ಚೆನ್ನೈ, ಜುಲೈ 26 ಇಸ್ರೋ ಸಂಸ್ಥೆಯ ಮಹತ್ವಾಕಾಂಕ್ಷೆಯ ಚಂದ್ರಯಾನ -2 ಉಪಗ್ರಹದ ಭೂಮಿಯ ಕಕ್ಷೆಯನ್ನು ಮತ್ತಷ್ಟು ಎತ್ತರಕ್ಕೆ ಯಶಸ್ವಿಯಾಗಿ ಏರಿಸಲಾಗಿದೆ ಎಂದು ಇಸ್ರೋ ತಿಳಿಸಿದೆ.
ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಇಸ್ರೋ, ಶುಕ್ರವಾರ ಮುಂಜಾನೆ 1.08ರ ವೇಳೆಯಲ್ಲಿ ಕಕ್ಷೆಯನ್ನು ಏರಿಸುವ ಯತ್ನ ಯಶಸ್ವಿಯಾಗಿದೆ. ಈ ಕಕ್ಷೆ 251*54829 ಕಿಮೀ ತಲುಪಿದೆ ಎಂದು ತಿಳಿಸಿದೆ.
ಮೂರನೇ ಕಕ್ಷೆಯನ್ನು ಏರಿಸುವ ಪ್ರಕ್ರಿಯೆ ಜುಲೈ 29ರಂದು ಮಧ್ಯಾಹ್ನ 2.30ರಿಂದ 3.30ರೊಳಗೆ ನಡೆಯಲಿದೆ.
ಮೊದಲ ಕಕ್ಷೆಯನ್ನು ಬುಧವಾರ ಏರಿಸಲಾಗಿದ್ದು, ಇದು ಉಪಗ್ರಹವನ್ನು 230*45163 ಕಿಮೀ ಎತ್ತರಕ್ಕೆ ಕೊಂಡೊಯ್ದಿತ್ತು.