ ಮಾರ್ಗಗಳನ್ನು ಮುಚ್ಚಿಬಿಟ್ಟರೆ ವಲಸೆ ಕಾರ್ಮಿಕರು ಬದುಕು ಸಾಗಿಸುವುದಾದರೂ ಹೇಗೆ? ಎಲ್ಲ ಅಡತಡೆಗಳನ್ನು ದಾಟಿ ತಮ್ಮ ಹಳ್ಳಿಗಳಿಗೆ ವಾಪಸ್ ಹೋಗಿರುವ ವಲಸೆ ಕಾರ್ಮಿಕನಿಗೆ ಗ್ರಾಮದಲ್ಲಿ ಉದ್ಯೋಗ ಲಭಿಸುವುದಿಲ್ಲ. ಇದರಿಂದ ಆದಾಯ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಆ ಕಾರ್ಮಿಕ ತನ್ನ ಕುಟುಂಬವನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂದು ಚಿದಂಬರಂ ಟ್ವೀಟ್ ನಲ್ಲಿ ಪ್ರಶ್ನಿಸಿದ್ದಾರೆ.