ತಾಳಿಕೋಟಿ 20: ಶ್ರೀ ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ದಿ. 19 ಬುಧವಾರ ದಂದು ಛತ್ರಪತಿ ಶಿವಾಜಿ ಜಯಂತಿ ಆಚರಣೆ ಮಾಡಲಾಯಿತು
ಈ ಸಮಯದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎಸ್.ಎಂ.ಸಜ್ಜನ ಅವರು ಅವರ ಆದರ್ಶ ಮತ್ತು ಮೌಲ್ಯಗಳು ಹಿಂಸೆ ಹಾಗೂ ಆಕ್ರಮಣದಿಂದ ಜಗತ್ತನ್ನು ಗೆಲ್ಲವು ಸಾದ್ಯವಿಲ್ಲ ಭಾರತದ ಸಂಸ್ಕೃತಿಯಾದ ಸೌಹೌರ್ದತೆ ಪ್ರೀತಿ ಹಾಗೂ ಕುಶಲ ಯುದ್ದ ನೀತಿಯಿಂದ ಕ್ರೌರ್ಯವನ್ನು ಮೇಟಿ ನಿಲ್ಲಬಹುದು ಎಂದು ತೋರಿಸಿದ ನಿಜವಾದ ನಾಯಕ ಎಂದರು.
ಈ ಸಮಯದಲ್ಲಿ ಸಂಸ್ಥೆಯ ಕಾಯದರ್ಶಿ ವಿವೇಕಾನಂದ ಸಜ್ಜನ, ಮುಖ್ಯಗುರುಗಳಾದ ಬಿ.ಜಿ.ಸಜ್ಜನ, ಆರ್.ಎಸ್.ದೇಸಾಯಿ, ಬಿ.ಎಸ್.ಮಾಲಿಪಾಟೀಲ್ ದೈಹಿಕ ಶಿಕ್ಷಕ ಶಿವಾನಂದ ಸುಣದಳ್ಳಿ, ಪಿಯು ಕಾಲೇಜ್ ಪ್ರಾಚಾರ್ಯ ಕಿಶೋರಗೌಡ, ಸಿಬಿಎಸ್‌ಇ ಪ್ರಾಚಾರ್ಯ ಜಯಚಂದ್ರ, ಬಿಎಡ್ ಕಾಲೇಜ್ ಪ್ರಾಚಾರ್ಯ ಜಿ.ಎನ್.ಪಾಟೀಲ, ಸರ್ವ ಸಿಬ್ಬಂದಿವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.