ಕೊಪ್ಪಳ 14: ಮತದಾರರ ಪಟ್ಟಿಗಳ ಪರಿಷ್ಕರಣಾ ಕಾರ್ಯದಲ್ಲಿ ಸ್ವೀಕೃತವಾದ ನಮೂನೆಗಳನ್ನು ಭಾರತ ಚುನಾವಣಾ ಆಯೋಗದ ನಿರ್ದೇಶನಗಳನ್ವಯ ನಿಯಮಾನುಸಾರ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಕರ್ನಾಟಕದ ಜಂಟಿ ಮುಖ್ಯ ಚುನಾವಣಾಧಿಕಾರಿ ವಿ. ರಾಘವೇಂದ್ರ ಅವರು ಜಿಲ್ಲೆಯ ಎಲ್ಲಾ ತಹಶೀಲ್ದಾರರಿಗೆ ಸೂಚನೆ ನೀಡಿದರು.
ಭಾರತ ಚುನಾವಣಾ ಆಯೋಗದ ನಿರ್ದೇಶನಗಳನ್ವಯ ಮತದಾರರ ಪಟ್ಟಿ ಪರಿಷ್ಕರಣೆ-2020ರ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು (ಫೆ.14) ಆಯೋಜಿಸಲಾದ ಮತದಾರರ ಪಟ್ಟಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮತದಾರರ ಪಟ್ಟಿ ನವಿಕರಿಸುವ, ಹೊಸ ಹೆಸರುಗಳನ್ನು ಸೇರ್ಪಡಿಸುವ ಸಾಫ್ಟ್ವೇರ್ ತಂತ್ರಜ್ಞಾನದ ಕುರಿತು ತಹಶೀಲ್ದಾರರು ಸಂಪೂರ್ಣ ಜ್ಞಾನ ಹೊಂದಿರಬೇಕು. ಮತದಾನ ಪದ್ದತಿಯು ಇಡೀ ದೇಶದ ಭವಿಷ್ಯವನ್ನು ನಿರ್ಧರಿಸಲಿದೆ. ಆದ್ದರಿಂದ ಅಧಿಕಾರಿಗಳು ಮತದಾರರ ಗುರುತಿನ ಚೀಟಿ ನೋಂದಣಿ, ತಿದ್ದುಪಡಿ, ವಗರ್ಾವಣೆ ಮಾಡುವ ಸಂದರ್ಭದಲ್ಲಿ ಮತದಾರರ ಸೂಕ್ತ ದಾಖಲೆಗಳನ್ನು ಪರಿಶೀಲಿಸಿದ ನಂತರವೇ ಕಾರ್ಯ ರೂಪಕ್ಕೆ ತರಬೇಕು. ಮತದಾರರ ಪಟ್ಟಿಗೆ ಸಂಬಂಧಿಸಿದ ಫಾಮರ್್ ನಂ 6, 7, 8 ಗಳ ಮೂಲ ಮಾಹಿತಿಯನ್ನು ಜನರಿಗೆ ಒದಗಿಸಬೇಕು. ಇವಿಪಿಯನ್ನು ಮಾಡುವ ಉದ್ದೇಶ ಮತದಾರರ ಪಟ್ಟಿ ಸುಧಾರಣೆ ಹಾಗೂ ಅದರಲ್ಲಿನ ಲೋಪದೋಷಳನ್ನು ಸರಿಪಡಿಸಿಕೊಳ್ಳುವುದು, ನಕಲಿ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡವುದೆ ಇದರ ಮುಖ್ಯ ಕಾರ್ಯವಾಗಿರುತ್ತದೆ. ಅಲ್ಲದೆ ವಲಸೆ ಹೋದ ಹಾಗೂ ಮೃತಪಟ್ಟವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಹೊರಹಾಕಬೇಕು ಎಂದರು.
ಅಜರ್ಿ ನಮೂನೆ 6, 7, 8 ಹಾಗೂ ಮತದಾರರ ಪಟ್ಟಿ ವರ್ಗಾವಣೆ, ಟ್ರಾಕ್ ರೋಲ್, ಡಿ,ಎಸ್,ಸಿ, ಇಪಿಕ್, ಕ್ಷೇತ್ರ ಅಧ್ಯಯನ, ಇ.ಆರ್.ಓ ನಿಟ್ಗಳಲ್ಲಿ ಉದ್ಭವವಾಗುವ ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಜಂಟಿ ಮುಖ್ಯ ಚುನಾವಣಾಧಿಕಾರಿಗಳು ಚರ್ಚೆಸಿದರು.
ಮತದಾರರ ಗುರುತಿನ ಚೀಟಿ ತಿದ್ದುಪಡಿ ಮಾಡಿಕೊಳ್ಳುವವರಿಗೆ ಸರಿಯಾದ ಮಾಹಿತಿಯನ್ನು ಸಹಾಯವಾಣಿ ಕೇಂದ್ರದ ಮೂಲಕ ಒದಗಿಸಬೇಕು. ಪೋಲಿಂಗ್ ಸ್ಟೆಶನ್ ಅಪ್ಡೇಟ್ ಮಾಡಿಕೊಳ್ಳುವ ಆಯ್ಕೆಯನ್ನು ಸಾಫ್ಟ್ವೇರ್ ನಲ್ಲಿ ಒದಗಿಸಬೇಕು. ಚುನಾವಣೆ ಸಮಯದಲ್ಲಿ ಮತದಾನಕ್ಕೆ ನಿಗದಿಪಡಿಸುವ ಮತದಾನ ಕೇಂದ್ರ, ಶಾಲೆಯ ವಿವರಗಳನ್ನು ಸರಿಯಾಗಿ ಒದಗಿಸಬೇಕು ಎಂದು ಅಧಿಕಾರಿಗಳು ಹಾಗೂ ತಹಶೀಲ್ದಾರರು ಸಭೆಯಲ್ಲಿ ತಮ್ಮ ಸಲಹೆಗಳನ್ನು ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ, ಉಪವಿಭಾಗಾಧಿಕಾರಿ ಸಿ.ಡಿ. ಗೀತಾ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕುಗಳ ತಹಶಿಲ್ದಾರರು, ಶಿರಸ್ತೆದಾರರು, ಡಾಟ ಎಂಟ್ರಿ ಅಪರೇಟರ್ಗಳು ಉಪಸ್ಥಿತರಿದ್ದರು.