ಸಿರುಗುಪ್ಪ 72ನೇ ಸ್ವಾತಂತ್ರ್ಯ ದಿನ ಆಚರಣೆ ಪೂರ್ವಭಾವಿ ಸಭೆ


ಲೋಕದರ್ಶನ ವರದಿ

ಸಿರುಗುಪ್ಪ04: ತಾಲ್ಲೂಕು ಆಡಳಿತ ಆಗಷ್ವ 15ರಂದು ಜರುಗುವ  72ನೇ ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಕ್ರಮಭದ್ಧವಾಗಿ ಆಚರಣೆ ಮಾಡಬೇಕು, ಎಂದು ತಹಶೀಲ್ದಾರ್ ಎಂ ಸುನಿತಾ ಹೇಳಿದರು ತಾಲೂಕಲ್ಲಿ ಎಲ್ಲ ಸಂಘ ಸಂಸ್ಥೆಗಳ ಸಂಸ್ಥೆ ವಿವಿಧ ಇಲಾಖೆ ಶಾಲಾ ಕಾಲೇಜುಗಳಲ್ಲಿ ಬೆಳಿಗ್ಗೆ 7-30 ರೊಳಗೆ ರಾಷ್ಟ್ರಧ್ವಜಾರೋಹಣ ನೆರವೆರಿಸುವುದು.  

          ತಾಲ್ಲೂಕು ಕ್ರೀಡಾ ಮೈದಾನದಲ್ಲಿ ಬೆಳಿಗ್ಗೆ 9 ಗಂಟೆಗೆ ತಹಸೀಲ್ದಾರರಿಂದ ಭಾರತದ ಧ್ವಜಾರೋಹಣ ಮಾಡಿ, ವಂದನೆ ಸ್ವೀಕಾರ ಹಾಗೂ ಶಾಂತಿ ಸಂದೇಶ ನೀಡುವುದು. ಎಲ್ಲಾ ಕಚೇರಿ ಕಟ್ಟಡ ವೃತ್ತಗಳಿಗೆ ವಿದ್ಯುತ್ ದೀಪಾಲಂಕಾರ ಮಾಡುವುದು. ಎಲ್ಲಾ ಶಾಲಾ ಕಾಲೇಜು ಮಕ್ಕಳಿಂದ ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡೆ, ವಿವಿಧ ಸ್ಪಧರ್ೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಬಹುಮಾನ ಪ್ರದಾನ, ಶಾಸಕರು, ಜಿಲ್ಲಾ, ತಾಲೂಕು,  ನಗರಸಭೆ, ತಾಲೂಕು ಪಂಚಾಯಿತಿ, ಎಲ್ಲಾ ಜನಪ್ರತಿನಿಧಿಗಳು, ಗಣ್ಯರಿಗೆ, ಗೌರವ ರಕ್ಷೆ ಕ್ರಮಬದ್ಧವಾಗಿ ಎಲ್ಲಾ ಅಧಿಕಾರಿಗಳು ಸಮಯಕ್ಕೆ ಪಾಲ್ಗೊಳ್ಳಬೇಕೆಂದು ಸಭೆ ನಿರ್ಧರಿಸಿತು. 

            ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಡಿ. ಭಜಂತ್ರಿ, ವಿಜಯ ರಂಗಾರೆಡ್ಡಿ, ಸಾಕ್ಷರ ಭಾರತ್ ಪ್ರೇಮಿ, ಸಾಮಾಜಿಕ ಕಾರ್ಯಕರ್ತ ಎ.ಅಬ್ದುಲ್ ನಬಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನಾ ಅಧಿಕಾರಿ ಉಷಾ, ತಾಲ್ಲೂಕು ಪಂಚಾಯತ್ ಅಲ್ಲಾಭಕ್ಷಿ, ಗ್ರೇಡ್ -2 ತಹಸೀಲ್ದಾರ್ ಬಿ. ಮಲ್ಲೇಶಪ್ಪ, ಉಪತಹಸೀಲ್ದಾರ್ ಶಶಿಕಾಂತ, ಕಂದಾಯ ಪರಿವೀಕ್ಷಕ ಎಸ್. ಮೊಹಮ್ಮದ್ ಸಾಧಿಕ್, ಸಮಾಜ ಕಲ್ಯಾಣ ಇಲಾಖೆಯ ಹುಲಿಗಪ್ಪ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿದರ್ೆಶಕ ವಿಶ್ವನಾಥ್, ನಗರಸಭೆಯ ಶೋಭಾ, ಅಬಕಾರಿ, ಲೋಕೋಪಯೋಗಿ,  ಪೊಲೀಸ್, ಕೃಷಿ, ಆರೋಗ್ಯ, ಆಹಾರ, ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಜರಾಗಿ ಸಲಹೆ ಸೂಚನೆ ನೀಡಿದರು.