ಗ್ರಾಮಪಂಚಾಯತ ಹಣ ಸದಸ್ಯರಿಂದ ದುರ್ಬಳಕೆಯ ಆರೋಪ ಪರಿಶೀಲಿಸಿ ತಪ್ಪಿತಸ್ಥರಿಗೆ ಸೂಕ್ತ ಕ್ರಮ: ಜಿಪಂ ಸಿಎಓ ಬನಶಂಕರಿ

ಉಗರಗೋಳ(ತಾ.ಸವದತ್ತಿ) 12: ಕೆಲ ದಿನಗಳ ಹಿಂದೆ ಸವದತ್ತಿ ತಾಲೂಕಿನ ಉಗರಗೋಳ ಗ್ರಾಮ ಪಂಚಾಯತ ವ್ಯಾಪ್ತಿಯ ಸದಸ್ಯರು, ಅಭಿವೃದ್ದಿ ಅಧಿಕಾರಿ ಮತ್ತು ಅಧ್ಯಕ್ಷರ ಮೇಲೆ ದಬ್ಬಾಳಿಕೆ ಮಾಡಿ ಮಹಾತ್ಮ ಗಾಂಧಿ ರಾಷ್ಟ್ರಿಯ ಗ್ರಾಮಿಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿನ ದನದ ಕೊಟ್ಟಿಗೆಗಳು ಮತ್ತು ವಸತಿ ಯೋಜನೆಯ ಜನತಾ ಮನೆಗಳನ್ನು ತಮ್ಮ ಹೆಸರಿಗೆ ಮಾಡಿಸಿಕೊಂಡು ಪ್ರತಿ ಮನೆಗೆ 40 ಸಾವಿರ ಹಣ ಪಡೆದು  ಗ್ರಾಮ ಪಂಚಾಯತಿ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಸಾರ್ವಜನಿಕರು ದೂರು ನೀಡಿದ್ದರು.

ಸಾರ್ವಜನಿಕ ದೂರಿನ ಮೇರೆಗೆ ತಾಲೂಕಿನ ಉಗರಗೋಳ ಗ್ರಾಮ ಪಂಚಾಯತಿಗೆ ಸೋಮವಾರ ಭೇಟಿ ನೀಡಿದ ಜಿಲ್ಲಾ ಪಂಚಾಯತ ಮುಖ್ಯ ಲೆಕ್ಕಾಧಿಕಾರಿ ಬನಶಂಕರಿ ದೂರುಗಳನ್ನು ಪರಿಶೀಸಿಲಿಸಿದರು.


ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಅನುದಾನದ ದುರ್ಬಳಕೆ, ವಸತಿ ಯೋಜನೆ ಮತ್ತು ಎಂ ಜಿ ಎನ್ ಆರ್ ಜಿ ಎ ಯೋಜನೆಯಲ್ಲಿ ಅವ್ಯವಹಾರಗಳು ನಡೆದಿವೆ ಎಂದು ಸಾರ್ವಜನಿಕರ  ದೂರಿನ ಆಧಾರದ ಮೇಲೆ ಪರಿಶೀಲನೆ ನಡೆಸಲಾಗಿದೆ. 

ಈಗಾಗಲೇ ಕೆಲ ಕಡಿತಗಳನ್ನು ತಪಾಸಿಸಲಾಗಿದೆ, ಇನ್ನೂ ಕೆಲವು ವಿಷಯಗಳ ಬಗ್ಗೆ ಆಳವಾಗಿ ತಪಾಸಣೆ ನಡೆಸಬೇಕಿದೆ, ಕಾರಣ ತಪ್ಪಿತಸ್ಥರ ಮೇಲೆ ಸೂಕ್ತ ಜರುಗಿಸಲಾಗುವದೆಂದು ತಿಳಿಸಿದರು.


ಪಿಡಿಓ ಎಸ್ ಎಸ್ ಹಂದ್ರಾಳ, ವಾಯ್ ವಾಯ್ ಕಾಳಪ್ಪನವರ, ಸಿ ಎನ್ ಹಳ್ಳದ, ನೇಹರು ಬಡೆಪ್ಪನವರ, ಎಸ್ ಎಮ್ ನರಗುಂದ, ವಾಯ್ ಕೆ ಕುಳ್ಳೂರ, ಇನ್ನಿತರರು ಇದ್ದರು.