ಶ್ರೀರಾಮನವಮಿ ನಿಮಿತ್ತ ಶ್ರೀರಾಮನಾಮ ಜಪ ಹಾಗೂ ರಾಮರಾಜ್ಯಕ್ಕಾಗಿ ಪ್ರತಿಜ್ಞೆ
Chanting of Sri Ramanama and vowing for Rama Rajya on the occasion of Sri Ram Navami
ಮಹಾಲಿಂಗಪುರ 31: ಶ್ರೀರಾಮನವಮಿ ನಿಮಿತ್ತ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಮಹಾಲಿಂಗಪುರದ ಸಿದ್ಧಾರೂಢ ಮಠದಲ್ಲಿ ಮತ್ತು ಇನ್ನೂ ಹಲವು ದೇವಸ್ಥಾನಗಳಲ್ಲಿ ಶ್ರೀ ರಾಮ ನಾಮಜಪ, ಪ್ರಾರ್ಥನೆ ಹಾಗೂ ರಾಮರಾಜ್ಯ ಸ್ಥಾಪನೆಗಾಗಿ ಪ್ರತಿಜ್ಞೆ ಮಾಡಿ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಮತ್ತು ಧರ್ಮಪ್ರೇಮಿಗಳು ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ಭಾಗವಹಿಸಿ ಶ್ರೀರಾಮನ ನಾಮಜಪ ಮಾಡಿದರು. ಸಮಾಜದಲ್ಲಿ ಧರ್ಮ, ಸತ್ಪ್ರವೃತ್ತಿ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಬಲಪಡಿಸುವ ಸಂಕಲ್ಪವನ್ನು ಎಲ್ಲರೂ ಕೈಗೊಂಡರು.ಈ ಸಂದರ್ಭದಲ್ಲಿ ರಾಮರಾಜ್ಯ ಸ್ಥಾಪನೆಗೆ ಅಗತ್ಯವಾದ ಸತ್ಸಂಕಲ್ಪಗಳನ್ನು ಪಾಲಿಸುವುದಾಗಿ ಪ್ರತಿಜ್ಞೆ ಮಾಡಲಾಯಿತು.
ಶ್ರೀರಾಮನವಮಿಯು ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ಆಚರಿಸಲಾಗುತ್ತದೆ. ಈ ದಿನವನ್ನು ಶ್ರೀವಿಷ್ಣುವಿನ ಏಳನೇ ಅವತಾರವಾದ ಶ್ರೀರಾಮನ ಜನ್ಮದಿನವೆಂದು ಭಕ್ತರು ಪರಿಗಣಿಸುತ್ತಾರೆ. ರಾಮನು ಸತ್ಯ, ಧರ್ಮ, ಕರ್ತವ್ಯನಿಷ್ಠೆ ಮತ್ತು ಆದರ್ಶ ಜೀವನದ ಪ್ರತೀಕವಾಗಿದ್ದು, ರಾಮಾಯಣದಲ್ಲಿ ಶ್ರೀರಾಮನ ಜೀವನ ಮೌಲ್ಯಗಳು ವಿವರಿಸಲ್ಪಟ್ಟಿವೆ.ರಾಮರಾಜ್ಯವು ನ್ಯಾಯ, ಸಮಾನತೆ ಮತ್ತು ಸುಖಶಾಂತಿಯ ಸಂಕೇತವಾಗಿದ್ದು, ಇಂತಹ ಆದರ್ಶ ಸಮಾಜ ನಿರ್ಮಾಣವಾಗಲು ಶ್ರೀ ರಾಮ ರಾಜ್ಯದಂತಹ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಪ್ರಾರ್ಥನೆ ಮಾಡಲಾಯಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 