ಸಮಾಜದ ಅಂಕು ಡೊಂಕು ತಿದ್ದುವಲ್ಲಿ ಚೌಡಯ್ಯನವರದು ಪ್ರಮುಖ ಪಾತ್ರ

ಲೋಕದರ್ಶನವರದಿ

ರಾಣೇಬೆನ್ನೂರು14: ಮಕರ ಸಂಕ್ರಾಂತಿಯ ನಿಮಿತ್ಯ ಲಿಂ. ಶ್ರೀ ವಿರುಪಾಕ್ಷ ಒಡೆಯರವರ ಸ್ಮರಣೋತ್ಸವ ಹಾಗೂ ಶರಣ ಶ್ರೀ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವವು ಮಂಗಳವಾರ ತಾಲೂಕಿನ ಚೌಡಯ್ಯದಾನಪುರದಲ್ಲಿ ಶ್ರೀ ಒಡೆಯರ ಚಿತ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಅರ್ಥಪೂರ್ಣವಾಗಿ ನೆರವೇರಿತು.

  ಒಡೆಯರ ಶ್ರೀಗಳ ಮಠದಿಂದ ಶಿವದೇವ ಮುನಿಗಳ ಹಾಗೂ ಶರಣ ಶ್ರೀ ಅಂಬಿಗರ ಚೌಡಯ್ಯನವರ ಭಾವಚಿತ್ರದ ಮೆರವಣಿಗೆಯು ಸಕಲ ವಾಧ್ಯಗಳು ಮತ್ತು ಕುಂಭಮೇಳಗಳೊಂದಿಗೆ ಭಕ್ತರ ಸಮೂಹದಲ್ಲಿ ಪ್ರಾರಂಭಗೊಂಡು ಗ್ರಾಮದ ವಿವಿಧ ಓಣಿಗಳಲ್ಲಿ ಸಂಚರಿಸಿ ತುಂಗಭದ್ರನದಿಯ ತಟದಲ್ಲಿರುವ ಶರಣ ಶ್ರೀ ಅಂಬಿಗರ ಚೌಡಯ್ಯನವರ ಐಕ್ಯಮಂಟಪಕ್ಕೆ ಬಂದು ತಲುಪಿತು. 

  ನಂತರ ಒಡೆಯರ ಚಿತ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, 12ನೇ ಶತಮಾನದ ಬಸವಣ್ಣನವರ ಸಮಕಾಲೀನವರಾದ ಶರಣ ಶ್ರೀ ಅಂಬಿಗರ ಚೌಡಯ್ಯನವರು ಸಮಾಜದ ಅಂಕು ಡೊಂಕು ತಿದ್ದುವಲ್ಲಿ ಪ್ರಮುಖ ಪಾತ್ರವಹಿಸಿದವರು. ಅವರು ನೇರ ದಿಟ್ಟ ಕಠೋರ ವಚನಗಳ ಮೂಲಕ ಸಮಾಜಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಅವರ ಆದರ್ಶಗಳನ್ನು ಜೀವನದಲ್ಲಿ ಸರ್ವರೂ ರೂಢಿಸಿಕೊಂಡು ಸಾಗಬೇಕು ಅಂದಾಗ ಅಂತವರ ಜೀವನ ಪ್ರಾಪ್ತಿಯಾಗಲು ಸಾಧ್ಯ ಎಂದರು.

  ಶರಣರು ಕೇವಲ ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. ಅಂದು ಅವರು ಜಾತೀಯತೆ ಹಾಗೂ ಮೌಢ್ಯತೆಯನ್ನು ಹೋಗಲಾಡಿಸಲು ಶ್ರಮಿಸಿದವರಾಗಿದ್ದರು. ಆದರೆ ಇದೀಗ ಶರಣರು ಜಾತಿಗೆ ಮಾತ್ರ ಸೀಮಿತವಾಗುತ್ತಿರುವುದು ವಿಷಾಧದ ಸಂಗತಿಯಾಗಿದೆ. ನೆಪಕ್ಕೆ ಮಾತ್ರ ಆಚರಣೆಗಳು ನಡೆಯದೆ ಶರಣರ ಆದರ್ಶಗಳನ್ನರಿತು ಜಯಂತಿಗಳನ್ನು ಆಚರಿಸಿದರೆ ಇನ್ನೂ ಅರ್ಥ ಬರುತ್ತದೆ ಎಂದು ಶ್ರೀಗಳು ಮಾಮರ್ಿಕವಾಗಿ ನುಡಿದರು.

  ನಂತರ ಶರಣ ಚೌಡಯ್ಯನವರ ಐಕ್ಯಮಂಟಪಕ್ಕೆ ವಿವಿಧ ಧಾರ್ಮಿಕ  ಪೂಜಾ ಪುನಸ್ಕಾರಗಳನ್ನು ಸಲ್ಲಿಸಿ ಕುಂಭಾಭಿಷೇಕ ಮಾಡಲಾಯಿತು. ನಂತರ ತುಂಗಭದ್ರ ನದಿಯಲ್ಲಿ ಶ್ರೀಗಳು ಶೃಂಗರಿಸಿದ ಬುಟ್ಟಿ ದೋಣಿಯ ಮೂಲಕ ಶ್ರೀಗಳು ತೆರಳಿ ನದಿಯ ಮಧ್ಯ ಭಾಗದಲ್ಲಿರುವ ಈಶ್ವರ ಲಿಂಗುವಿಗೆ ಪೂಜೆ ಸಲ್ಲಿಸಿದರು. ನಂತರ ಕುಂಭ ಹಾಗೂ ಶರಣರ ಭಾವಚಿತ್ರದ ಮೆರವಣಿಗೆಯು ಪುನಃ ಶ್ರೀಗಳ ಮಠಕ್ಕೆ ಬಂದು ತಲುಪಿತು. ಗುಲಬಗರ್ಾದ ತೋಟ್ನಹಳ್ಳಿಯ ಡಾ.ತ್ರಿಮೂತರ್ಿ ಶಿವಾಚಾರ್ಯ ಮಹಾಸ್ವಾಮಿಗಳು ಮತ್ತು ತೆಂಗಳಿಯ ಡಾ.ಶಾಂತಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ನೇತೃತ್ವವಹಿಸಿದ್ದರು. 

  ಅರ್ಚಕ ಗಿರೀಶ ದೀಪಾವಳಿ, ಗ್ರಾಪಂ ಉಪಾಧ್ಯಕ್ಷೆ ರತ್ನಮ್ಮ ಕರಿಗಾರ, ಸದಸ್ಯ ಲಕ್ಷ್ಮಣ ದೀಪಾವಳಿ, ಮುತ್ತಣ್ಣ ಯಲಿಗಾರ, ವೀರಪ್ಪ ಅಕ್ಕೂರ, ಮಹಲಿಂಗಪ್ಪ ಭತ್ತದ, ಬಸಯ್ಯ ಪೂಜಾರ, ಶಂಭುಲಿಂಗಪ್ಪ ಭತ್ತದ, ಚನ್ನವೀರಯ್ಯ ಪೂಜಾರ, ಗುಡ್ಡು ಭತ್ತದ, ವಿರುಪಾಕ್ಷ ಆನಿಶೆಟ್ರ, ಪ್ರಶಾಂತಯ್ಯ ಹಾಲ್ವಡಿಮಠ, ಸಿದ್ದಪ್ಪ ದೀಪಾವಳಿ, ಜಗದೀಶ ಭತ್ತದ, ವೀರಣ್ಣ ಬಡಿಗೇರ, ದೇವರಾಜ ಆನಿಶೆಟ್ರ, ಸಿದ್ದಪ್ಪ ನಾಗನೂರ,  ಸೇರಿದಂತೆ ಮಹಿಳೆಯರು ಭಕ್ತರು ಮತ್ತಿತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆಯುದ್ದಕ್ಕೂ ಶ್ರೀ ಬಸವೇಶ್ವರ ಭಜನಾ ಸಂಘದವರು ಶರಣ ಶ್ರೀ ಅಂಬಿಗರ ಚೌಡಯ್ಯನವರ ವಚನಗಳನ್ನು ಹಾಡಿದರು. ಸಮ್ಮಾಳ ನಂದಿಕೋಲು ಸೇರಿದಂತೆ ವಿವಿಧ ವಾಧ್ಯಮೇಳಗಳು ಮೆರವಣಿಗೆಗೆ ಮೆರಗು ತಂದವು. ನಂತರ ಶ್ರೀಗಳ ಮಠದಲ್ಲಿ ಮಹಾಪ್ರಸಾದ ನೆರವೇರಿತು.