ಲಕ್ನೋ, ಆ 31 ದೆಹಲಿ ಪಬ್ಲಿಕ್ ಶಾಲೆಯ 10 ನೇ ತರಗತಿ ವಿದ್ಯಾರ್ಥಿನಿ ರಾಶಿ ವರ್ಮಾ ಅವರು ಚಂದ್ರನ ಅಂಗಳದಲ್ಲಿ ಚಂದ್ರಯಾನ - 2 ನೌಕೆ ಇಳಿಯುವುದನ್ನು ವೀಕ್ಷಿಸಲು ದೇಶಾದ್ಯಂತದ 60 ಮಕ್ಕಳಲ್ಲಿ ಆಯ್ಕೆಯಾಗಿರುವುದು ಉತ್ತರ ಪ್ರದೇಶವನ್ನು ಹೆಮ್ಮೆಯಿಂದ ಬೀಗುವಂತೆ ಮಾಡಿದೆ.
ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಆಕೆ ಭಾಗಿಯಾಗಲಿದ್ದಾರೆ.
ಸೆಪ್ಟೆಂಬರ್ 7 ರಂದು ಬೆಳಿಗ್ಗೆ 01:55 ಕ್ಕೆ ಪಿಎಂ ನರೇಂದ್ರ ಮೋದಿಯವರೊಂದಿಗೆ ಚಂದ್ರಯಾನ ನೌಕೆ ದಕ್ಷಿಣ ದೃವದಲ್ಲಿ ಇಳಿಯುವುದನ್ನು ವೀಕ್ಷಿಸಲು ಇಬ್ಬರು ವಿದ್ಯಾರ್ಥಿಗಳನ್ನು ರಾಜ್ಯದಿಂದ ಆಯ್ಕೆ ಮಾಡಿದ್ದರೂ ಆಗಸ್ಟ್ 10 ರಿಂದ 25 ರವರೆಗೆ ನಡೆಸಿದ ಆನ್ಲೈನ್ ವಿಜ್ಞಾನ ರಸಪ್ರಶ್ನೆಯ ಹಲವು ಸುತ್ತುಗಳ ನಂತರ ರಾಶಿ ವರ್ಮಾ ಎಂಬ 8 ನೇ ತರಗತಿ ವಿದ್ಯಾರ್ಥಿ ಅಂತಿಮವಾಗಿ ಆಯ್ಕೆಯಾಗಿದ್ದಾರೆ.
ಈ ಕುರಿತು ಮಾಧ್ಯಮ ಜೊತೆ ಮಾತನಾಡಿದ ರಾಶಿ, ಭವಿಷ್ಯದಲ್ಲಿ ನಾನು ಐಎಎಸ್ ಅಧಿಕಾರಿಯಾಗಬೇಕೆಂದು ಕನಸು ಕಂಡಿದ್ದೇನೆ ನನಗೆ ಅವಕಾಶ ಸಿಕ್ಕರೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತನಾಡಲು ಬಯಸುವುದಾಗಿ ಹೇಳಿಕೊಂಡಿದ್ದಾರೆ .
ರಾಶಿ ಅವರಲ್ಲದೆ, ಒಡಿಶಾ, ಜಾರ್ಖಂಡ್ ಮತ್ತು ಮೇಘಾಲಯದ ಮೂವರು ವಿದ್ಯಾರ್ಥಿಗಳು ಬೆಂಗಳೂರಿನ ಈ ಅಪರೂಪದ ಕಾರ್ಯಕ್ರಮಕ್ಕೆ ನೇರ ಸಾಕ್ಷಿಯಾಗಲಿದ್ದಾರೆ.