ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠಕ್ಕೆ ಅಮೇರಿಕೆ ಶಿಕಾಗೋ ನಿವಾಸಿ ಸಾಹಿತಿ ರವಿ ಹಂಜ್ ಭೇಟಿ
Chicago-based writer Ravi Hanj visits Amminabawi Sansthan Panchagriha Hiremath
ಲೋಕದರ್ಶನ ವರದಿ
‘ಬಸವಪೂರ್ವದಲ್ಲಿ ವೀರಶೈವ-ಇಷ್ಟಲಿಂಗ ಎಲ್ಲವೂ ಇತ್ತು’
ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠಕ್ಕೆ ಅಮೇರಿಕೆ ಶಿಕಾಗೋ ನಿವಾಸಿ ಸಾಹಿತಿ ರವಿ ಹಂಜ್ ಭೇಟಿ
ಧಾರವಾಡ 05: ಬಸವಪೂರ್ವ ಯುಗದಲ್ಲಿಯೇ ವೀರಶೈವ-ಲಿಂಗಾಯತ ಧರ್ಮದ ಆಚರಣೆ, ಇಷ್ಟಲಿಂಗದ ಪರಿಕಲ್ಪನೆ, ಅರ್ಚನೆ-ಆರಾಧನೆ ಎಲ್ಲವೂ ಇತ್ತು. ಆದರೆ ಪೂರ್ವಾಗ್ರಹ ಪೀಡಿತ ನೆಲೆಯಲ್ಲಿ ಈಗ ಕೆಲವೇ ಕೆಲವು ಜನರ ಗುಂಪು ವಿಶಾಲ ವೀರಶೈವ-ಲಿಂಗಾಯತ ಧರ್ಮವನ್ನು ಕೇವಲ 12ನೆಯ ಶತಮಾನಕ್ಕಷ್ಟೇ ಸೀಮಿತಗೊಳಿಸಿ ವಾದ ಮಂಡಿಸುತ್ತಿರುವುದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ ಎಂದು ಅಮೇರಿಕೆಯ ಶಿಕಾಗೋ ನಿವಾಸಿ ಸಾಹಿತಿ, ಸಂಶೋಧಕ, ಅಂಕಣಕಾರ ರವಿ ಹಂಜ್ ನುಡಿದರು.
ಅವರು ಗುರುವಾರ ತಾಲೂಕಿನ ಅಮ್ಮಿನಬಾವಿ ಗ್ರಾಮದ ಬಸವಪೂರ್ವ ಯುಗಕ್ಕೆ ಸೇರಿದ ಚಾರಿತ್ರಿಕ ಸಂಸ್ಥಾನ ಪಂಚಗೃಹ ಹಿರೇಮಠಕ್ಕೆ ಭೇಟಿ ನೀಡಿ ಶ್ರೀಮಠದ ದಾಖಲೆಗಳ ಕಡತ ವೀಕ್ಷಿಸಿದ ನಂತರ ತಮ್ಮ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದರು. ಮಠದ ಪಟ್ಟಾಧಿಕಾರಕ್ಕೆ ಸಂಬಂಧಿಸಿದ ಒಂದು ಒಪ್ಪಂದ ಪತ್ರದಲ್ಲಿ ಶ್ರೀಶಾಲಿವಾಹನ ಶೆಕೆ 1131 ಎಂದು ನಮೂದಿಸಿದ್ದು, ಅದು 816 ವರ್ಷಗಳ ಹಿಂದಿನ ಪತ್ರವಾಗಿದೆ. ಈ ಪತ್ರದ ವಿಷಯ ವಸ್ತು ಪರಿಗಣಿಸಿದರೆ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠಕ್ಕೆ ಸುಮಾರು ಒಂದು ಸಾವಿರ ವರ್ಷಗಳಿಗೂ ಅಧಿಕವಾದ ಪ್ರಾಚೀನತೆ ಇರುವುದು ಗೋಚರವಾಗುತ್ತದೆ. ಬಸವಪೂರ್ವ ಯುಗದಲ್ಲಿ ವೀರಶೈವ-ಲಿಂಗಾಯತ ಧರ್ಮದ ಆಚರಣೆ ಹಾಗೂ ಇಷ್ಟಲಿಂಗದ ಪೂಜೆ ಇತ್ತು ಎನ್ನುವುದಕ್ಕೆ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠವೇ ಸಾಕ್ಷಿ ನುಡಿಯುತ್ತದೆ ಎಂದರು.
ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠವು ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಶ್ರೀರಂಭಾಪುರಿ ಜಗದ್ಗುರು ಪೀಠದ ಶಾಖಾಮಠವಾಗಿದ್ದು, ಎಲ್ಲಾ ಪಂಚಪೀಠಗಳಿಗೆ ವ್ಯಾಪಕ ಪ್ರಾಚೀನತೆ ಇದೆ. ಪಂಚಪೀಠಗಳ ಜಗದ್ಗುರುಗಳು ವೀರಶೈವ-ಲಿಂಗಾಯತ ಧರ್ಮದ ಆದಿ ಗುರುಪರಂಪರೆಯ ನೇತೃತ್ವವಹಿಸಿ ಸಾವಿರಾರು ವರ್ಷಗಳಿಂದಲೂ ಧರ್ಮ ಜಾಗೃತಿ ಕೈಂಕರ್ಯಕ್ಕೆ ಮಾರ್ಗದರ್ಶನ ಮಾಡಿದ್ದಾರೆ ಎಂದೂ ರವಿ ಹಂಜ್ ಅಭಿಪ್ರಾಯಪಟ್ಟರು.
ಪ್ರಥಮ ಬಾರಿಗೆ ಶ್ರೀಮಠಕ್ಕೆ ಭೇಟಿ ನೀಡಿದ ರವಿ ಹಂಜ್ ಅವರಿಗೆ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಶಾಲು ಹೊದಿಸಿ ಗೌರವಿಸಿ ಫಲಮಂತ್ರಾಕ್ಷತೆ ಅನುಗ್ರಹಿಸಿ ಆಶೀರ್ವದಿಸಿದರು. ಲೇಖಕ ಗುರುಮೂರ್ತಿ ಯರಗಂಬಳಿಮಠ, ಪತ್ರಕರ್ತ ಎಸ್.ಎಂ.ಪ್ರಶಾಂತ ರಾಜಗುರು, ಶಿಕ್ಷಕ ವಿನಾಯಕ ಹಿರೇಮಠ, ವೀರಯ್ಯ ಹಿರೇಮಠ, ಸೋಮಲಿಂಗಶಾಸ್ತ್ರಿ ಗುಡ್ಡದಮಠ ಇತರರು ಇದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 