ಛತ್ರಪತಿ ಶಿವಾಜಿ ಮಹಾರಾಜ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ
Chhatrapati Shivaji Maharaj Arts, Commerce and Science Pre-University College
ಧಾರವಾಡ 27: ಸನ್ 2025 26 ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಮತ್ತು ವಾರ್ಷಿಕ ಸ್ನೇಹ ಸಮ್ಮೇಳನವನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿತ್ತು ,ಈ ಸಮಾರಂಭವನ್ನು ಮರಾಠಾ ವಿದ್ಯಾ ಪ್ರಸಾರಕ ಮಂಡಳದ ಅಧ್ಯಕ್ಷರಾದ ಸನ್ಮಾನ್ಯ ಮನೋಹರ ಎನ್. ಮೋರೆ ಅವರು ದೀಪ ಬೆಳಗಿಸುವುದರ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಶ್ರೀ ಚನ್ನಪ್ಪ ಜಾಧವ ನಿವೃತ್ತ ಪ್ರಾಚಾರ್ಯರು ಸರ್ವೋದಯ ಪಿ.ಯು.ಕಾಲೇಜ ಶಿರೋಳ ಅವರು ಆಗಮಿಸಿ ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡು ಸಮಸ್ಯೆಗಳು ಎದುರಾದಾಗ ಹೆದರುವುದರ ಬದಲು ಪರಿಹಾರ ಹುಡುಕುವುದನ್ನು ಪ್ರೇರಣೆಯಾಗಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಮರಾಠಾ ವಿದ್ಯಾ ಪ್ರಸಾರಕ ಮಂಡಳದ ಉಪಾಧ್ಯಕ್ಷರಾದ ಯಲ್ಲಪ್ಪ ಭೀಮಪ್ಪ ಚವ್ಹಾಣ ಅವರು ಅಧ್ಯಕ್ಷತೆಯ ನುಡಿಗಳನ್ನು ನುಡಿದರು .
ಅತಿಥಿಗಳಾಗಿ ಆಗಮಿಸಿದ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಸುನಿಲ ಪ. ಮೋರೆ ಗೌರವ ಕಾರ್ಯದರ್ಶಿಗಳಾದ ರಾಜು ತಿ. ಬಿರಜೆನವರ ಸಹ ಕಾರ್ಯದರ್ಶಿಗಳಾದ ರಾಜು ಜ್ಯೋತಿಬಾ ಕಾಳೆ ಕಾಲೇಜು ಸುಧಾರಣಾ ಸಮಿತಿಯ ಅಧ್ಯಕ್ಷರಾದ ಪುರುಷೋತ್ತಮ ನಾಗಪ್ಪ ಜಾಧವ ನಿರ್ದೇಶಕರಾದ ಶಿವಾಜಿ ಸೂರ್ಯವಂಶಿ ಸುಭಾಷ ಧ. ಪವಾರ ಪ್ರಸಾದ ಶಾಮರಾವ ಹಂಗಳಕಿ ಉಪಸ್ಥಿತರಿದ್ದರು ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶೈಲಶ್ರೀ ಎಂ.ಸಂಕೋಜಿ ಅವರು ಪ್ರಸ್ತಾವಿಕವಾಗಿ ನುಡಿದರು ಉಪನ್ಯಾಸಕರದ ಕೆ. ಎಸ್. ಮಡಿವಾಳರ ಸ್ವಾಗತಿಸಿದರು ಕಾರ್ಯಕ್ರಮದ ನಿರೂಪಣೆಯನ್ನು ಉಪನ್ಯಾಸಕರಾದ ಎಲ್.ಬಿ.ಮೇಟಿ ನಿರೂಪಿಸಿ ವಂದಿಸಿದರು ಕಾರ್ಯಕ್ರಮಕ್ಕೆ ಉಪನ್ಯಾಸಕ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 