ಬೆಳಗಾವಿ 23: ಬ್ರಿಟಿಷರ ವಿರುದ್ಧ ಹೋರಾಡಿದ್ದ ವೀರ ಮಹಿಳೆ ರಾಣಿ
ಚೆನ್ನಮ್ಮ ಅವರ ಉತ್ಸವ ದಿನದಂದೇ
ನಗರದ ಚೆನ್ನಮ್ಮ ಪುತ್ಥಳಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಮಹಾನಗರ
ಪಾಲಿಕೆ ವಿರುರ್ದಧ ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು
ನಗರದ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ರಸ್ತೆ ತಡೆದ ಕಾರ್ಯಕರ್ತರು ರಸ್ತೆಯಲ್ಲೇ
ಮಲಗಿ, ಬೊಬ್ಬೆ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು. ಇಂದಿನಿಂದ ಮೂರು ದಿನಗಳ ಕಾಲ
ಕಿತ್ತೂರು ಉತ್ಸವ ಆರಂಭವಾಗಿದೆ. ಉತ್ಸವದ ಅಂಗವಾಗಿ ಪಾಲಿಕೆ ಅಧಿಕಾರಿಗಳು ಇಲ್ಲಿನ ಚೆನ್ನಮ್ಮ ವೃತ್ತದಲ್ಲಿರುವ ಚೆನ್ನಮ್ಮ ಪುತ್ಥಳಿಗೆ, ಬಣ್ಣ ಬಳಿದು ಸಿಂಗಾರ
ಮಾಡಿ ಗೌರವ ನೀಡಬೇಕಿತ್ತು. ಆದರೆ
ಮಹಾನಗರ ಪಾಲಿಕೆ ನಿರ್ಲಕ್ಷ್ಯ ತೋರುವ ಜತೆಗೆ ಚೆನ್ನಮ್ಮಳಿಗೆ ಅವಮಾನ ಮಾಡಿದೆ ಎಂದು ಕನ್ನಡ ಪರ
ಸಂಘಟನೆಗಳು ಪಾಲಿಕೆ ಆಯುಕ್ತರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಹೃದಯಭಾಗದಲ್ಲಿರುವ ಚೆನ್ನಮ್ಮ
ವೃತ್ತದ ನಾಲ್ಕೂ ರಸ್ತೆ ತಡೆದು, ರಸ್ತೆ ಮೇಲೆಯೇ ಮಲಗಿದ ಕಾರ್ಯಕರ್ತರು ಪಾಲಿಕೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ರಾಣಿ ಚೆನ್ನಮ್ಮಳಿಗೆ ಪಾಲಿಕ
ಕೊಡುತ್ತಿರುವ ಗೌರವ ಇದೆನಾ ಎಂದು
ಅಸಮಾಧಾನ ವ್ಯಕ್ತಪಡಿಸಿದ ಕಾರ್ಯಕರ್ತರು ಪಾಲಿಕೆ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ ತಡೆದು, ಸಂಚಾರ ಸಮಸ್ಯೆ ತಲೆದೋರಿದ ಕಾರಣ ಸ್ಥಳಕ್ಕೆ ಆಗಮಿಸಿದ
ಪೊಲೀಸರು ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿಕೊಂಡರು. ಇದಕ್ಕೆ
ಜಗ್ಗದ ಕನ್ನಡ ಸಂಘಟನೆಗಳು ಪ್ರತಿಭಟನೆ ಹಿಂಪಡೆಯಲು ಹೇಳಬೇಡಿ ಎಂದು ಪೊಲೀಸರ ಕಾಲು
ಹಿಡಿದ ಘಟನೆಯೂ ನಡೆಯಿತು. ಪರಿಣಾಮ ಅರ್ಧಗಂಟೆಗೂ ಅಧಿಕ ಸಮಯ ಸಂಚಾರ
ಸಮಸ್ಯೆ ಕಾಣಿಸಿಕೊಂಡಿತು. ಒಂದು ಕಿಮೀವರೆಗೆ ವಾಹನಗಳು
ನಿಂತ ಕಾರಣ ಪ್ರಯಾಣಿಕರು ಪರದಾಡಬೇಕಾಯಿತು. ಎಸಿಪಿ
ಸ್ಥಳಕ್ಕೆ ಆಗಮಿಸಿ ಪ್ರತಿಭಟನಾ ನಿರತರ ಜತೆಗೆ ಚಚರ್ಿಸಿ ಮನವೊಲಿಸುವಲ್ಲಿ ಯಶಸ್ವಿಯಾದರು.