ಛತ್ರಪತಿ ಮಹಾರಾಜ್ ದೇಶ ಕಂಡ ಅಪ್ರತಿಮ ಮಹಾನ್ ಪುರುಷ

ರಾಣೇಬೆನ್ನೂರು19: ಛತ್ರಪತಿ ಮಹಾರಾಜ್ ಅವರು ಭಾರತ ದೇಶ ಕಂಡ ಅಪ್ರತಿಮ ಮಹಾನ್ ದೈವಿ ಪುರುಷ.  ಮೊಘಲರ ರಾಜ್ಯಾಡಳಿತದಿಂದಾಗಿ ಅಂದು ಹಿಂದೂ ಧರ್ಮ ಅನೇಕ ರೀತಿಯಲ್ಲಿ ಸಂಕಷ್ಟವನ್ನು ಅನುಭವಿಸುವಂತಾಗಿತ್ತು. ಅಂತಹ ಸಂದರ್ಭದಲ್ಲಿ ಧೃತಿಗೆಡದ ಶಿವಾಜಿ ಮಹಾರಾಜರು ಮಾವಳಿಯರನ್ನು ಸಂಘಟಿಸಿದವರಾಗಿದ್ದಾರೆ.  ಅಲ್ಲದೇ, ಬಾದಶಾಹರನ್ನು ಸೆದೆಬಡಿದು ಹಿಂದೂವಿ ಸ್ವರಾಜ್ಯವನ್ನು ಸ್ಥಾಪಿಸಿದ ಧೀರ ದಿಟ್ಟ ನಾಯಕರಾಗಿದ್ದಾರೆ ಎಂದು ಇಲ್ಲಿನ ಶಭರಿ ನಗರದ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದ ಧರ್ಮದರ್ಶಿ  ಜಿ.ಡಿ.ಮಾಲತೇಶ ಅವರು ಇಲ್ಲಿನ ದೇವಸ್ಥಾನ ಸಭಾಭವನದಲ್ಲಿ ನಡೆದ ಹಿಂದೂ ರಾಷ್ಟ್ರ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜ ಅವರ 393ನೇ ಜನ್ಮದಿನೋತ್ಸವದ ಆರಾಧನ ಮಹೋತ್ಸವ ಧಾರ್ಮಿಕ  ಕಾರ್ಯಕ್ರಮ ದಿವ್ಯಸಾನಿಧ್ಯವಹಿಸಿ ಮಾತನಾಡಿದರು.  

ಅಂದು 1674ರಲ್ಲಿ ಔಪಚಾರಿಕವಾಗಿ ರಾಯಘಡದಲ್ಲಿನ ತನ್ನ ಸಾಮ್ರಾಜ್ಯದ ಛತ್ರಪತಿಯಾಗಿ ಕಿರಿಟ ಧಾರಣೆ ಮಾಡಿದ್ದಾರೆ ಅವರು ಶಿಸ್ತಿನ ಸೈನಿಕ ಸುಸಜ್ಜಿತ ಆಡಳಿತಗಾರ.  ಸಂಘಟನೆಗಳ ಸಹಾಯದಿಂದ ಸಮರ್ಥ ಮತ್ತು ಪ್ರಗತಿಶೀಲ ನಾಗರೀಕ ನಿಯಮವನ್ನು ಸ್ಥಾಪಿಸಿದ ಮಹಾನ್ ಸಾಧಕ ಎಂದ ಅವರು ಪ್ರಾಚೀನ ಹಿಂದೂ ರಾಜಕೀಯ ಮತ್ತು ನ್ಯಾಯಾಲಯದ ಸಂಪ್ರದಾಯಗಳನ್ನು ಪುನರುಜ್ಜೀವನಗೊಳಿಸಿದವರು. ನ್ಯಾಯಾಲಯ ಮತ್ತು ಆಡಳಿತದಲ್ಲಿ ಪರ್ಷಿಯನ್ ಬದಲಿಗೆ ಮರಾಠಿ ಮತ್ತು ಸಂಸ್ಕೃತದ ಭಾಷೆ ಬಳಕೆಗೆ ಉತ್ತೇಜನ ನೀಡಿದವರಾಗಿದ್ದಾರೆ ಎಂದರು. 

ಇದೇ ಸಂದರ್ಭದಲ್ಲಿ ಅರುಣಕುಮಾರ ಪೂಜಾರ, ನಗರಸಭಾ ಸದಸ್ಯರಾದ ಗಂಗಮ್ಮ ಹಾವನೂರ, ಶಶಿಧರ ಬಸೇನಾಯ್ಕರ, ಪ್ರಕಾಶ್ ಚಿನ್ನಿಕಟ್ಟಿ, ನಾಗಪ್ಪ ಲಮಾಣಿ ಮೊದಲಾದವರನ್ನು ಸಮಿತಿಯ ಪರವಾಗಿ ಅಭಿನಂದಿಸಿ ಸನ್ಮಾನಿಸಲಾಯಿತು. 

ವೇದಿಕೆಯಲ್ಲಿ ನಾರಾಯಣಪ್ಪ ಜಾಧವ, ಲಿಂಗಪ್ಪ ಅಂತರವಳ್ಳಿ, ಪರಸಪ್ಪ ಬಾಕಪ್ಪನವರ, ಎಂ.ಡಿ.ಭವಾನಿ, ಗೀತಮ್ಮ ಕಠಾರೆ, ನಾರಾಯಣ ಮಾಳಗಿಮನಿ, ಶೋಭಾ ಮು. ಗೊಂಧಕರ ಸೇರಿದಂತೆ ಅನೇಕ ಗಣ್ಯರು ನೂರಾರು ಭಕ್ತರು, ಮಹಿಳೆಯರು ಪಾಲ್ಗೊಂಡಿದ್ದರು.