ಚೆನ್ನೈ, ಆಗಸ್ಟ್ 20 ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ- ಇಸ್ರೋ ಮಂಗಳವಾರ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ. ಜುಲೈ 22 ರಂದು ಶ್ರೀಹರಿಕೋಟಾ ಉಡಾವಣಾ ನೆಲೆಯಿಂದ ಉಡಾಯಿಸಲಾದ ಚಂದ್ರಯಾನ -2 ಗಗನ ನೌಕೆ ಇಂದು ಬೆಳಗ್ಗೆ ಚಂದ್ರನ ಕಕ್ಷೆ ಪ್ರವೇಶಿಸಿದ್ದು, ಸೆಪ್ಟಂಬರ್ 7 ರಂದು ಚಂದ್ರನ ದಕ್ಷಿಣ ದೃವ ಪ್ರವೇಶಿಸಲಿದೆ. 30 ದಿನಗಳ ನಂತರ ನೌಕೆಯನ್ನು ಭೂಮಿಯ ಕಕ್ಷೆಯಿಂದ ಚಂದ್ರನ ಕಕ್ಷೆಗೆ ಏರಿಸುವ ಕೆಲಸ ಬೆಳಗ್ಗೆ 09.2ಕ್ಕೆ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಇಸ್ರೋ ಹೇಳಿದೆ. ವಿಕ್ರಂ ಲ್ಯಾಂಡರ್ ಸೆಪ್ಟಂಬರ್ 2 ರಂದು ನೌಕೆಯಿಂದ ಬೇರ್ಪಡಲಿದ್ದು, ಸೆಪ್ಟಂಬರ್ 7 ರಂದು ಚಂದ್ರನ ಅಂಗಳಕ್ಕೆ ಇಳಿಯಲಿದೆ.