ಚಂಡಿಕಾ, ರುದ್ರ ಹೋಮಕ್ಕೆ ಶ್ರೀಶೈಲಶ್ರೀ ಚಾಲನೆ
ಮಾಂಜರಿ
11: ಸಮೀಪದ ಸುಕ್ಷೇತ್ರ ಯಡೂರ ಗ್ರಾಮದಲ್ಲಿ ನವರಾತ್ರಿ
ಉತ್ಸವದ ಅಂಗವಾಗಿ ಇಂದಿನಿಂದ 9 ದಿನಗಳ ಕಾಲ ಜರುಗಲಿರುವ ಚಂಡಿಕಾ
ಮತ್ತು ರುದ್ರ ಹೋಮಕ್ಕೆ ಶ್ರೀಶೈಲ ಜಗದ್ಗುರುಗಳಾದ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ
ಶಿವಾಚಾರ್ಯ ಮಹಾಸ್ವಾಮಿಗಳು ಪೂಜೆ ಸಲ್ಲಿಸುವುದರ ಮೂಲಕ
ಬುಧವಾರಂದು ಚಾಲನೆ ನೀಡಿದರು.
ಚಂಡಿಕಾ ಹೋಮ ಇಂದಿನಿಂದ ದಿ.
18ರವರಗೆ ಮುಂ. 7ರಿಂದ 10.30 ಗಂಟೆಯವರಗೆ ಮತ್ತು ರುದ್ರ ಹೋಮ ಸಾಯಂಕಾಲ 6.15 ರಿಂದ
7.20 ರವರಗೆ ಜರುಗಲಿದೆ ಎಂದು ಮಠದ ವ್ಯವಸ್ಥಾಪಕ
ಅಡವಯ್ಯಾ ಅರಳಿಕಟ್ಟಿಮಠ ತಿಳಿಸಿದ್ದಾರೆ.
ಭಧ್ರಕಾಳಿ ಮಾತೆಗೆ ನವರಾತ್ರಿ ಉತ್ಸವದ ಅಂಗವಾಗಿ 9 ದಿನಗಳಕಾಲ ಬಗೆಬಗೆಯ ಅಲಂಕಾರಮಾಡಿ ಶೃಂಗರಿಸುತ್ತೇವೆ. ನಿತ್ಯ ಒಂದೊಂದು ರೀತಿಯ ಅಲಂಕಾರದ ಮೂಲಕ ಒಂಬತ್ತು ದಿನಗಳಕಾಲ
ದೇವಿಯನ್ನು ವಿಶೇಷವಾಗಿ ಅಲಂಕರಿಸಲಾಗುತ್ತದೆ. ಮಾತೆಗೆ
ಹಣ್ಣಿನ ಅಲಂಕಾರ, ಬೆಣ್ಣೆಯ ಅಲಂಕಾರ, ಆಭರಣದ ಅಲಂಕಾರ, ಕವಡೆಯ ಅಲಂಕಾರ, ಹೂವಿನ ಅಲಂಕಾರ, ಬಟ್ಟೆಯ ಅಲಂಕಾರ, ನವಿಲು ಗರಿಯ ಅಲಂಕಾರ ಮತ್ತು
ಅರಿಸಿನ ಕುಂಕುಮ ಅಲಂಕಾರ ಹೀಗೆ ಅಲಂಕಾರ ವಿಶೇಷ
ಸೇವೆಗಳು ನಡೆಯುತ್ತವೆ. ನವರಾತ್ರಿ ಸಂದರ್ಭದಲ್ಲಿ ಪ್ರತಿನಿತ್ಯ ಚಂಡಿಕಾ ಹೋಮ ಮತ್ತು ಸಂಜೆ
ರುದ್ರಹೋಮಗಳು ನಡೆಯುತ್ತದೆ. ಶ್ರೀಶೈಲ ಜಗದ್ಗುರುಗಳಾದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ
ಶಿವಾಚಾರ್ಯ ಮಹಾಸ್ವಾಮಿಗಳು ಏಳು ದಿನಗಳ ಕಾಲ
ಮೌನ ವೃತ ಕೈಗೊಳ್ಳುತ್ತಾರೆ ಎಂದು
ಹೇಳಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 