ಗಿಣಗೇರಿಯಲ್ಲಿ ದತ್ತಿ ಉಪನ್ಯಾಸ ಹಾಗೂ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

Charitable Lecture and Charitable Prize Giving Program at Ginageri

ಗಿಣಗೇರಿಯಲ್ಲಿ ದತ್ತಿ ಉಪನ್ಯಾಸ ಹಾಗೂ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ  

ಕೊಪ್ಪಳ 18: ಜಿಲ್ಲಾ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ದಿ 20ರಂದು ಮಧ್ಯಾಹ್ನ 2.30 ಕ್ಕೆ ಸರ್ಕಾರಿ ಪ್ರೌಢಶಾಲೆ ಗಿಣಗೇರಿ ಶಾಲೆಯಲ್ಲಿ ಆಯೋಜಿಸಿರುವ ದಿ. ಕೆಂಚಪ್ಪ ಬಸಪ್ಪ ದಿವಟರ್, ದಿ . ಯಮನಪ್ಪ ನಿಂಗಪ್ಪ ಮುರಳಿ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಜಿಲ್ಲಾ ಕಸಾಪ ಅಧ್ಯಕ್ಷ ಶರಣೇಗೌಡ ಪಾಟೀಲ್ ಹೇರೂರು ಉದ್ಘಾಟನೆ ಮಾಡಲಿದ್ದು, ಅಧ್ಯಕ್ಷತೆಯನ್ನು ರವಿಚಂದ್ರ ಗೋಡೆಕಾರ್ ಅಧ್ಯಕ್ಷರು ಎಸ್ ಡಿ ಎಂ ಸಿ ಸರ್ಕಾರಿ ಪ್ರೌಢಶಾಲೆ ಗಿಣಗೇರಿ, ವಿಶೇಷ ಉಪನ್ಯಾಸವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೆರೂರು ಪ್ರಾಂಶುಪಾಲರಾದ ಮಲ್ಲಪ್ಪ ಹೊಸೂರು ಅವರು ಸಾಹಿತ್ಯಿಕ ಹಾಗೂ ಸಾಮಾಜಿಕ ಜವಾಬ್ದಾರಿ ವಿಷಯ ಕುರಿತು ಮಾತನಾಡುವರು.  

ಅಳವಂಡಿಯ ನೀಲಪ್ಪ ಹಕ್ಕಂಡಿ ಶಿಕ್ಷಕರು ವಚನ ಸಾಹಿತ್ಯ ಕುರಿತು ಉಪನ್ಯಾಸ ನೀಡಲಿದ್ದಾರೆ.  2024ರ ಅವಧಿಯ ದಿ. ಮರಿಗೌಡ ಮಲ್ಲನಗೌಡರ ಸ್ಮಾರಕ ದತ್ತಿ ಪ್ರಶಸ್ತಿ ವಿಜೇತರಾದ ಅಕ್ಬರ್ ಕಾಲಿಮಿರ್ಚಿ, ಹಾಗೂ ದಿ.ಅಂದಮ್ಮ ಮರಿಗೌಡ ಮಲ್ಲನಗೌಡರ ಸ್ಮಾರಕ ದತ್ತಿ ಪ್ರಶಸ್ತಿಗೆ ಆಯ್ಕಯಾದ ಅನ್ನಪೂರ್ಣ ಪದ್ಮಸಾಲಿ ಅವರಿಗೆ  ಪ್ರಶಸ್ತಿ ಪ್ರದಾನ ಮಾಡಲಾಗುವುದು.  ಸಂದರ್ಭದಲ್ಲಿ ರಾಮಣ್ಣ ಅಲ್ಮಸೀಕೇರಿ ಅವರ ಕವಿತೆ ರಾಯಚೂರು ವಿಶ್ವವಿದ್ಯಾಲಯದ ಪಠ್ಯ ಪುಸ್ತಕಕ್ಕೆ ಆಯ್ಕೆಯಾದ ಪ್ರಯುಕ್ತ, ಸದಾನಂದಕುಮಾರ್ ಜಿ.ವಿ., ಭೀಮರಾಯ ಕೆ. ಅವರಿಗೆ ಗೌರವ ಸನ್ಮಾನ ನಡೆಯಲಿದೆ.  

ದತ್ತಿ ದಾನಿಗಳಾದ ಹಿರಿಯ ಸಾಹಿತಿ,ಡಾ. ಮಹಾಂತೇಶ ಮಲ್ಲನಗೌಡರ, ಮಂಜುನಾಥ ದಿವಟರ್ ವಿರೂಪಾಕ್ಷಪ್ಪ ಮುರಳಿ, ಕೇಂದ್ರ ಕಸಾಪ ಸಂಘ ಸಂಸ್ಥೆಗಳ ಪ್ರತಿನಿಧಿ ನಬಿಸಾಬ ಕುಷ್ಟಗಿ, ಸಂತೋಷ ದೇಶಪಾಂಡೆ ಸಂಪಾದಕರು ಕರುನಾಡ ಬೆಳಗು ದೈನಿಕ ಕೊಪ್ಪಳ, ಸಹಾಯಕ ಪ್ರಾಧ್ಯಾಪಕ ನಿಂಗಪ್ಪ ಕಂಬಳಿ ,  ಕೊಪ್ಪಳ ಜಿಲ್ಲಾ ಕಸಾಪ ಕಾರ್ಯದರ್ಶಿ ಚನ್ನಬಸಪ್ಪ ಕಡ್ಡಿಪುಡಿ, ಶೇಖರಗೌಡ ಪಾಟೀಲ್, ಗೌರವ ಕೋಶಾಧ್ಯಕ್ಷ ರಮೇಶ್ ಕುಲಕರ್ಣಿ, ಸಂಘಟನಾ ಕಾರ್ಯದರ್ಶಿ ರಮೇಶ್ ತುಪ್ಪದ, ಸಂಘ ಸಂಸ್ಥೆಗಳ ಪ್ರತಿನಿಧಿ ತೋಟಪ್ಪ ಕಾಮನೂರ, ಪ.ಜಾತಿ, ಪ.ಪಂ ಪ್ರತಿನಿಧಿ ಹೇಮಣ್ಣ ಕವಲೂರು, ಕೊಪ್ಪಳ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಸೋಮನಗೌಡ ಹೊರಗನಾಳ, ಸೋಮಲಿಂಗಪ್ಪ ಬೆಣ್ಣೆ, ಬಸವರಾಜ ಶಿರಗುಂಪಿ ಶೆಟ್ಟರ್, ಶಿವಕುಮಾರ ಹೆಚ್‌.ಆರ್‌. ಅಳವಂಡಿ ಹೋಬಳಿ ಘಟಕದ ಅಧ್ಯಕ್ಷರಾದ ಸುರೇಶ್ ಸಂಗರಡ್ಡಿ ಉಪಸ್ಥಿತರಿರುವ ಈ ಕಾರ್ಯಕ್ರಮದ ಆಶಯ ನುಡಿ ಡಾ.ಪಿ.ಎಂ.ಬಸವರಾಜ ವದಗನಾಳ ನುಡಿಯುವರು, ಕಾರ್ಯಕ್ರಮವನ್ನು ಬಸವರಾಜ ಗದ್ದಿ ನಿರೂಪಿಸುವರೆಂದು ಕೊಪ್ಪಳ ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷರಾದ ರಾಮಚಂದ್ರಗೌಡ ಗೊಂಡಬಾಳ ಪತ್ರಿಕೆಗೆ ತಿಳಿಸಿದ್ದಾರೆ.