ಛತ್ರಪತಿ ಶಿವಾಜಿ ಮಹಾರಾಜರ ಜಯಂತೋತ್ಸವ ಸಮಾರಂಭ

Chhatrapati Shivaji Maharaj Jayantotsava Ceremony

ರಾಣೇಬೆನ್ನೂರು: ಫೆ 22 ನಗರದ ಸ್ವಕುಳಸಾಳಿ ಸಮಾಜದ   ಜಿಹ್ವೇಶ್ವರ ಯುವಕ ಮಂಡಳಿ,  ಹಾಗೂ   ಜಿಹ್ವೇಶ್ವರ ಮಹಿಳಾ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ   ಛತ್ರಪತಿ ಶಿವಾಜಿ ಮಹಾರಾಜರ ಜಯಂತೋತ್ಸವ ಸಮಾರಂಭವು ವಿಜೃಂಭಣೆಯಿಂದ ಆಚರಿಸಲಾಯಿತು.  ಪಾಲ್ಗೊಂಡಿದ್ದ ಯುವಕ ಮಂಡಳದ ಅಧ್ಯಕ್ಷ ಆಶ್ರಯ ಏಕಬೋಟೆ ಅವರು   ಶಿವಾಜಿ ಮಹಾರಾಜರು ಹಿಂದು ಧರ್ಮದ ಸಂಘಟನೆಗೆ ಒತ್ತು ನೀಡುವ ಮೂಲಕ ಸನಾತನ ಧರ್ಮದ  ಅರಿವು ಮೂಡಿಸುವ ಕೈಂಕರ್ಯವು ಇಂದಿನ ಯುವ ಸಮುದಾಯಕ್ಕೆ ಸ್ಪೂರ್ತಿ  ದಾಯಕವಾಗಿದೆ ಎಂದರು.  

ಶಿವಾಜಿ ಮಹಾರಾಜರು ಹಿಂದುಗಳನ್ನು ಒಂದು ಗೂಡಿಸುತ್ತಾ ತನ್ನ ಖಡ್ಗವನ್ನು ಝಳಪಿಸುತ್ತಾ ಮೊಘಲರಿಗೆ ದೊಡ್ಡ ಕಂಟಕವಾಗಿ ಕಂಡವರು ಅಲ್ಲದೆ  ಸಮಗ್ರ ದೇಶದ ಮತ್ತು  ಕ್ಷತ್ರೀಯರ ರಕ್ತ ಹೆಚ್ಚು ಕೆಂಪು ಎಂದು ತನ್ನ ಧೈರ್ಯ, ಶೌರ್ಯ, ಹೋರಾಟದ ಮೂಲಕ ಮೊಘಲರಿಗೆ ತೋರಿಸಿ ಕೊಟ್ಟ ಮರಾಠಾ ಯೋಧರು ಅವರಾಗಿದ್ದರು ಎಂದರು.  

ಶಿವಾಜಿ ಮಹಾರಾಜರ ಶೂರತ್ವ, ಆಡಳಿತದಲ್ಲಿ ಕೌಶಲ್ಯ ಹಾಗೂ ಪಾರದರ್ಶಕತೆ ನಮಗೆ ಪ್ರೇರಣೆ ನೀಡುತ್ತದೇ . ತನ್ನ ಆಡಳಿತದಲ್ಲಿ ಎಲ್ಲಾ ಸಮುದಾಯದವರಿಗೂ ಪ್ರಾತಿನಿಧ್ಯ ನೀಡಿದ ಮಹಾನ್ ಸಾಮ್ರಾಟ, ಮೊಘಲರು ಮಧ್ಯ ಭಾರತ, ದಕ್ಷಿಣ ಭಾರತ ಪ್ರವೇಶಿಸಿ ತಮ್ಮ ಸಾಮ್ರಾಜ್ಯ ಸ್ಥಾಪನೆಗೆ ಪ್ರಯತ್ನಿಸುತ್ತಿರುವ ಮೊದಲೇ ಶಿವಾಜಿ ಅವಕಾಶ ನೀಡದೆ ಅವರ ಕನಸ್ಸನ್ನು ಚೂರು, ಚೂರು ಮಾಡಿದ ಇವರು ತಾರತಮ್ಯ ಇಲ್ಲದೆ ಎಲ್ಲ ವರ್ಗದವರನ್ನು ಕಾಳಜಿ, ಪ್ರೀತಿ, ಗೌರವದಿಂದ ಕಾಣುತ್ತಿದ್ದರು. ಅಪ್ರತಿಮ ದೇಶಭಕ್ತರಾಗಿದ್ದರು ಎಂದು ಹೇಳಿದರು.  

ಹಿಂದೂ ಧರ್ಮ, ಮತ್ತು ಸಂಸ್ಕೃತಿ   ರಕ್ಷೀಸುವಲ್ಲಿ ಇವರ ಶ್ರಮ ನಮಗೆಲ್ಲ ಪ್ರೇರಣೆ, ಮತ್ತು ಮಾದರಿಯಾಗಿದೆ ಎಂದರು.  

ಮಹಿಳಾ ಮಂಡಳಿ ಅಧ್ಯಕ್ಷೆ   ರಾಜೇಶ್ವರಿ ಏಕಬೋಟೆ ಅವರು ಮಾತನಾಡಿ,   ಶಿವಾಜಿ ಮಹಾರಾಜರ ಬಾಲ್ಯದ ಶೂರತ್ವವನ್ನು ಪರಿಚಯಿಸುವ ರೋಮಾಂಚಕ ಕತೆಯ ಮೂಲಕ ಕೊಂಡಾಡಿ ಹಾಡಿ ಹೊಗಳಿದರು. ತನ್ನ ತಾಯಿ ಮಾತುಗಳನ್ನು ಪಾಲಿಸಲು ಕೊಟೆ ಒಳಗಡೆ ಯಾವ ವೈರಿ ಪ್ರವೇಶ ಮಾಡದಂತೆ ಧೈರ್ಯ, ಶೌರ್ಯ ತೋರಿದ ಬಾಲಕ ಶಿವಾಜಿ ಎಲ್ಲರ ಗಮನ ಸೆಳೆದಿದ್ದಾರೆ. ತಾಯಿ ನಡೆಸಿದ ಪರೀಕ್ಷೆಯಲ್ಲಿ ಬಾಲಕ ಶಿವಾಜಿ ಗೆದ್ದು ತನ್ನ ಸಾಹಸ ತೋರಿದ ಮಹಾನ್ ಸಾಹಸಿ ಎಂದರು.  ಮುಖಂಡರಾದ  ವೆಂಕಟೇಶ ಏಕಬೋಟೆ  ಅವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.   ಸಮಾಜದ ಅಧ್ಯಕ್ಷ ವಿಠ್ಠಲ ಏಡಕೆ, ನೀಲಕಂಠಪ್ಪ ರೋಖಡೆ, ಧೀರೇಂದ್ರ ಏಕಬೋಟೆ, ಭರತ ಏಕಬೋಟೆ, ಶ್ರೀನಿವಾಸ ಪಾಣಿಭಾತೆ, ರಾಜು ಕ್ಷೀರಸಾಗರ, ಯುವಕ ಮಂಡಳ ಮತ್ತು ಮಹಿಳಾ ಮಂಡಳದ ಸದಸ್ಯರು ಮತ್ತಿತರ ಮುಖಂಡರು ಮಹಿಳೆಯರು ಉಪಸ್ಥಿತರಿದ್ದರು.