ಚನ್ನಬಸು ಹುರಕಡ್ಲಿಯವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರದಾನ
ಮಹಾಲಿಂಗಪುರ : ಯುವಕರು ಧಾರ್ಮಿಕ ಕಾರ್ಯದಲ್ಲಿ ತೊಡಗುತ್ತಿರುವುದು ಶ್ಲಾಘನೀಯ ಸಂಗತಿ ಎಂದು ಡಾ.ಎ.ಆರ್.ಬೆಳಗಲಿ ಹೇಳಿದರು.
ಸ್ಥಳೀಯ ಬಸವನಗರದ ಮಾರುತೇಶ್ವರ ಕಾರ್ತೀಕೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜ ಸೇವಕ ಚನ್ನಬಸು ಹುರಕಡ್ಲಿಯವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡುವ ಮೂಲಕ ಸಂಘಟಕರು ಶ್ರೇಷ್ಠ ಕಾರ್ಯ ಮಾಡಿದ್ದಾರೆ ಎಂದರು.
ಪ್ರಶಸ್ತಿ ಪುರಸ್ಕೃತ ಚನ್ನಬಸು ಹುರಕಡ್ಲಿ ಮಾತನಾಡಿ ಸಂಘಟರಿಗೆ ಕೃತಜ್ಞತೆ ಸಲ್ಲಿಸಿದರು. ಮಾಜಿ ಸೈನಿಕ ಶ್ರೀಶೈಲ ಭಜಂತ್ರಿ, ಉದ್ಯಮಿ ಚನ್ನಯ್ಯಾ ಚಟ್ಟಿಮಠ ಮಾತನಾಡಿದರು.
ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರದಾನ : ನಿರಂತರ 16 ವರ್ಷಗಳಿಂದ ಸಮಾಜ ಸೇವೆ ಮಾಡುತ್ತಾ ತಮ್ಮ ಸ್ವಂತ ಖರ್ಚಿನಲ್ಲಿ ಬಡವರಿಗೆ ಉಚಿತ ಕೃತಕ ಕೈಕಾಲು ಜೋಡಣೆ, ಬಗಲು ಬಡಿಗೆ ವಿತರಣೆ, ನೇತ್ರ ತಪಾಸಣೆ, ನೇತ್ರ ಚಿಕಿತ್ಸೆ, ಕನ್ನಡಕ ವಿತರಣೆ, ಕಿವಿ ತಪಾಸಣೆ ಮತ್ತು ಶ್ರವಣ ಯಂತ್ರ ವಿತರಣೆ ದಂತ ಚಿಕಿತ್ಸೆ, ಹಲ್ಲಿನ ಸೆಟ್ ವಿತರಣೆ, ಬಡ ಮಹಿಳೆಯರಿಗೆ ಉಚಿತ ಸ್ವಯಂ ಉದ್ಯೋಗ ತರಬೇತಿ, ರಕ್ತದಾನ ಶಿಬಿರ ಆಯೋಜನೆ, ಸಂಧಿವಾತ, ತಲೆ, ಸೊಂಟ, ಬೆನ್ನು, ಕೈಕಾಲು ನೋವುಗಳಿಗೆ ಮಸಾಜ್ ಶಿಬಿರ ಹೀಗೆ ಬಡ ರೋಗಿಗಳ ಸರ್ವ ಸಂಕಷ್ಟಕ್ಕೂ ಸ್ಪಂದಿಸಿ ಹಾಗೂ ಕೊರೋನಾದಂತಹ ಸಂದಿಗ್ಧತೆಯಲ್ಲಿ ಆಹಾರ ಕಿಟ್ ವಿತರಣೆ ಹೀಗೆ ಸದಾ ಸಮಾಜಮುಖಿ ಕೆಲಸ ಮಾಡುತ್ತಿರುವ ಸ್ಥಳೀಯ ಬಸವನಗರ ನಿವಾಸಿ, ಪುರಸಭಾ ಮಾಜಿ ಉಪಾಧ್ಯಕ್ಷ ಚನ್ನಬಸು ಹುರಕಡ್ಲಿಯವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪುರಸಭಾ ಆಧ್ಯಕ್ಷ ಯಲ್ಲನಗೌಡ ಪಾಟೀಲ ಅಧ್ಯಕ್ಷತೆ ವಹಿಸಿ, ಡಾ.ಎ.ಆರ್.ಬೆಳಗಲಿ, ಡಾ.ಮಂಜುನಾಥ ಚನ್ನಾಳ, ಡಾ.ಎಂ.ಆಕಳ್ಯಾಗೋಳ ಉದ್ಘಾಟಿಸಿದರು.
ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕಾ ಅಧ್ಯಕ್ಷ ಬಲವಂತಗೌಡ ಪಾಟೀಲ, ಮುಖಂಡರಾದ ಶೇಖರ ಉತ್ತೂರ, ಹುಚ್ಚೇಶ ವಡ್ಡರ, ನೇತಾಜಿ ಶಿಂಧೆ, ರಾಮಚಂದ್ರ ಮಾದರ, ಆಯುಷ ಮಮದಾಪುರ, ಗೋಪಾಲ ಮಡ್ಡಗೋಳ, ಸದಾಶಿವ ವಡ್ಡರ, ಕಆಂತು ಪರೀಟ, ಅರ್ಜುನ ದೊಡಮನಿ, ಪರಶುರಾಮ ಮೇತ್ರಿ, ಡಾ.ಎಂ.ಪೂಜೇರಿ, ಲಕ್ಷ್ಮಣ ಮಾಂಗ ಇತರರಿದ್ದರು.
ಬಸವರಾಜ ಮಾವಿನಹಿಂಡಿ ಸ್ವಾಗತಿಸಿ, ಪತ್ರಕರ್ತ ನಾರನಗೌಡ ಉತ್ತಂಗಿ ನಿರೂಪಿಸಿದರು. ಸಂಗೀತ ರಸಮಂಜರಿ ಮತ್ತು ಹಾಸ್ಯ ಕಾರ್ಯಕ್ರಮ ಜರುಗಿತು.
ಫೋಟೋ : 08 ಎಮ್‌ಎಲ್‌ಪಿ 02 : ಸಮಾಜ ಸೇವಕ ಚನ್ನಬಸು ಹುರಕಡ್ಲಿಯವರಿಗೆ ಸಮಾ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.